ದುಷ್ಟ ಕಸ್ತೂರಿ ನಾಗನನ್ನು ದೂರ ಇಡಿ
ಬಳ್ಳಾರಿ:(ಜಾಗೃತಿ ಕಿರಣ) ಗಣಿನಾಡು ಬಳ್ಳಾರಿಯನ್ನು ಕಾಯುವ ಶಕ್ತಿ ಕನಕ ದುರ್ಗಮ್ಮ ದೇವಿಯ ಕೃಪೆ, ಸಾವಿರಾರು ಜನ ಅಭಿಮಾನಿಗಳ ಹರಕೆಯ ಫಲ ಎಂಬಂತೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆಯ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಣ್ಣರಿಗೆ ಜಾಮೀನು ಸಿಕ್ಕಿದೆ. ಅವರ ಬೆಂಬಲಿಗರು, ಆಪ್ತರು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಹರ್ಷೋಲ್ಲಾಸ ತುಂಬಿದೆ. ಇತ್ತಿಗಷ್ಟೆ ನಾಗೇಂದ್ರಣ್ಣ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯೂ ಆಗಿದ್ದಾರೆ. ಆದರೆ ಈ ಸಮಯದಲ್ಲಿ ನಾಗೇಂದ್ರಣ್ಣನವರನ್ನು ಎಚ್ಚರಿಸುವ ಕೆಲಸವನ್ನು ಮಾಡಲು ಅವರ ಕಾರ್ಯಕರ್ತರು ಮುಂದಾಗಿದೆ.
ಸತತ 35 ವರ್ಷಗಳ ನಿರಂತರ ರಾಜಕೀಯ ಸಂಘರ್ಷದಲ್ಲಿ ಮಾಜಿ ಸಚಿವ ನಾಗೇಂದ್ರ ಅವರು ಸಾಕಷ್ಟು ಏಳುಬೀಳುಗಳನ್ನ ಕಂಡಿದ್ದಾರೆ. ಸತತ ನಾಲ್ಕು ಸಲ ಶಾಸಕರಾಗಿ ಗೆಲ್ಲುವ ಮೂಲಕ ಸಚಿವರಾಗಿ ತಮ್ಮ ಕನಸು ಈಡೇರಿಸಿಕೊಂಡಿದ್ದ ನಾಗೇಂದ್ರಣ್ಣರ ಕನಸು ಎಸ್ಟಿ ಅಭಿವೃದ್ಧಿ ನಿಗಮದ ಹಗರಣದೊಂದಿಗೆ ನುಚ್ಚು ನೂರಾಗಿದೆ. ಅವರ ಇಂದಿನ ಈ ಸ್ಥಿತಿಗೆ ಅವರ ಜೊತೆಗಿದ್ದ ಮಾಧ್ಯಮ ಸಲಹೆಗಾರ ದಿ ಗ್ರೇಟ್ ನಾಗರಾಜ್ ಅಲಿಯಾಸ್ ಕಸ್ತೂರಿ ನಾಗರಾಜ, ಪಿಎ ವಿಜಯಕುಮಾರಗೌಡ ಅಲಿಯಾಸ್ ವಿಜ್ಜಿ ಎಂದು ಇಡೀ ಬಳ್ಳಾರಿ ಜಿಲ್ಲೆಯ ಜನರು ಕೂಗಿ ಹೇಳುತ್ತಿದ್ದಾರೆ. ಜಾಮೀನಿನ ಮೇಲೆ ಹೊರ ಬಂದ ನಾಗೇಂದ್ರಣ್ಣ ಈ ಇಬ್ಬರು ದುಷ್ಟರನ್ನು ಒದ್ದು ಹೊರಗೆ ಹಾಕಬೇಕು ಎಂದು ಅವರ ಅಪಾರ ಅಭಿಮಾನಿಗಳ ಒತ್ತಾಯವಾಗಿದೆ. ಕಸ್ತೂರಿ ನಾಗನನ್ನು ಊರು ಬಿಡಿಸಿದರಂತೂ ನಾಗೇಂದ್ರಣ್ಣರಿಗೇ ಒಳ್ಳೆಯದು ಎಂದು ಅವರ ಬಹಳ ಜನ ಆಪ್ತರ ಅಭಿಪ್ರಾಯ ಎಂಬ ಮಾಹಿತಿ ಪತ್ರಿಕೆಗೆ ಸಿಕ್ಕಿದೆ. ಈ ಇಬ್ಬರೂ ಮಾಡಿದ ಭ್ರಷ್ಟಾಚಾರ, ನಾಗೇಂದ್ರಣ್ಣರಿಗೆ ಸುಳ್ಳು ಹೇಳಿ ಹೇಳಿ ಅವರನ್ನು ಅಟ್ಟಕ್ಕೆ ಏರಿಸಿ, ಭ್ರಮೆಯಲ್ಲಿ ಬದುಕುವಂತೆ ಮಾಡಿದ್ದರಿಂದಲೇ ಇಂದು ನಾಗೇಂದ್ರಣ್ಣ ಇಂತಹ ಹೀನಾಯ ಸ್ಥಿತಿಗೆ ತಲುಪುವಂತೆ ಮಾಡಿದೆ ಎನ್ನುತ್ತಾರೆ ಬಳ್ಳಾರಿಯ ಜನ.
ಬೆಣ್ಣೆ ಮಸಾಜಿಗೆ ಅವಕಾಶ ನೀಡಬಾರದು:
ನೀವಂದ್ರೆ ಏನು ಸಾರ್? ನಾಲ್ಕು ಸಲ ಶಾಸಕರು ಸಾರ್, ಯಾರ ಮಾತೂ ಕೇಳಬೇಕಾಗಿಲ್ಲ ಸರ್, ಶ್ರೀರಾಮುಲು ಅಂತ ದೊಡ್ಡ ಲೀಡರನ್ನ ಸೋಲಿಸಿದ್ದೀರಿ ಸಾರ್, ನಿಮಗೆ ಯಾರೂ ಎದುರಿಲ್ಲ ಸಾರ್... ಎಂದು ಹೇಳುತ್ತಾ ಹೇಳುತ್ತಾ ಬೆಣ್ಣೆ ಮಸಾಜ್ ಮಾಡಿ ಮಾಡಿಯೇ ನಾಗೇಂದ್ರಣ್ಣರ ತಲೆ ಕೆಡಿಸಿದ ಕಸ್ತೂರಿ ನಾಗ, ಈಗ ಮತ್ತೆ ಬೆಣ್ಣೆ ಹಿಡಿದುಕೊಂಡು ಮಸಾಜ್ ಮಾಡಲು ಸಜ್ಜಾಗಿ ನಿಂತಿದ್ದಾನೆ. ನಾಗೇಂದ್ರಣ್ಣ ತಮ್ಮ ಭವಿಷ್ಯದ ಬಗ್ಗೆ ಕಾಳಜಿ ಹೊಂದಿದ್ದರೆ, ಮುಂದಿನ ತಮ್ಮ ರಾಜಕೀಯ ಜೀವನ ಸುಸೂತ್ರವಾಗಿ ನಡೆಯಬೇಕೆಂದರೆ ಖಂಡಿತವಾಗಿಯೂ ಈ ಕಸ್ತೂರಿ ನಾಗರಾಜನನ್ನು ದೂರ ಇಡಬೇಕೆಂದು ನಾಗೇಂದ್ರಣ್ಣರ ಆಪ್ತರೇ ಹೇಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ರಾಜ್ಯದ ವಾಲ್ಮೀಕಿ ನಾಯಕ ಸಮುದಾಯದ ಯುವ ನೇತಾರ ನಾಗೇಂದ್ರಣ್ಣರ ರಾಜಕೀಯ ಜೀವನ ಸುಸೂತ್ರವಾಗಿದ್ದರೆ ಮಾತ್ರ ಅವರನ್ನು ನಂಬಿದ ಕ್ಷೇತ್ರದ ಜನರ ಅಭಿವೃದ್ಧಿ ಆಗಲಿದೆ. ಬಳ್ಳಾರಿ ಬೆಂಗಳೂರಿನಲ್ಲಿ ನಾಗೇಂದ್ರಣ್ಣರ ಪಕ್ಕ ಠಳಾಯಿಸುವ ಈ ನಾಗರಾಜ ರಾತ್ರಿಯಿಂದ ಬೆಳಗಿನ ಜಾವದವರೆಗೆ ಸುಳ್ಳು ಹೇಳಿ ಹೇಳಿಯೇ ನಮ್ಮ ಲೀಡರನ ಹಾಳು ಮಾಡಿದ, ಜೈಲಿಗೆ ಕಳಿಸಿದ. ಇಂಥವರನ್ನು ಅಣ್ಣ ಈಗಲಾದರೂ ದೂರ ಇಡಬೇಕು, ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ನಾಗೇಂದ್ರಣ್ಣರ ಆಪ್ತರು.
ನಿಲ್ಲದ ವಸೂಲಿ, ಅಪಚಾರದ ಮಾತು:
ಕಳೆದ 90 ದಿನಗಳಿಂದ ಮಾಜಿ ಸಚಿವ ನಾಗೇಂದ್ರಣ್ಣ ಅತ್ತ ಇ.ಡಿ ಕೇಸಿನಲ್ಲಿ ಅರೆಸ್ಟಾಗಿ ಜೈಲಿನಲಿದ್ದರೆ, ಇತ್ತ ಈ ಕಸ್ತೂರಿ ನಾಗರಾಜ ವಸೂಲಿ ದಂಧೆಯನ್ನು ಮಾತ್ರ ನಿಲ್ಲಿಸಿರಲಿಲ್ಲ ಎನ್ನುತ್ತವೆ ಬಲ್ಲ ಮೂಲಗಳು. ಅಕ್ರಮ ಅಕ್ಕಿ, ಮಟಕಾ, ಇಸ್ಪೀಟು ಇನ್ನೂ ಏನೇನೋ ದೋ ನಂಬರ್ ದಂಧೆಗಳಿಂದ ಮಂತ್ಲಿ ಮಾಮೂಲು ಪೀಕುವುದನ್ನು ಮಾತ್ರ ನಿಲ್ಲಿಸಲಿಲ್ಲ ಎಂಬ ಮಾತುಗಳಿವೆ. ಇಷ್ಟೆಲ್ಲ ಮಾಡುತ್ತ ಮಾಡುತ್ತಲೇ ತನಗೆ ಅನ್ನ, ಹಣ, ಅಧಿಕಾರ ನೀಡಿದ ನಾಗೇಂದ್ರಣ್ಣರ ಬಗ್ಗೆಯೇ ಅಪಚಾರದ ಮಾತು ಆಡಿದ ಎನ್ನುತ್ತಾರೆ ನಾಗೇಂದ್ರಣ್ಣರ ಆಪ್ತರು. ಇ.ಡಿ ಪ್ರಕರಣದಲ್ಲಿ ನಾಗೇಂದ್ರಣ್ಣ ಅರೆಸ್ಟ್ ಆಗುತ್ತಿದ್ದಂತೆ ತನ್ನನ್ನು ಗರತಿ ಗಂಗವ್ವ ಎಂದು ಬಿಂಬಿಸಿಕೊಳ್ಳಲು ಶುರು ಮಾಡಿದ ಕಸ್ತೂರಿ ನಾಗರಾಜ "ನಾನು ನಾಗೇಂದ್ರಣ್ಣರ ಬಳಿ ಹೋಗಿ ಕೆಟ್ಟೆ, ಅವರಿಗೆ ನನ್ನಿಂದ ಒಳ್ಳೆಯದಾಗಲಿ ಎಂದು ಹೋದರೆ, ಅವರಿಂದಾಗಿ ನನ್ನ ಹೆಸರು ಕೆಟ್ಟಿತು" ಎಂದು ಎಲ್ಲರ ಮುಂದೆ ಕಳೆದ ಮೂರು ತಿಂಗಳಿಂದ ಒಂದೇ ಕ್ಯಾಸೆಟ್ ಹಾಕಿದ್ದಾನೆ. ತನಗೆ ಎಲ್ಲಾ ರೀತಿ ಬೆಂಬಲ ನೀಡಿದ ಮಾಜಿ ಸಚಿವ ನಾಗೇಂದ್ರ ಅವರ ಋಣವನ್ನು ಈ ಅಡ್ನಾಡಿ ಈ ರೀತಿ ತೀರಿಸಿದ. ಇವನ ಜೊತೆಗಾರರೇ ಇವನ ಈ ರೀತಿಯ ಮಾತು ಕೇಳಿ ಶಾಕ್ ಆಗಿದ್ದಾರಂತೆ. ಇವನೆಂಥ ತಾಯ್ಗಂಡ ಇರಬಹುದು? ಪಕ್ಕಕ್ಕಿಟ್ಟುಕೊಂಡು, ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ ನಾಗೇಂದ್ರಣ್ಣರ ಬಗ್ಗೆಯೇ ಇಂಥ ಮಾತುಗಳೇ? ಎಂದು ನಾಗೇಂದ್ರಣ್ಣರ ಹಲವು ಜನ ಆಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಕಸ್ತೂರಿ ನಾಗರಾಜ ಕೇಸಿನಲ್ಲಿ ನಿಮ್ಮ ಪಾತ್ರ ಏನೆಂದು ಜನ ಕೇಳಿದರೆ; ನನ್ನದೇನೂ ಇಲ್ಲ. ನಾನು ಲೀಗಲೀ ಕರೆಕ್ಟ್ ಇದ್ದೇನೆ ಎಂಬ ಕ್ಯಾಸೆಟ್ಟೂ ಹಾಕಿದ್ದಾನೆ. ಅಂದರೆ ನಾಗೇಂದ್ರಣ್ಣ ತಪ್ಪು ಮಾಡಿದ್ದರೆ ಎಂದು ಅರ್ಥವೇ? ಇಂತಹ ನಾಲಾಯಕನನ್ನು ಇನ್ನು ಮುಂದೆಯೂ ನಾಗೇಂದ್ರಣ್ಣ ತನ್ನ ಜೊತೆ ಇಟ್ಟುಕೊಂಡರೆ ನಾಗರಾಜ ಬಗ್ಗೆಯೇ ಜನರಲ್ಲಿ ತಾತ್ಸಾರ ಭಾವನೆ ಹುಟ್ಟಿದರೆ ಅಚ್ಚರಿ ಇಲ್ಲ ಎನ್ನುತ್ತಾರೆ ಬಹಳ ಜನ.
ಹುದ್ದೆ, ವರ್ಗಾವಣೆ ಹೆಸರಲ್ಲಿ ಲೂಟಿ:
ನಾಗೇಂದ್ರಣ್ಣ ಸಚಿವರಾದ ಮೇಲೆ ಈ ಕಸ್ತೂರಿ ನಾಗರಾಜ ಲಿಟರಲಿ ಲೂಟಿ ಮಾಡಿದ್ದಾನೆ ಎನ್ನುತ್ತಾರೆ ಬಲ್ಲವರು. ಸಮುದ್ರ ಗಾತ್ರದ ಕಾಂಗ್ರೆಸ್ಸಿನಲ್ಲಿ ನಾಮಿನೇಟ್ ಹುದ್ದೆಗೆ ಪ್ರಯತ್ನ ಮಾಡುವ, ಕೋಟ್ಯಾಂತರ ರೂಪಾಯಿ ಖರ್ಚು ಮಾಡಲು ರೆಡಿ ಆಗುವ ನೂರಾರು ಜನ ನಿಮಗೆ ಈಗಲೂ ಸಿಗುತ್ತಾರೆ. ಅಂತಹ ಅಮಾಯಕರನ್ನು ಹುಡುಕಿ, ಹುದ್ದೆ ಕೊಡಿಸುವುದಾಗಿ ಹೇಳಿ ಈ ಕಸ್ತೂರಿ ನಾಗರಾಜ ಕೋಟ್ಯಾಂತರ ರೂಪಾಯಿ ಸಂಪಾದಿಸಿದ್ದಾನೆ ಎಂಬ ಬಲವಾದ ಮಾಹಿತಿ ಇವೆ. ಇನ್ನು ಪೊಲೀಸ್ ಇಲಾಖೆಯಲ್ಲಿ ಹಲವು ಜನ ಪಿಎಸೈ, ಸಿಪಿಐಗಳಿಗೆ ವರ್ಗಾವಣೆ ಮಾಡಿಸುವುದಾಗಿ ಲಕ್ಷ ಲಕ್ಷ ದೋಚಿದ್ದಾನೆ. ಈಗ ನಾಗೇಂದ್ರಣ್ಣ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಇವನನ್ನು ಮತ್ತೆ ಜೊತೆಗೆ ಇಟ್ಟುಕೊಂಡರೆ ಹಣ ಕೊಟ್ಟು ಇವನ ಮನೆಗೆ ತಿರಿಗುತ್ತಿರುವವರು ನಾಗೇಂದ್ರಣ್ಣರ ಬೆನ್ನು ಬಿದ್ದರೆ ಅಚ್ಚರಿ ಇಲ್ಲ ಎಂದು ವರ್ಗಾವಣೆಗಾಗಿ ಹಣ ಕಳೆದುಕೊಂಡ ಹೆಸರು ಹೇಳಲು ಬಯಸದ ಪೋಲಿಸ್ ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ. ಇನ್ನು ಇವನು ಅಕ್ರಮವಾಗಿ ದುಡಿದ ದುಡ್ಡನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇನ್ವೆಸ್ಟ್ ಮಾಡಿದ್ದಾನೆ. ಬಳ್ಳಾರಿ, ಚಿತ್ರದುರ್ಗ ಬೇರೆ ಬೇರೆ ಕಡೆ ಲೇಔಟ್ ಮಾಡಿದ್ದಾನೆ. ರಾಜ್ ನ್ಯೂಸ್ ವರದಿಗಾರ ಎಂದು ಹೇಳಿಕೊಳ್ಳುವ ಇವನು, ಕಳೆದ ಮೂರು ತಿಂಗಳಿಂದ ಒಂದೇ ಒಂದು ವರದಿ ಮಾಡಲಿಲ್ಲ. ವರದಿಗಾರನ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವ ಇವನ ಮೀಡಿಯಾ ಅಕ್ರಡೇಶನ್ ಕಾರ್ಡನ್ನು ವಾರ್ತಾಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಬೇಕು. ಇಷ್ಟೆಲ್ಲ ಭ್ರಷ್ಟಾಚಾರ ಮಾಡಿ ಬಟಾ ಬಯಲಾಗಿರುವ ಇವನನ್ನು ರಾಜ್ ನ್ಯೂಜ್ ಚಾನೆಲ್ಲಿನವರು ಮರ್ಯಾದಸ್ಥರಾಗಿದ್ದರೆ ಕೆಲಸದಿಂದ ವಜಾ ಮಾಡಬೇಕು. ಹಾಗಾಗಿಲ್ಲವೆಂದರೆ ಇವನ ಅಕ್ರಮದಲ್ಲಿ ಚಾನಲ್ಲಿನ ಮುಖ್ಯಸ್ಥರಿಗೂ ಪಾಲಿದೆ ಎಂಬ ಸಂದೇಶ ಸಾರ್ವಜನಿಕರಿಗೆ ಹೋಗುವುದು ನಿಶ್ಚಿತ ಎನ್ನುತ್ತಾರೆ ಓರ್ವ ಪತ್ರಕರ್ತ. ಇನ್ನು ಇವನ ಜೊತೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವವರೂ ಎಚ್ಚೆತ್ತುಕೊಳ್ಳಲು ಇದು ಸರಿಯಾದ ಸಮಯ. ಅಂಥ ನಾಗೇಂದ್ರಣ್ಣರ ಬಗ್ಗೆಯೇ ಇಲ್ಲ ಸಲ್ಲದ ಮಾತು ಆಡಿರುವ ಈ ಅಡ್ನಾಡಿ ಇವರಿಗೂ ಮೋಸ ಮಾಡಲಾರ ಎಂಬುದು ಏನು ಗ್ಯಾರಂಟಿ ಅಲ್ಲವೇ?
ಒಂದು ವೇಳೆ ಈ ಕಸ್ತೂರಿ ನಾಗರಾಜನನ್ನು ನಾಗೇಂದ್ರಣ್ಣ ದೂರ ಇಡದಿದ್ದರೆ ನಾಗೇಂದ್ರಣ್ಣರ ಆಪ್ತರೇ ಇವನಿಗೆ ಬಿಸಿ ಬಿಸಿ ಕಜ್ಜಾಯ ತಿನ್ನಿಸಿ ಊರು ಬಿಡಿಸುವುದು ಖಾಯಂ ಎನ್ನುತ್ತಾರೆ ನಾಗೇಂದ್ರಣ್ಣರ ಕೆಲ ಆಪ್ತರು.
ಬರಗಾಲದಲ್ಲೂ ಭರಪೂರ ಜೀವನ
ಮಾಜಿ ಸಚಿವ ನಾಗೇಂದ್ರಣ್ಣ ಅತ್ತ ಇ.ಡಿ ಪ್ರಕರಣದಲ್ಲಿ ಬಂಧಿತರಾದ ನಂತರ ಇತ್ತ ಅವರ ಇಡೀ ಆಪ್ತ ಬಳಗ, ಬೆಂಬಲಿಗರ ದಂಡು ಅನಾಥ ಪ್ರಜ್ಞೆಗೆ ಸಿಲುಕಿ ಒದ್ದಾಡಿತು. ನಾಗೇಂದ್ರಣ್ಣನ ಖಾಸಗಿ ಡ್ರೈವರಗಳು ನಾಲ್ಕು ತಿಂಗಳಿಂದ ಸಂಬಳ ಇಲ್ಲದೇ ಕಂಗಾಲಾಗಿ ಅಲೆದಾಡಿದರು. ಕೊನೆಗೆ ನಾಗೇಂದ್ರಣ್ಣನ ಆಪ್ತರೊಬ್ಬರು ಡ್ರೈವರಗಳನ್ನು ಕರೆದು ನಾಲ್ಕು ತಿಂಗಳ ಪೈಕಿ ಎರಡು ತಿಂಗಳಿನ ಸಂಬಳ ಕೊಟ್ಟರು. ವಿಜಯ ದಶಮಿ ಹಬ್ಬದ ವೇಳೆ ಸಂಬಳ ಪಡೆದ ಡ್ರೈವರಗಳು ನಾಗೇಂದ್ರಣ್ಣನಿಗೆ, ತಮಗೆ ಬಂದ ಸ್ಥಿತಿ ನೆನೆದು ಕಣ್ಣೀರಾದರು. ಆದರೆ ಕಸ್ತೂರಿ ನಾಗರಾಜ ಇಂತಹ ಬರಗಾಲದಂತಹ ಸ್ಥಿತಿಯಲ್ಲೂ ಮೂರು ತಿಂಗಳಿಂದ ಹೊತ್ತು ಹೊತ್ತಿಗೆ ಜಿಮ್ಮು, ನ್ಯಾಚುರಲ್ ನಲ್ಲಿ ಬಿಟ್ಟಿ ಜ್ಯೂಸು ಕುಡಿದು ಮತ್ತಷ್ಟು ಗಟ್ಟಿಯಾದ. ಮಾತ್ರವಲ್ಲ ನಾಗೇಂದ್ರಣ್ಣ ಕಷ್ಟದಲ್ಲಿರುವಾಗಲೇ ಹೊಸ ಕಾರು ರೋಡಿಗಿಳಿಸಿದ್ದಾನೆಂಬ ಮಾಹಿತಿಯಿದೆ. ಇಂಥ ದುಷ್ಟನನ್ನು ದುಷ್ಟ ಎನ್ನದೇ ಏನನ್ನಬೇಕು ಎಂಬುದು ಅಣ್ಣನ ಬೆಂಬಲಿಗರ ಅಭಿಪ್ರಾಯ.