ಬಳ್ಳಾರಿ: ಟೈಮ್ ಪಾಸ್ ರಾಜಕಾರಣಿ ಜೆಡಿಎಸ್ ಗೆ ಶಿಫ್ಟ್ ?

ಬಳ್ಳಾರಿ: ಟೈಮ್ ಪಾಸ್ ರಾಜಕಾರಣಿ ಜೆಡಿಎಸ್ ಗೆ ಶಿಫ್ಟ್ ?
ಅನಿಲ್ ಲಾಡ್

ಬಳ್ಳಾರಿ: ಈ ರಾಜಕಾರಣನೇ ಹಾಗೆ ಯಾರು ಯಾವಾಗ ಯಾವ ಪಕ್ಷ ಸೇರ್ತಾರೋ ಹೇಳೋಕಾಗಲ್ಲ. ತಮ್ಮ ಸ್ವರ್ಥ ಸಾಧನೆ ಈಡೇರಿಲ್ಲ ಅಂದರೆ, ಪಕ್ಷದಿಂದ ಪಕ್ಷಕ್ಕೆ ಜಿಗಿಯೋದು ಸಾಮಾನ್ಯ. ಅದೇ ರೀತಿ ಇಲ್ಲೋಬ್ಬ ಪಕ್ಕ ಟೈಮ್ ಪಾಸ್ ರಾಜಕಾರಣಿಯೊಬ್ಬರು ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಜಿಗಿಯೋಕೆ ವೇದಿಕೆ ಸಿದ್ದ ಮಾಡಿಕೊಳ್ಳುತ್ತಿದ್ದಾರೆ. ಅರೇ ಯಾರು ಅವರು, ಅಂತೀರಾ? ಅವರೇ ನಮ್ಮ ಲಾಡ್ ಸಾಹೇಬ್ರು ಕಣ್ರೀ, ಹೌದು! ಲಾಡ್, ಅನಿಲ್ ಲಾಡ್, ಬಳ್ಳಾರಿ ನಗರದ ಮಾಜಿ ಶಾಸಕ ಅನಿಲ್ ಹೆಚ್.ಲಾಡ್ 2008 ರಲ್ಲಿ ರೆಡ್ಡಿಗಳ ವಿರುದ್ದ ತೊಡೆತಟ್ಟಿ ಹೊಂಕರಿಸಿದ್ದ ಅನಿಲ್ ಲಾಡ್ 2013 ರಲ್ಲಿ ಗೆದ್ದು ಒಮ್ಮೆ ಶಾಸಕರಾಗ್ತಾರೆ. ಅಲ್ಲಿಯವರೆಗೂ ಲಾಡ್ ಅಂದರೆ, ಒಂದು ಗತ್ತು, ಹಾಗೆ ಪಕ್ಕ ಪೊಲಿಟಿಶಿಯನ್ ಆಗಿದ್ದರು. 2018 ರ ಚುನಾವಣೆಯನ್ನ ಬೇಜವಾಬ್ದಾರಿಯಿಂದ ಮಾಡಿ ಸೋಮಶೇಖರ್ ರೆಡ್ಡಿಗೆ ಶರಣಾಗಿ ಊರು ಬಿಟ್ಟ ಲಾಡ್, ಮೊನ್ನೆ ಮೊನ್ನೆಯಷ್ಟೆ ಬಳ್ಳಾರಿಯಲ್ಲಿ ಮನೆ ಮಾಡಿದ್ದೇನೆ ಎಂದು ಆ ಮನೆಯಲ್ಲಿ ಟೈಮ್ ಪಾಸ್ ಪ್ರಸ್ ಮೀಟ್ ಮಾಡಿ ನಾಪತ್ತೆಯಾಗಿದ್ದ ಲಾಡ್, ಪುನ: ಮರ್ಚೇಡ್ ಹೋಟೆಲ್ ನಲ್ಲಿ ಪ್ರಸ್ ಮೀಟ್ ಮಾಡುವ ಮೂಲಕ ಮತ್ತೆ ಕಾಣಿಸಿಕೊಂಡರು.
ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ನ ಟಿಕೆಟ್ ಅಕಾಂಕ್ಷಿಯಾಗಿದ್ದ ಅನಿಲ್ ಲಾಡ್ ಸಾಕಷ್ಟು ಪ್ರಯತ್ನಿಸಿದರು ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ. ಮೂಲಗಳ ಪ್ರಕಾರ ಕಾಂಗ್ರೆಸ್ ಹೈಕಮಾಂಡ್ ಗೆ ಈತನ ಬೇಜವಾಬ್ದಾರಿತನ ಗೊತ್ತಾಗಿ ನೀನು ರಾಜಕಾರಣಕ್ಕೆ ಅನ್ ಫಿಟ್ ಅಂತ ಹೇಳಿ ಗೇಟ್ ಪಾಸ್ ಕೊಟ್ಟು ದೆಹಲಿಯಿಂದ ಸೀದಾ ಬೆಂಗಳೂರಿಗೆ ಕಳುಹಿಸಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಲಾಡ್ ಈಗ ಮಾಡೋಕೆ ಕೆಲಸವಿಲ್ಲದೆ ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಜಿಗಿಯೋಕೆ ವೇದಿಕೆ ರೆಡಿ ಮಾಡಿಕೊಂಡು ಇದೇ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧೆ ಗೆ ರೆಡಿಯಾಗಿದ್ದಾರೆ.

ಅರೇ ಜೆಡಿಎಸ್ ಅದಾಗಲೇ ಮುನ್ನಾಭಾಯ್ ರನ್ನ ಬಳ್ಳಾರಿ ನಗರ ಕ್ಷೇತ್ರದ ಅಭ್ಯರ್ಥಿ ಅಂತ ಘೋಷಣೆ ಮಾಡಲಾಗಿದೆ, ಅದೇಗೆ ಸಾದ್ಯ ಅಂತೀರಾ? ಇದೇ ರೀ ರಾಜಕಾರಣ ಅಂದರೆ, ಪಾಪ ಮುನ್ನಾ ಭಾಯ್ ಅಭ್ಯರ್ಥಿ ಅಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮೊನ್ನೆ ಗುಗ್ಗರಹಟ್ಟಿಯಲ್ಲಿ ಪಂಚರತ್ನ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿ ಹೋಗಿದ್ದು ಆಯಿತು, ಅದರಂತೆ ಮುನ್ನಾಭಾಯ್ ಚುನಾವಣಾ ಪ್ರಚಾರನೂ ಆರಂಭಿಸಿದ್ದು ಆಯಿತು. ಸದ್ಯ ಈಗ ಪಕ್ಷದಿಂದ ಬಿ.ಫಾರಂ ತಗೆದುಕೊಂಡು ಇನ್ನು ಬಳ್ಳಾರಿಯೇ ಮುಟ್ಟಿರ್ಲಿಕ್ಕಿಲ್ಲ ಅಷ್ಟರಲ್ಲೆ ಅನಿಲ್ ಲಾಡ್ ಗೆ ಟಿಕೆಟ್ ವರ್ಗಾವಣೆ ಆಗುವ ಸಾದ್ಯತೆಗಳಿವೆ ಎನ್ನುತ್ತವೆ ಜೆಡಿಎಸ್ ಮೂಲಗಳು.

 
ಓರ್ವ ಅಲ್ಪಸಂಖ್ಯಾತ ಮುಖಂಡ ಪಕ್ಷ ನಿಷ್ಠೆಯ ಮುನ್ನಾಭಾಯ್ ರನ್ನ ಹರಕೆಯ ಕುರಿ ಮಾಡಲು ಹೊರಟಿರುವುದು ಶೋಚನೀಯ ಸಂಗತಿ. ಆನೇಕ ವರ್ಷಗಳಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿದ ಮುನ್ನಾಭಾಯ್ ರನ್ನ ಈ ರೀತಿ ಮಾಡುವುದು ಎಷ್ಟು ಸರಿ? ಒಂದು ವೇಳೆ ಅಂದುಕೊಂಡಿದ್ದು ಆದರೆ ಜೆಡಿಎಸ್ ನಿಂದ ಲಾಡ್ ಅಭ್ಯರ್ಥಿ ಯಾಗ್ತಾರೆ. ಆಗ ಮುನ್ನಾಭಾಯ್ ನಡೆ ಏನೂ? ಎಂಬುವುದು ಕುತುಹಲವಾಗಿದೆ. ಹಳೇ ಗುರು ಸೂರ್ಯನಾರಾಯಣ ರೆಡ್ಡಿಯವರ ಜೊತೆ ಸೇರ್ತಾರಾ? ಇಲ್ಲ ಈ ಅವಮಾನ ಸಹಿಸಿಕೊಂಡು ಜೆಡಿಎಸ್ ನಲ್ಲೇ ಮುಂದುವರಿತಾರಾ? ಕಾದು ನೋಡಬೇಕಿದೆ.