ಮಾಜಿ ಸಚಿವ ನಾಗೇಂದ್ರರಿಗೆ ವಿಷ ಕಂಟಕನಾದ ಕಸ್ತೂರಿ ನಾಗರಾಜ್

ಮಾಜಿ ಸಚಿವ ನಾಗೇಂದ್ರರಿಗೆ ವಿಷ ಕಂಟಕನಾದ ಕಸ್ತೂರಿ ನಾಗರಾಜ್
ನಾಗರಾಜ್ ಅಲಿಯಾಸ್ ಕಸ್ತೂರಿ ನಾಗರಾಜ್

ಪರಿಶಿಷ್ಟ ವರ್ಗಗಳ ಕಲ್ಯಾಣ, ಕ್ರೀಡಾ ಮತ್ತು ಯುವಜನ ಸೇವೆ ಇಲಾಖೆಗಳ ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಇಡಿ ಕಸ್ಟಡಿಯಲ್ಲಿದ್ದಾರೆ. ಎಸ್ಟಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 94 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆ ಹಾಗೂ ದುರ್ಬಳಕೆ ಪ್ರಕರಣದಲ್ಲಿ ಇತ್ತಿಚೆಗೆ ಬಳ್ಳಾರಿ, ಹೈದ್ರಾಬಾದ್, ಬೆಂಗಳೂರು ಸೇರಿದಂತೆ ರಾಜ್ಯದ 19 ಕಡೆಗಳಲ್ಲಿ ಇಡಿ ದಾಳಿ ಮಾಡಿತ್ತು. ಮೊನ್ನೆ ನಡೆದ ಕಾರ್ಯಾಚರಣೆಯಲ್ಲಿ ಭರ್ತಿ 90 ಜನ ಅಧಿಕಾರಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದು, ಸುದೀರ್ಘ ವಿಚಾರಣೆ ಬಳಿಕ ಇಡಿ ಅಧಿಕಾರಿಗಳು ನಾಗೇಂದ್ರರನ್ನ ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರು ಪಡಿಸಿದೆ. ಜನಪ್ರತಿನಿಧಿಗಳ ನ್ಯಾಯಾಲಯವು ನಾಗೇಂದ್ರರನ್ನ ಜುಲೈ 18 ರವರೆಗೆ ಇಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.


ಮಾಜಿ ಸಚಿವ ನಾಗೇಂದ್ರ ಸೇರಿದಂತೆ ಅವರ ಆಪ್ತ ಸಹಾಯಕರು, ಬೆಂಬಲಿಗರು, ಮಾಧ್ಯಮ ಸಲಹೆಗಾರ ಸೇರಿದಂತೆ ಹಲವರನ್ನು ಇಡಿ ಅಧಿಕಾರಿಗಳು ವಿಚಾರಣೆ ಮಾಡಿ ಕಳಿಸಿದ್ದಾರೆ. ಅದೇ ರೀತಿ ಎಸ್ಟಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಅವರಿಗೂ ಕೂಡ ಇಡಿ ಬಿಸಿ ಮುಟ್ಟಿದೆ. ಆದರೆ ಪ್ರಮುಖವಾದ ವಿಷಯ ಏನೆಂದರೆ ನಾಲ್ಕು ಸಲ ಶಾಸಕರಾಗಿ, ಸತತ ಮೂವತ್ತು ವರ್ಷಗಳಿಂದ ಸಚಿವರಾಗಬೇಕೆಂಬ ಕನಸು ಕಂಡಿದ್ದ ನಾಗೇಂದ್ರ ಅವರ ಕನಸು ನುಚ್ಚು ನೂರು ಆಗಿದ್ದು ಯಾಕೆ? ಈ ಹಗರಣ ನಡೆಯುವ ಮಟ್ಟಕ್ಕೆ ನಾಗೇಂದ್ರ ಅವರು ಭ್ರಷ್ಟಾಚಾರಿ ಆಗಿದ್ದು ಯಾಕೆ? ನಿಜವಾಗಿಯೂ ಇದು ನಾಗೇಂದ್ರ ಅವರೇ ಹೇಳಿ ಮಾಡಿಸಿದರಾ? ಅಥವಾ ಅಧಿಕಾರಿಗಳ ತಪ್ಪಾ? ಆಪ್ತ ಸಹಾಯಕರ ಐಡಿಯಾನಾ? ತಂತ್ರ ಪ್ರತಿತಂತ್ರ ಮಾಡುವುದರಲ್ಲಿ ನಂಬರ್ ಒನ್ ರಾಜಕಾರಣಿ ಎನಿಸಿಕೊಂಡಿದ್ದ ನಾಗೇಂದ್ರ ಅವರು ಎಡವಿದ್ದು ಎಲ್ಲಿ? ಗೊತ್ತಿಲ್ಲ. ಆದರೆ ಮೊನ್ನೆ ಬೆಳಿಗ್ಗೆಯಿಂದ ಇಡೀ ಬಳ್ಳಾರಿಯ ಜನ, ಪತ್ರಕರ್ತರಿಗೆ ಫೋನ್ ಮಾಡಿ ಕೇಳಿದ ಪ್ರಮುಖ ಪ್ರಶ್ನೆ ಎಂದರೆ, ಕಸ್ತೂರಿ ನಾಗರಾಜ ಅರೆಸ್ಟ್ ಆದ್ನಾ? ಎಂದು. ಹೌದು! ನಾಗೇಂದ್ರ ಅವರಿಗಿಂತ ಈ ಕಸ್ತೂರಿ ನಾಗರಾಜ ಬಗ್ಗೆಯೇ ರಾಜಕೀಯ ವಲಯದ ಜನ ಪತ್ರಕರ್ತರಿಗೆ ಫೋನಾಯಿಸಿ, ಕಸ್ತೂರಿ ನಾಗರಾಜ  ಅರೆಸ್ಟ್ ಆದ್ನಾ? ಅವನು ಎಲ್ಲಿದ್ದಾನೆ? ಅವನ ಮನೆ ಮೇಲೆ ಇಡಿ ದಾಳಿ ಆಯ್ತಾ? ಎಂದೆಲ್ಲಾ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾರೆ. ಜನರ ನಿರೀಕ್ಷೆಯಂತೆ ಮೊನ್ನೆ ಬುಧವಾರ ಮಧ್ಯಾಹ್ನ ಈ ಕಸ್ತೂರಿ ನಾಗರಾಜ ಮನೆ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಮನೆಯಲ್ಲಿ ಇಲ್ಲದ ಕಸ್ತೂರಿ ನಾಗರಾಜನನ್ನು ಮನೆಗೆ ಕರೆಸಿಕೊಂಡು ಮಾಜಿ ಸಚಿವ ನಾಗೇಂದ್ರ ಅವರ ಮನೆಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದ್ದಾರೆ. 

             ಮನೆ ನೋಡಿ ದಂಗಾದ ಇಡಿ ಅಧಿಕಾರಿಗಳು: 

ಬಳ್ಳಾರಿ ನಗರದ ವಾಜಪೇಯಿ ಬಡಾವಣೆಯ ಹಿಂಬಾಗದಲ್ಲಿರುವ ದೊಡ್ಡಬಸವೇಶ್ವರ ನಗರದಲ್ಲಿ ಐಷಾರಾಮಿ ಮನೆ ಕಟ್ಟಿಕೊಂಡಿರುವ ಕಸ್ತೂರಿ ನಾಗರಾಜನ ಮನೆ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು, ಇವನ ಹೊಚ್ಚ ಹೊಸ ಮನೆ ಕಂಡು ದಂಗಾಗಿದ್ದಾರೆ. ಮನೆಗೆ ಬಂದ ಕಸ್ತೂರಿ ನಾಗರಾಜಗೆ ಇಡಿ ಅಧಿಕಾರಿಗಳು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾರೆ. ಮಾಜಿ ಸಚಿವ ಶಾಸಕರ ಮನೆಗಿಂತ ನಿನ್ನ ಮನೆ ದೊಡ್ಡದಿದೆಯಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಪತ್ರಕರ್ತ, ಸ್ವಂತ ಸಂಪಾದಿಸಿದ ಹಣದಲ್ಲಿ ಮನೆ ಕಟ್ಟಿರುವೆ ಎಂದು ಹೇಳಿದ್ದಾನೆ. ನೀನು ಏನು? ನಿನ್ನ ಆದಾಯ ಏನೆಂದು ಗೊತ್ತಿದೆ. ನಿನ್ನ ಜಾತಕವೇ ನಮ್ಮ ಬಳಿ ಇದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ಅಷ್ಟಕ್ಕೂ ಈ ನಾಗರಾಜ ಯಾರು? ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಐಷಾರಾಮಿ ಮನೆ ಕಟ್ಟಿದ್ದಾದರೂ ಹೇಗೆ? ಮಾಜಿ ಸಚಿವ ಬಿ.ನಾಗೇಂದ್ರ ಅವರ ಅವನತಿಯಲ್ಲಿ ಇವನ ಪಾತ್ರ ಏನು? ಹಗರಣಕ್ಕೂ ಇವನಿಗೂ ಇರುವ ಸಂಬಂಧ ಏನು? ಎಂಬುದನ್ನು ಕೆದುಕುತ್ತ ಹೋದಾಗ ಶಾಕಿಂಗ್ ಅಂಶಗಳು ಹೊರ ಬೀಳುತ್ತಿವೆ. 

          ಹೊಟ್ಟಿಗಿಲ್ಲದವನು ಮತ್ತೊಬ್ಬರ ಹೊಟ್ಟೆ ಹೊಡೆದ: 

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ನಾಯನಕಟ್ಟಿಯವನಾದ ಕಸ್ತೂರಿ ನಾಗರಾಜ ದೊಡ್ಡ ಶ್ರೀಮಂತ ಕುಟುಂಬದಿಂದ ಬಂದವನಲ್ಲ. ಇವನ ತಾಯಿಯ ಜಾತಿ ಬೇರೆ, ತಂದೆಯ ಜಾತಿ ಬೇರೆ. ಅಂದ್ರೆ ಇವನ ತಂದೆಯ ಎರಡನೇ ಹೆಂಡತಿಗೆ ಎರಡನೇ ಮಗ ಇವನು, ಬೆಳೆಯುತ್ತ ಬೆಳೆಯುತ್ತ ಬಾಯಿಗೆ ಬಂದ ಜಾತಿಯ ಹೆಸರು ಹೇಳಿ ಲಾಭ ಮಾಡಿಕೊಂಡ ಎಂಬುದು ಈಗ ಸೀಕ್ರೆಟಾಗಿ ಉಳಿದಿಲ್ಲ. ತಾಯಿ ಹೂ ಮಾರಿ ಮಕ್ಕಳನ್ನು ಓದಿಸಿದರು. ಆದರೆ ಈ ಸೆಕೆಂಡ್ ಮಗ ಯಾವಾಗಲೂ ಸೆಕೆಂಡ್ ದಂಧೆಗಳ ಬಗ್ಗೆಯೇ ಆಸಕ್ತಿ ಬೆಳೆಸಿಕೊಂಡು ಬಂದ. ಮನೆಯಲ್ಲಿ ಬಡತನ ಇದ್ದಿದ್ದರಿಂದ ಚಿತ್ರದುರ್ಗಕ್ಕೆ ಬಂದು ಸಿಟಿ ಕೇಬಲ್ ಕ್ಯಾಮರಾಮನ್ ಆದ, ಬಸ್‌ಗಳಿಗೆ ಏಜೆಂಟ್ ಆದ, ನಾಲ್ಕು ಕಾಸು ಅಂತ ಮಾಡಿಕೊಂಡ ಮೇಲೆ ಟ್ಯಾಬ್ಲಾಯ್ಡ್ ಪತ್ರಿಕೆಯನ್ನೂ ಮಾಡಿ, ಮನಸಿಗೆ ಬಂದದ್ದು ಬರೆದು, ಬ್ಲಾಕ್ ಮೇಲ್ ಮಾಡಿ ಕೇಸು ಹಾಕಿಸಿಕೊಂಡು ತಳಕು ಠಾಣೆಯಲ್ಲಿ ಸ್ಲೇಟ್ ಹಿಡಿದ. ಲಿಕ್ಕರ್ ಕದ್ದ ಆರೋಪದಲ್ಲಿ ಜೈಲೂ ಸೇರಿದ. ಕೊನೆಗೆ ಮುರುಘಾ ಮಠಕ್ಕೆ ಸೇರಿ ಮರಿಸ್ವಾಮಿಗಳ ಸೇವೆ ಹೆಸರಿನಲ್ಲಿ ಮಠದಲ್ಲೂ ರಾಜಕೀಯ ಮಾಡಿ, ಎಸ್‌.ಕೆ.ಬಸವರಾಜನ್ ಹಾಗೂ ಆತನ ಪತ್ನಿಗೆ ಆಪ್ತನಾದ. ಬಸವರಾಜನ್ ಮತ್ತಾತನ ಪತ್ನಿಯೇ ಈತನ ಮದುವೆಯ ಜವಾಬ್ದಾರಿ ವಹಿಸಿಕೊಂಡಿದ್ದರೆಂದರೆ ನೀವೇ ಅರ್ಥೈಸಿಕೊಳ್ಳಿ ಇವನು ಎಂಥ ಕುಳ ಇರಬಹುದು ಅಂತ. ಹಿಂಗೆ ಮೂವತ್ತು ವರ್ಷಗಳ ಹಿಂದೆ ಹೊಟ್ಟೆಗಿಲ್ಲದೇ ಪರದಾಡುತ್ತಿದ್ದ ಕಸ್ತೂರಿ ನಾಗರಾಜ ಇವತ್ತು ಮತ್ತೊಬ್ಬರ ಹೊಟ್ಟೆ ಹೊಡೆಯುವ ನೀಚ ಮಟ್ಟಕ್ಕೆ ಇಳಿದಿದ್ದಾನೆಂಬುದು ಹೊಸ ಸ್ಟೋರಿ. ಇಡೀ ಬಳ್ಳಾರಿ ಜಿಲ್ಲೆಯ ರಾಜಕೀಯ ಹೊಲಸೆದ್ದು ಹೊಗುವುದರಲ್ಲಿ, ಇಡೀ ವ್ಯವಸ್ಥೆಯನ್ನು ಹಳ್ಳ ಹಿಡಿಸುವುದರಲ್ಲಿ, ಎಲ್ಲದಕ್ಕಿಂತ ಮುಖ್ಯವಾಗಿ ಮಾಜಿ ಸಚಿವ ನಾಗೇಂದ್ರ ಅವರನ್ನು ಹಾಳು ಮಾಡುವುದರಲ್ಲಿ ಇವನ ಪಾತ್ರವೇ ಪ್ರಮುಖ ಎಂದರೆ ತಪ್ಪಾಗದು. ಹೀಗಂತ ಬಳ್ಳಾರಿಯ ಆಲ್‌ಮೋಸ್ಟ್ ಎಲ್ಲಾ ರಾಜಕಾರಣಿಗಳ ಅಭಿಪ್ರಾಯ ಆಗಿದೆ. 

                          ಟಿವಿ9 ನಿಂದ ಗೇಟ್ ಪಾಸ್:

ಚಿತ್ರದುರ್ಗದಲ್ಲಿ ಅನಗತ್ಯ ವಿಷಯಗಳಲ್ಲಿ ತಲೆ ಹಾಕಿ, ಎಲ್ಲದರಲ್ಲೂ ತನ್ನ ಬೇಳೆ ಬೇಯಿಸಿಕೊಳ್ಳಲು ಹೋಗಿ, ತಳ ಸುಟ್ಟ ಬದನೆಕಾಯಿಯಂತಾದ ಕಸ್ತೂರಿ ನಾಗರಾಜ ಕೊನೆಗೂ ಊರು ಬಿಡುವ ಸ್ಥಿತಿ ತಂದುಕೊಂಡ. ದುರ್ಗದಲ್ಲಿ ಹೆಜ್ಜೆ ಹೆಜ್ಜೆಗೆ ವೈರಿಗಳನ್ನು ಸಂಪಾಂದಿಸಿಕೊಂಡಿದ್ದ ಈ ನಾಗರಾಜ ಊರು ಬಿಡದಿದ್ದರೆ ಯಾರಾದರೂ ಇವನನ್ನು ಮುಸಗಿಸಿಯೇ ಬಿಡುತ್ತಿದ್ದರು ಎಂದು ಹೇಳುತ್ತಾರೆ ದುರ್ಗದಲ್ಲಿ ಇವನನ್ನು ಬಲ್ಲವರು. ಹೀಗಿರುವಾಗಲೇ 2005ರಲ್ಲಿ ಕರ್ನಾಟಕದ ಮೊದಲ 24x7 ಕನ್ನಡ ನ್ಯೂಸ್ ಚಾನೆಲ್ ಟಿವಿ9 ನೇಮಕಾತಿ ಆರಂಭಿಸಿತು. ಜಿಲ್ಲಾ ವರದಿಗಾರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಈತನೂ ಅರ್ಜಿ ಹಾಕಿದ, ಸೆಲೆಕ್ಟೂ ಆದ. ಟ್ರೇನಿಂಗ್ ನಡೆಯುತ್ತಿರುವಾಗಲೇ ಈತನ ಬಗ್ಗೆ ಕಂತೆ ಕಂತೆ ಪತ್ರಗಳು ಇನ್ನೂ ಆರಂಭವೇ ಆಗದ ಟಿವಿ9 ಮುಖ್ಯ ಕಚೇರಿಗೆ ಬಂದವು. ಈತನ ಘನಂದಾರಿ ಕೆಲಸಗಳ ಬಗ್ಗೆ ಟಿವಿ9ನ ಮುಖ್ಯ ಸಂಪಾದಕರು ದುರ್ಗದಲ್ಲಿ ತಮಗೆ ಪರಿಚಯ ಇರುವವರ ಬಳಿ ವಿಚಾರಣೆ ಮಾಡಿದಾಗ ಈತನ ನಿಜ ಬಂಡವಾಳ ಹೊರ ಬಿದ್ದಿತ್ತು. ಚೇಂಬರಿಗೆ ಕರೆಸಿಕೊಂಡ ಮುಖ್ಯಸ್ಥರು ರಾಜೀನಾಮೆ ಕೊಟ್ಟು ಹೋಗುವಂತೆ ಹೇಳಿದ್ದರು. ಹಾಗೆ ಕೊರಳ ಪಟ್ಟಿ ಹಿಡಿದು ಹೊರ ದಬ್ಬಿಸಿಕೊಂಡು ಬಂದ ಈ ಕಸ್ತೂರಿ ನಾಗರಾಜ ಮುಂದೆ ಒಂದೂವರೆ ವರ್ಷದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಅವರ ಮಾಲೀಕತ್ವದ ಚಾನೆಲ್ ಕಸ್ತೂರಿ ಟಿವಿಯಲ್ಲಿ ಕೆಲಸ ಗಿಟ್ಟಿಸಿಕೊಂಡ. ತಾನು ಸ್ವಾಮಿ ಎಂದು ಸುಳ್ಳು ಹೇಳಿ ಒಬ್ಬ ಸೀನಿಯರ್ ಜರ್ನಲಿಸ್ಟ್ ಕಡೆಯಿಂದ ಇನ್‌ಫ್ಲುಯನ್ಸ್ ಮಾಡಿಸಿ ಕಸ್ತೂರಿ ಚಾನೆಲ್ಲಿಗೆ ವಕ್ಕರಿಸಿಕೊಂಡೇ ಬಿಟ್ಟ. ಆದರೆ ಇಲ್ಲೂ ಈತನ ಬಗ್ಗೆ ಕಂತೆ ಕಂತೆ ಪತ್ರಗಳು ಕಸ್ತೂರಿ ಚಾನೆಲ್ಲಿಗೆ ಬಂದವು. ಚಿತ್ರದುರ್ಗ ಜಿಲ್ಲಾ ವರದಿಗಾರ ಆಗಬೇಕೆಂದು ಬಂದಿದ್ದ ಈತನನ್ನು ವಾಪಸ್ ಕಳಿಸುವುದು ಬೇಡ ಎಂದು ದೂರದ ಬೀದರ್‌ಗೆ ಜಿಲ್ಲಾ ವರದಿಗಾರ ಅಂತ ನೇಮಕ ಮಾಡಿದರು. ದೂರದ ಊರಿಗೆ ಹೋದ ಮೇಲೆ ಬಾಲ ಬಿಚ್ಚಲು ಆಗಲ್ಲ ನೋಡಿ, ಅಲ್ಲಿ ಸ್ವಲ್ಪ ದಿನ ನವರಂಧ್ರಗಳನ್ನು ಮುಚ್ಚಿಕೊಂಡೇ ಇದ್ದ ಕಸ್ತೂರಿ ನಾಗರಾಜ ಸ್ಥಳೀಯ ರಾಜಕಾರಣಿಗಳಿಗೆ ಚೆನ್ನಾಗಿ ಬೆಣ್ಣೆ ಮಸಾಜ್ ಮಾಡಿ ಮಾಡಿ ನಾಲ್ಕು ಕಾಸು ಸಂಪಾದಿಸಿದ. ಮುಂದೆ 2011ರ ಕೊನೆಯಲ್ಲಿ ಬಳ್ಳಾರಿಗೆ ವರ್ಗ ಆಗಿ ಬಂದು ವಕ್ಕರಿಸಿಕೊಂಡ.

       ಅನ್ನವಿಟ್ಟವರ ಅಂಗಳದಲ್ಲೇ ಹೇಲುವ ಜಾಯಮಾನ: 

ಕಸ್ತೂರಿ ನಾಗರಾಜ ಮಾತೆತ್ತಿದರೆ ತನಗೆ ಎಲ್ಲ ಗೊತ್ತು ಎನ್ನುತ್ತಾನೆ. ತನಗೆ ತಿಳಿಯದ ವಿಷಯವೇ ಜಗತ್ತಿನಲ್ಲಿ ಇಲ್ಲ ಎಂಬಂತೆ ಮಾತನಾಡುತ್ತಾನೆ. ಆದರೆ ಅಸಲಿಗೆ ಇರುವ ವಿಷಯ ಏನೆಂದರೆ ಇವನು ತನಗೆ ಗೊತ್ತಿರುವುದನ್ನೇ ರೋಚಕವಾಗಿ ಹೇಳುತ್ತಾನೆ. ಅಧಿಕಾರಸ್ಥರಿಗೆ ಬೆಣ್ಣೆ ಮಸಾಜ್ ಮಾಡುವುದು, ಅವರನ್ನು ಹೊಗಳಿ ಅಟ್ಟಕ್ಕೆ ಏರಿಸುವುದು, ಹಗಲೂ ರಾತ್ರಿ ಭಜನೆ ಮಾಡುವುದು ಈತನ ಹ್ಯಾಬಿಟ್. ಈತ ಅಧಿಕಾರಸ್ಥರ, ರಾಜಕಾರಣಿಗಳ, ಅಧಿಕಾರಿಗಳ, ದುಡ್ಡಿರುವ ಶ್ರೀಮಂತರನ್ನು ಅದೆಷ್ಟು ಹೊಗಳುತ್ತಾನೆಂದರೆ ಈತನ ನಾಲಿಗೆಗೆ ಅಷ್ಟು ಶಕ್ತಿ ಇದೆ. ಅಗತ್ಯ ಇರಲಿ, ಇಲ್ಲದಿರಲಿ ಎಲ್ಲಾ ವಿಷಯಗಳಲ್ಲೂ ತಲೆ ತೂರಿಸುವುದು ಈತನಿಗಿರುವ ರೋಗ. ಈ ರೋಗದಿಂದಾಗಿಯೇ ಇಡೀ ಬಳ್ಳಾರಿ ಜಿಲ್ಲೆಯ ಜನರಿಗೆ ಇವನು ತಲೆ ನೋವಾಗಿದ್ದಾನೆ. ಪಕ್ಕದಲ್ಲಿರುವ ವ್ಯಕ್ತಿ ಒಳ್ಳೆ ಬಟ್ಟೆ ಹಾಕಿದರೆ ಸಹಿಸಿಕೊಳ್ಳಲಾಗದ ಇವನ ಬಗ್ಗೆ ಈಗ ಇಡೀ ಬಳ್ಳಾರಿ ಜಿಲ್ಲೆಯ ಜನರಲ್ಲಿ ಅಸಹನೆ ತುಂಬಿ ತುಳುಕುತ್ತಿದೆ. ಈತನ ಕಳ್ಳಾಟ, ಮಳ್ಳಾಟಗಳನ್ನು ನೋಡಿ ನೋಡಿ ಬೇಸತ್ತು ಹೋದವರು ಎಷ್ಟು ಜನರೋ ಗೊತ್ತಿಲ್ಲ. ಹಾಗೆ 2011ರಲ್ಲಿ ಬಳ್ಳಾರಿಗೆ ಬಂದ ನಾಗರಾಜ ಇಲ್ಲಿಯವರೆಗೆ ಹಲವು ಜನ ರಾಜಕಾರಣಿಗಳ ನೆರಳಿನಲ್ಲಿ ಬದುಕಿದ, ಬದುಕು ಕಟ್ಟಿಕೊಂಡ. ಆಗಿನ ಜೆಡಿಎಸ್ ಮುಖಂಡ, ಮಾಜಿ ಶಾಸಕ ಸೂರ‍್ಯನಾರಾಯಣ ರೆಡ್ಡಿ, ಪಿ.ಟಿ.ಪರಮೇಶ್ವರ್ ನಾಯ್ಕ್, ಆನಂದ್‌ಸಿಂಗ್, ಸಂತೋಷ ಲಾಡ್, ಭರತ್ ರೆಡ್ಡಿ ಹೀಗೆ ಸಾಲು ಸಾಲು ರಾಜಕಾರಣಿಗಳಿಗೆ ಬೆಣ್ಣೆ ಮಸಾಜ್ ಮಾಡಿಯೇ ಹಣ ಹಾಗೂ ಹೆಸರು ಸಂಪಾದಿಸಿದ ಕಸ್ತೂರಿ ನಾಗರಾಜ ಉಂಡ ಮನೆ, ಗಳ ಹಿರಿಯುತ್ತಲೇ ಬಂದ. ಅನ್ನ ಇಟ್ಟವರ ಮನೆ ಅಂಗಳದಲ್ಲೇ ಹೇಲುತ್ತ ಬಂದ. ಆದರೆ ದುರಂತ ಎಂದರೆ ಯಾವ ರಾಜಕಾರಣಿಗಳೂ ಇವನನ್ನು ಕತ್ತು ಹಿಡಿದು ಆಚೆ ನೂಕಲಿಲ್ಲ ಎಂಬುದೇ ವಿಚಿತ್ರ. ಯಾಕೆಂದರೆ ಇವನ ತುಟಿ ಭಜನೆ ಆ ರೀತಿ ರಾಜಕಾರಣಿಗಳನ್ನು ಮಾಯ ಮಾಡಿರುತ್ತಿತ್ತು.

        ಸೂರ‍್ಯನಾರಾಯಣ ರೆಡ್ಡಿ ವಿರುದ್ಧವೇ ಅಪಪ್ರಚಾರ:

ಹೆಚ್.ಡಿ.ಕುಮಾರಸ್ವಾಮಿ ಅವರ ಮಾಲೀಕತ್ವದ ಚಾನೆಲ್ ಕಸ್ತೂರಿ ಟಿವಿಯ ವರದಿಗಾರನಾಗಿ ಬಳ್ಳಾರಿಗೆ ಬಂದ ನಾಗರಾಜ ಮೊದಲು ಆಪ್ತ ಆದದ್ದು ಆಗಿನ ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಎಂಎಲ್‌ಎ ಸೂರ‍್ಯನಾರಾಯಣ ರೆಡ್ಡಿ ಅವರಿಗೆ. ಜೆಡಿಎಸ್ ಚಾನೆಲ್ ಎಂದೇ ಹೆಸರಾಗಿದ್ದ ಕಸ್ತೂರಿ ಟಿವಿಯನ್ನು ನೋಡುವವರು ದಿಕ್ಕಿರಲಿಲ್ಲ. ಇನ್ನು ಆ ಚಾನೆಲ್ಲಿನ ವರದಿಗಾರನನ್ನು ಯಾರು ಕೇಳುತ್ತಾರೆ? ಆದರೆ ಈ ಭೂಪ ಮಾರ್ಕೆಟ್ಟೇ ಇಲ್ಲದ ಅಂತಹ ಚಾನೆಲ್ಲಿನಲ್ಲಿದ್ದುಕೊಂಡೇ ಮಾಡಬೇಕಾದ ಮಾಡಬಾರದ ಎಲ್ಲಾ ಕೆಲಸ ಮಾಡಿದ. ಸೂರ‍್ಯನಾರಾಯಣ ರೆಡ್ಡಿ ಅವರ ಮೂಲಕ ರಾಜಕೀಯವಾಗಿ ಪ್ರಭಾವ ಬೆಳೆಸಿಕೊಂಡ. ಆರ್‌ಟಿಐ ಕಾರ್ಯಕರ್ತರ ಮೂಲಕ ನಾನಾ ಇಲಾಖೆಗಳಿಗೆ ಅರ್ಜಿ ಹಾಕಿಸಿ, ಡೀಲ್ ಮಾಡಿ ದುಡ್ಡು ಮಾಡಿಕೊಂಡ. ಹರಾಮಿ ಕೆಲಸ ಮಾಡಿ ಸಿಕ್ಕು ಬಿದ್ದರೆ ರಕ್ಷಣೆಗೆ ಹಿಂದೆ ರೆಡ್ಡಿ ಇದ್ದರು. ಹೀಗಾಗಿ ಅವರನ್ನು ಒಂದು ಮೆಟ್ಟಿಲಿನ ಹಾಗೆ ಬಳಸಿಕೊಂಡ. ಇವನ ನಾಲಾಯಕ್ ಬುದ್ದಿಯ ಬಗ್ಗೆ ಗೊತ್ತಿರದ ಸೂರ‍್ಯನಾರಾಯಣ ರೆಡ್ಡಿ ಇವನನ್ನು ನಂಬಿದರು. ಮಗನ ಹಾಗೆ ನೋಡಿಕೊಂಡರು. ಲಕ್ಷ ಲಕ್ಷ ದುಡ್ಡು ಕೊಟ್ಟರು. ಪಕ್ಕದಲ್ಲೇ ಕೂರಿಸಿಕೊಂಡು ಊಟ ಮಾಡಿಸಿದರು. ಇವನಿಗೆ ಎಲ್ಲಾ ವಿಷಯಗಳಲ್ಲಿ ಬೆಂಬಲವಾಗಿ ನಿಂತರು. ಆದರೆ ರೆಡ್ಡಿ ಅವರಿಂದ ಎಲ್ಲವನ್ನೂ ಹೊಡೆದುಕೊಂಡ ನಾಗರಾಜ 2018 ಕ್ಕೆ ಬದಲಾಗಿ ಹೋದ. ಹಣ ಮತ್ತು ಅಧಿಕಾರದ ಹಪಾಹಪಿತನ ಇದ್ದ ನಾಗರಾಜ 2008ರಿಂದ ಮಾಜಿ ಶಾಸಕರಾಗಿ ರಾಜಕೀಯ ಅಧಿಕಾರ ಇಲ್ಲದೇ ಕೂತಿದ್ದ ಸೂರ‍್ಯನಾರಾಯಣ ರೆಡ್ಡಿ ಅವರಲ್ಲಿ ಆಸಕ್ತಿ ಕಳೆದುಕೊಂಡಿದ್ದ, ಅಷ್ಟೊತ್ತಿಗೆ ಕೂಡ್ಲಿಗಿಯಿಂದ ಬಳ್ಳಾರಿ ಗ್ರಾಮೀಣಕ್ಕೆ ಬಂದ ಬಿ.ನಾಗೇಂದ್ರ ಅವರಿಗೆ ಕ್ಲೋಜ್ ಆಗಿದ್ದ. ಇತ್ತ ನಾಗೇಂದ್ರ ಕ್ಲೋಜ್ ಆಗ್ತಿದ್ದಂತೆ ಅತ್ತ ಸೂರ‍್ಯನಾರಾಯಣ ರೆಡ್ಡಿ ಅವರ ಬಗ್ಗೆಯೇ ಅಪಪ್ರಚಾರ ಆರಂಭಿಸಿದ. ಸೂರ‍್ಯನಾರಾಯಣ ರೆಡ್ಡಿ ಅವರ ಜೊತೆ ಇದ್ದವರಿಗೆ ಅಧಿಕಾರ ಸಿಗಲ್ಲ, ಅವರು ಯಾರನ್ನೂ ಬೆಳೆಸಲ್ಲ ಅಂತ ಅಪಪ್ರಚಾರ ಆರಂಭಿಸಿದ. ರೆಡ್ಡಿ ಅವರ ಕಂಪೌಂಡಿಗೆ ಹೋಗುವ ರಾಜಕಾರಣಿಗಳು ಅಧಿಕಾರ ಕಾಣಲ್ಲ ಅಂತ ವದಂತಿ ಹಬ್ಬಿಸಲು ಶುರು ಮಾಡಿದ. ಈ ವಿಷಯ ಗೊತ್ತಾಗುತ್ತಿದ್ದಂತೆ ಸೂರ‍್ಯನಾರಾಯಣ ರೆಡ್ಡಿ ಅವರು ನಾಗರಾಜನನ್ನು ದೂರ ಇಟ್ಟರು. 2018 ರಿಂದ 2023ರವರೆಗೆ ಐದು ವರ್ಷಗಳಲ್ಲಿ ಈ ನಾಗರಾಜ ನಾಗೇಂದ್ರ ಅವರಿಗೆ ಎಷ್ಟು ಪರಮಾಪ್ತ ಆದನೆಂದರೆ ಏನು ಊಟ ಮಾಡಬೇಕು ಅಂತ ನಾಗರಾಜನನ್ನು ಕೇಳುವಷ್ಟು ನಾಗೇಂದ್ರರವರು ನಾಗರಾಜನನ್ನು ನಂಬಿದರು. ಅದೇ ಈಗ ನಾಗೇಂದ್ರ ಅವರಿಗೆ ಮುಳುಗು ನೀರು ತಂದಿತು ಎನ್ನುತ್ತಾರೆ ಬಳ್ಳಾರಿಯ ಜನ.

                     ಬಳಸಿಕೊಳ್ಳಲು ಯಾರಾದರೇನು?:

ಜನರನ್ನು ಕಾಲೊರೆಸುವ ಮ್ಯಾಟಿನ ಹಾಗೆ ಬಳಸಿಕೊಳ್ಳುವ ನಾಗರಾಜ ತನ್ನ ಸಮೀಪ ಬರುವ ಎಲ್ಲರನ್ನೂ ಬಳಕೆ ಮಾಡಿಕೊಂಡು ಬಿಸಾಡುತ್ತ ಬಂದಿದ್ದಾನೆ. ದುಡ್ಡ ಸಿಗುತ್ತದೆಯೆಂದರೆ ಅಮ್ಮನನ್ನು ಡ್ಯಾನ್ಸ್ ಮಾಡಿಸುವ ಕ್ಯಾಟಗರಿಯವನಾದ ಇವನು ಇಲ್ಲಿಯವರೆಗೆ ತನ್ನ ಸ್ನೇಹಿತರನ್ನೂ ಬಿಟ್ಟಿಲ್ಲ. ಬಳ್ಳಾರಿಗೆ ಹೊಸದರಲ್ಲಿ ಇವನ ಬುದ್ದಿ ನೋಡಿದ ಬಹಳ ಜನ ಪತ್ರಕರ್ತರು ಇವನನ್ನು ದೂರ ಇಟ್ಟರು. ಆದರೆ, ಈ ಹಿಂದೆ ಇಂಗ್ಲೀಷ್ ಪತ್ರಿಕೆಯ ವರದಿಗಾರ ಆಗಿದ್ದ ಶಿವಕುಮಾರ್ ಮಾಳಿಗೆ, ಟಿವಿ ವರದಿಗಾರರಾದ ಇಮಾಮ್ ಗೋಡೆಕರ್, ಬಸವರಾಜ ಅವರನ್ನು ಕೂಡ ಬಳಸಿಕೊಂಡ. ಬಸವರಾಜ, ಇಮಾಮ್ ಇವನು ಮೂವರೂ ಒಂದೇ ಸಿಂಡಿಕೇಟ್ ಅಂತ ಬಳ್ಳಾರಿಯಲ್ಲಿ ಹೆಸರಾಗಿತ್ತು. ಆರಕ್ಕೇರದ ಮೂರಕ್ಕಿಳಿಯದ ಮಾರ್ಕೆಟ್ ಇಲ್ಲದ ಕಸ್ತೂರಿ ಚಾನೆಲ್ಲಿಗೆ ವರದಿಗಾರ ಆಗಿದ್ದ ಇವನು ಈ ಸ್ನೇಹಿತರ ಮೂಲಕವೇ ತನ್ನನ್ನು ಪರಿಚಯ ಮಾಡಿಕೊಂಡ. ಅವರ ಜೊತೆ ತಿರುಗಾಡಿ ತನ್ನನ್ನು ಬ್ರಾಂಡ್ ಮಾಡಿಕೊಂಡ. ಅವರ ಹೆಸರಲ್ಲಿ ದುಡ್ಡೂ ಮಾಡಿಕೊಂಡ. ಮುಂದೆ ಏನಾಯಿತೆಂದರೆ ನಾಗೇಂದ್ರ ಅವರಿಗೆ ಆಪ್ತ ಆಗುತ್ತಿದ್ದಂತೆ(ಬಸವರಾಜ, ಇಮಾಮ್ ಗೋಡೆಕರ್) ಇವರನ್ನು ಅವಾಯ್ಡ್ ಮಾಡಲು ಶುರು ಮಾಡಿದ. ಅವ್ರಿಗೆ ಗೊತ್ತಿಲ್ಲದ ಹಾಗೆ ವ್ಯವಹಾರಗಳನ್ನು ಮಾಡಲು ಶುರು ಮಾಡಿದ. ಬಸವರಾಜಗೆ ಗೊತ್ತಿಲ್ಲದ ಹಾಗೆ ಟಿವಿ9 ಹೆಸರಿನಲ್ಲಿ ಹಣ ಮಾಡಿಕೊಂಡ. ಇವನ ಹಲ್ಕಾ ಕೆಲಸಗಳು ಗೊತ್ತಾಗಿ ಅವರು ಕೆಲ ಕಾಲ ಇವನನ್ನು ದೂರ ಇಟ್ಟರು. ಅಧಿಕಾರಿ ಒಬ್ಬರಿಗೆ ದುಂಬಾಲು ಬಿದ್ದು ರಾಜಿ ಮಾಡಿಕೊಂಡ. ಮತ್ತೆ ಕೆಲ ದಿನಗಳಿಗೆ ಹಳೆ ಚಾಳಿ ಮುಂದುವರೆಸಿದ. ಹೆಸರಿಗೆ ಮೂವರು ಆದರೆ ಲಾಭಗಳನ್ನು ಮಾತ್ರ ತಾನೊಬ್ಬನೇ ಮಾಡಿಕೊಳ್ಳಲು ಶುರು ಮಾಡಿದ. ಇದರಿಂದ ಬೇಸತ್ತ ಅವರು ಇವನಿಂದ ದೂರವಾದರು.

                          ಕೋಟಿ ಕೋಟಿ ಸಂಪಾದನೆ: 

ಕಳೆದ ಆರು ವರ್ಷಗಳಲ್ಲಿ ಕಸ್ತೂರಿ ನಾಗರಾಜ ಕೋಟ್ಯಾಂತರ ರೂಪಾಯಿಗಳನ್ನು ಸಂಪಾದನೆ ಮಾಡಿದ್ದಾನೆ ಎಂದು ಹೇಳುತ್ತಾರೆ ಹಲವು ಜನ. ಅವನು ಕಟ್ಟಿಸಿರುವ ಮನೆಯೇ ಏನಿಲ್ಲವೆಂದರೂ ಒಂದೂವರೆ ಕೋಟಿಯದ್ದು. ಮನೆ ಇನ್ನೂ ಪೂರ್ಣ ಕಟ್ಟುವ ಮೊದಲೇ ಗ್ರಾನೈಟ್ ತಂದು ಇಟ್ಟುಕೊಂಡಿದ್ದ ಇವನು ಇನ್ನು ಮನೆ ಕಟ್ಟಲು ಅದು ಹೇಗೆ ಹಣ ಹೊಂದಿಸಿರಬಹುದೆಂದು ನೀವೇ ಊಹಿಸಬಹುದು. 2018ರಿಂದ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಓಪನ್ನಾಗೇ ಇಳಿದ ನಾಗರಾಜ ಇಂದು ಬಳ್ಳಾರಿಯ ಎರಡು ಲೇಔಟ್‌ಗಳಲ್ಲಿ, ಚಿತ್ರದುರ್ಗದಲ್ಲಿ 16 ಎಕರೆಗಳ ಒಂದು ಲೇಔಟ್‌ನಲ್ಲಿ ಪಾಲುದಾರ ಆಗಿದ್ದಾನೆ. ಇನ್ನು ನಾಗೇಂದ್ರ ಸಚಿವರಾದ ನಂತರ ಅವರ ಹೆಸರಿನಲ್ಲಂತೂ ಕೋಟ್ಯಾಂತರ ರೂಪಾಯಿಗಳನ್ನು ದೋಚಿದ್ದಾನೆ. ಇವನು ಅದೆಷ್ಟು ಹಣ ಸಂಪಾದಿಸಿದ್ದಾನೆ ಎಂದರೆ ನಾಗೇಂದ್ರ ಅವರ ಆಪ್ತ ಬಳಗದಲ್ಲಿ ಇರುವವರಿಗೆ ಇವನ ಬಗ್ಗೆ ಎಲ್ಲಿಲ್ಲದ ಅಸಹನೆ ಹುಟ್ಟುಕೊಂಡಿದೆ. ಇವನಿಗೆ ವಿಷ ಹಾಕಿ ಸಾಯಿಸಿದರೂ ಕಮ್ಮಿ ಎನ್ನುತ್ತಾರೆ ಅವರು. 

   ಕಿವಿ ಕಚ್ಚುವುದು, ಬೇರೆಯವರ ಬಗ್ಗೆ ಇಲ್ಲದ್ದು ಹೇಳುವುದು: 

ಸಚಿವರಾದ ನಾಗೇಂದ್ರ ಅವರು ಇವನನ್ನು ಇನ್ನಿಲ್ಲದಂತೆ ನಂಬಿದರು. ಇವನಿಗೆ ನಾಗೇಂದ್ರ ಅವರು ನೀಡುವ ಮಹತ್ವ ಕಂಡು ಎಲ್ಲರೂ ಬೆರಗಾದರು. ನಾಗೇಂದ್ರ ಅವರಿಗೆ ಸಂಬಂಧಿಸಿದ ಯಾವುದೋ ವಿಷಯ ಇವನಿಗೆ ಗೊತ್ತಿದೆ. ಅವರ ಯಾವುದೋ ವೀಕ್‌ನೆಸ್ ಹಿಡಿದುಕೊಂಡು ಇವನು ಆಟ ಆಡುತ್ತಿದ್ದಾನೆ ಎಂದು ಕೆಲವರು ಮಾತನಾಡಿಕೊಂಡರು. ಶಾಸಕರ ಬಗ್ಗೆ ಇಲ್ಲ ಸಲ್ಲದ್ದು ಹೇಳಿ ಶಾಸಕರಿಗೂ ನಾಗೇಂದ್ರ ಅವರ ನಡುವಿನ ಸಂಬಂದಕ್ಕೆ ಹುಳಿ ಹಿಂಡಿದ. ತನಗೆ ಬೇಡ ಎನಿಸಿದ ಬೆಂಬಲಿಗ ಕಾರ್ಯಕರ್ತರ ಬಗ್ಗೆ ಅಪಪ್ರಚಾರ ಮಾಡಿದ. ಮುಂದೊಂದು ಹಿಂದೊಂದು ಮಾತನಾಡಿ ಜನರಿಗೆ ಒಳ್ಳೆಯವನೆನಿಸಿದ. ಆದರೆ ನಾಗೇಂದ್ರ ಅವರಿಗೆ ಇವನ ನೀಚತನ ಅರ್ಥ ಆಗಲಿಲ್ಲ. ಇವನ ಮಾತು ಕೇಳುತ್ತ ಹೋದರು. ಶಾಸಕರು, ನಿಷ್ಠವಂತ ಕಾರ್ಯಕರ್ತರು ದೂರ ಆದರು. ಮೊನ್ನೆ ಇಡಿ ದಾಳಿ ನಡೆದ ಸಂದರ್ಭ ನಾಗೇಂದ್ರ ಅವರ ಬಳ್ಳಾರಿಯ ಮನೆ ಬಳಿ ಪತ್ರಕರ್ತರನ್ನು ಬಿಟ್ಟರೆ ಒಂದೇ ಒಂದು ನಾಯಿ ಕೂಡ ಸುಳಿಯಲಿಲ್ಲ. ನಾಲ್ಕು ಸಲ ಶಾಸಕರಾಗಿ, ಜಿಲ್ಲೆಯಾದ್ಯಂತ ಬೆಂಬಲಿಗರನ್ನು ಹೊಂದಿರುವ ನಾಗೇಂದ್ರ ಅವರ ಅವನತಿಗೆ ಈ ಕಸ್ತೂರಿ ನಾಗರಾಜನೇ ಕಾರಣ ಎನ್ನುತ್ತಿದ್ದಾರೆ ಬಳ್ಳಾರಿಯ ಜನ. ನಾಗೇಂದ್ರ ಅವರು ಇನ್ನಾದರೂ ಈ ನಾಯಿ ಅಂತವನನ್ನು ಕತ್ತು ಹಿಡಿದು ದೂರ ತಳ್ಳಬೇಕು. ತಮ್ಮನ್ನು, ತಮ್ಮ ಅಧಿಕಾರವನ್ನು ರಕ್ಷಣೆ ಮಾಡುವವರನ್ನು ಹತ್ತಿರ ಇಟ್ಟುಕೊಳ್ಳಬೇಕು. ಹಾಳಾಗಿ ಹಳ್ಳ ಹಿಡಿದಿರುವ ಬಳ್ಳಾರಿ ಜಿಲ್ಲೆಯ ರಾಜಕೀಯಕ್ಕೆ, ಅಭಿವೃದ್ಧಿಗೆ ಮಾರಕ ಆಗಿರುವ ಇವನನು ಊರು ಬಿಡಿಸಬೇಕು.

                             ಹಂದಿ ಮಾಂಸಪ್ರಿಯ

ಎಸ್ಟಿ ಸಮಾಜದ ಜನರ ಮುಂದೆ ತಾನು ಎಸ್ಟಿ ಎಂದು, ಎಸ್ಸಿ ಜನರ ಮುಂದೆ ತಾನು ಎಸ್ಸಿ ಎಂದು ವೀರಶೈವ ಲಿಂಗಾಯತ ಸ್ವಾಮಿಗಳ ಮುಂದೆ ತಾನು ಸ್ವಾಮಿ ಎಂದು ಹೇಳಿಕೊಳ್ಳುವ ನಾಗರಾಜ ಭಾರೀ ಮಾಂಸಪ್ರಿಯ. ಇವನಿಗೆ ಕಾಡು ಹಂದಿ ಮಾಂಸವೆಂದರೆ ಬಹಳ ಇಷ್ಟ. ಎದುರಿಗೆ ಇರುವ ಜನರಿಗೆ ಶಾಸ್ತ್ರ, ನಿಯಮ, ಆಚಾರ ಹೇಳುವ ಇವನು ಕೆಜಿಗಟ್ಟಲೇ ಮಾಂಸ ತಿನ್ನುತ್ತಾನೆ. ಬಿಸಿ ಬಿಸಿ ಬಿರಿಯಾನಿ, ಪಾಯಾ, ತಲೆ ಮಾಂಸ, ಬೋಟಿ, ಕಲೀಜಿ ಎಂದರೆ ಬಾಯಿ ಬಾಯಿ ಬಿಡುತ್ತಾನೆ. ಆಲ್ಕೋಹಾಲ್ ಕುಡಿಯುತ್ತಾನಾದರೂ ಮಿತಿ ಮೀರಲ್ಲ. ಆದರೆ ಪಕ್ಕ ಕೂತವರಿಗೆ ಕಂಟಮಟ್ಟ ಕುಡಿಸಿ ಮಜಾ ನೋಡುತ್ತಾನೆ. ಮಾಂಸ ಬಿಟ್ಟರೆ ಇವನು ತಿನ್ನುವುದು ಹಣವನ್ನೇ ಎನ್ನುತ್ತಾರೆ ಇವನನ್ನು ಹತ್ತಿರದಿಂದ ನೋಡಿದವರು. ಬಾಡಿ ಬಿಲ್ಡಿಂಗ್ ಮಾಡುವುದು, ಹಣ ಮಾಡುವುದು, ಅಧಿಕಾರಸ್ತರು, ಶ್ರೀಮಂತರಿಗೆ ಬೆಣ್ಣೆ ಮಸಾಜ್ ಮಾಡಿ ಕೆಲಸ ಗಿಟ್ಟಿಸಿಕೊಳ್ಳುವುದೇ ಇವನ ದಿನನಿತ್ಯದ ಕೆಲಸ. 

            ನಾಗೇಂದ್ರರನ್ನು ಹಾದಿ ತಪ್ಪಿಸಿದ್ದೇ ನಾಗರಾಜ

ನಾಲ್ಕು ಸಲ ಶಾಸಕರಾಗಿ, ಸಚಿವರಾಗಬೇಕೆಂದು ಮೂವತ್ತು ವರ್ಷಗಳಿಂದ ಕನಸು ಕಂಡಿದ್ದ ನಾಗೇಂದ್ರ ಅವರಿಗೆ ಇಂದು ಇಂತಹ ಸ್ಥಿತಿ ಬರಲು ಇವನೇ ಕಾರಣ ಎನ್ನುತ್ತಾರೆ ನಾಗೇಂದ್ರ ಅವರ ಆಪ್ತರು. ನಾಗೇಂದ್ರ ಅವರು ಸಚಿವ ಆಗುತ್ತಿದ್ದಂತೆ ದುಂಬಾಲು ಬಿದ್ದು ಮಾಧ್ಯಮ ಸಲಹೆಗಾರನಾಗಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ಸೇರಿದ ಇವನು, ಕಚೇರಿ ಸಿಬ್ಬಂದಿ ಹೆಸರಿನಲ್ಲಿ ಆದೇಶ ಪತ್ರ ಪಡೆದು, ತಿಂಗಳಿಗೆ ಮೂವತೈದು ಸಾವಿರ ಸಂಬಳ ಫಿಕ್ಸ್ ಮಾಡಿಸಿಕೊಂಡ. ಕೆಲಸಕ್ಕೆ ಸೇರಿದ್ದು ಮಾಧ್ಯಮ ಸಲಹೆಗಾರ ಎಂದು ಇದ್ದರೂ ಇವನು ತನಗೆ ಸಂಬಂಧವೇ ಇಲ್ಲದ ಎಲ್ಲಾ ವಿಷಯಗಳಲ್ಲೂ ಸಲಹೆ ನೀಡಿದ ಪರಿಣಾಮ ನಾಗೇಂದ್ರ ಅವರು ಇಂದು ಜೈಲಿನ ಭೀತಿ ಎದುರಿಸುವಂತಾಗಿದೆ. ಎಸ್ಟಿ ನಿಗಮದ ಹಗರಣದ ಐಡಿಯಾ ಕೊಟ್ಟಿದ್ದೇ ಇವನು ಎನ್ನುತ್ತಿದ್ದಾರೆ. ಬಳ್ಳಾರಿ ಜಿಲ್ಲೆಗೆ ಜಿಲ್ಲಾಧಿಕಾರಿ ವೆಂಕಟೇಶ್ ಅವರನ್ನು ತರಲು ಪ್ಲಾನ್ ಮಾಡಿ ನಾಗೇಂದ್ರ ಅವರಿಗೆ ಶಾಸಕರು ವಿರೋಧ ಕಟ್ಟಿಕೊಳ್ಳುವ ಹಾಗೆ ಮಾಡಿದ್ದೇ ಇವನು. ನಾಗೇಂದ್ರ ಅವರನ್ನು ಹೊಗಳಿ ಹೊಗಳಿ ಅಟ್ಟಕ್ಕೆ ಏರಿಸಿ ಅವರನ್ನು ಜಿಲ್ಲೆಯ ಎಲ್ಲಾ ಶಾಸಕರಿಂದ, ನಾಯಕರಿಂದ, ಬೆಂಬಲಿಗರಿಂದ ನಿಷ್ಠಾವಂತ ಕಾರ್ಯಕರ್ತರಿಂದ ದೂರ ಮಾಡಿದ ಇವನು, ವರ್ಗಾವಣೆ, ಗುತ್ತಿಗೆ, ಲೆಟರ್ ಕೊಡಿಸುವುದರಲ್ಲಿ ಸಂಪಾದಿಸಿದ್ದು ಮಾತ್ರ ಕೋಟಿ ಕೋಟಿ. ಇವತ್ತಿನ ಡೇಟಿಗೆ ಇವನು ನಾಗೇಂದ್ರ ಅವರು ಸಚಿವರಾದ ನಂತರ ಒಂದು ವರ್ಷದಲ್ಲಿ ಸಂಪಾದಿಸಿದ್ದು ಐದು ಕೋಟಿ ರೂಪಾಯಿ ಎನ್ನುತ್ತಾರೆ ಕೆಲವರು. ಎಸ್ಟಿ ನಿಗಮದ ಹಣದಲ್ಲಿ ಇವನಿಗೂ ಪಾಲು ಸಂದಾಯ ಆಗಿದೆ ಎನ್ನುತ್ತಾರೆ. ವಾಸ್ತವ ತನಿಖೆ ನಂತರವೇ ಗೊತ್ತಾಗಬೇಕು. 

        ಇಡೀ ವ್ಯವಸ್ಥೆ ಹಾಳು ಮಾಡಿದ ಕಸ್ತೂರಿ ನಾಗರಾಜ: 

ನಾಗೇಂದ್ರ ಅವರು 2023ರಲ್ಲಿ ನಾಲ್ಕನೇ ಬಾರಿಗೆ ಶಾಸಕರಾಗಿ ಗೆದ್ದ ಮೇಲೆ ಇವನು ಬಹಳ ಆಪ್ತನಾದ. ನಾಗೇಂದ್ರ ಅವರ ಬಳಿ ಜಿಲ್ಲೆಯ ಎಲ್ಲ ಶಾಸಕರ ಬಗ್ಗೆ ಅಪನಂಬಿಕೆ ಹುಟ್ಟಿಸಿದ. ನೀವು ಮಂತ್ರಿ, ನೀವು ಬಾಸ್, ನಿಮ್ಮ ಮಾತು ಎಲ್ಲರೂ ಕೇಳಬೇಕು. ನೀವು ಯಾರಿಗೂ ಬಗ್ಗಬಾರದು. ನೀವು ಅಧಿಕಾರ ಚಲಾಯಿಸಿ ಎಂದು ಪುಂಗತೊಡಗಿದ. ಜಿಲ್ಲೆಯ ನಗರದ ಹುದ್ದೆಗಳ ನೇಮಕಾತಿಯಲ್ಲೂ ಕೈಯಾಡಿಸಿದ. ಆಕಾಂಕ್ಷಿಗಳಿಂದ ಲಕ್ಷಾಂತರ ರೂಪಾಯಿ ಹಣ ಹೊಡೆದುಕೊಂಡ. ಜಿಲ್ಲೆಯಲ್ಲಿ ದೋ ನಂಬರ್ ದಂಧೆಗಳಾದ ಮಟಕಾ, ಇಸ್ಪೀಟ್, ಅಕ್ರಮ ಮರಳು ಸಾಗಣೆ, ಸ್ಪಾಂಜ್ ಐರನ್ ಫ್ಯಾಕ್ಟರಿ ಹೀಗೆ ಒಂದಲ್ಲ ಎರಡಲ್ಲ ಎಲ್ಲದರಲ್ಲೂ ತಲೆ ತೂರಿಸಿದ. ಮಾಮೂಲು ಫಿಕ್ಸ್ ಮಾಡಿಕೊಂಡ. ನಾಗೇಂದ್ರ ಅವರಿಗೆ ಗೊತ್ತಿಲ್ಲದಂತೆ ಎಷ್ಟೋ ಅಧಿಕಾರಿಗಳಿಂದ ಹಣ ಪೀಕಿದ. ಪಿಡಿಓಗಳನ್ನೂ ಬಿಡಲಿಲ್ಲ. ಎಲ್ಲರಿಂದ ಹಣ ದೋಚಿದ. ನಾಗೇಂದ್ರ ಅವರ ಹೆಸರು ಹೇಳಿ ಮೊಬೈಲು, ಮನೆಗೆ ಬೇಕಾದ ಎಷ್ಟೋ ವಸ್ತುಗಳನ್ನು ತರಿಸಿಕೊಂಡ. ಇವನು ಅದ್ಯಾವ ಪರಿ ಹಣ ಮಾಡಲು ಶುರುವಿಟ್ಟುಕೊಂಡನೆಂದರೆ ಕೆಲ ತಿಂಗಳ ಹಿಂದೆ ವಿಮ್ಸ್ ನಿರ್ದೇಶಕ ಗಂಗಾಧರಗೌಡರ ಮೇಲೆ ಅತ್ಯಾಚಾರದ ಆರೋಪ ಬಂದಾಗ ಆತನ ಪರ ಮಾಧ್ಯಮದವರಿಗೆ ಹಣ ಕೊಟ್ಟು ಮ್ಯಾನೇಜ್ ಮಾಡಿದ. ಇವನು ಅದೆಷ್ಟು ಕ್ಲೋಜ್ ಎಂದರೆ ಇವರಿಬ್ಬರೂ ಎಣ್ಣೆ ಹೊಡೆಯಲು ಖಾಸಗಿ ಹೊಟೇಲಿನಲ್ಲಿ ರೂಮು ಮಾಡುತ್ತಾರೆ.

                        ಕಸ್ತೂರಿ ನಾಗನಿಗೆ ಇಡಿ ಡ್ರೀಲ್ 

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಗಣಿನಾಡು ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರರ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮೊನ್ನೆ ಬುಧವಾರ ಇಡೀ ದಿನ ದಾಳಿ ನಡೆಸಿ ಮಹತ್ವದ ದಾಖಲೆ ಸಂಗ್ರಹಿಸಿದರು. ಅಲ್ಲದೇ ನಾಗೇಂದ್ರ ಆಪ್ತರನ್ನ ಕರೆಸಿ ಗಂಟೆಗಳ ಕಾಲ ಡ್ರಿಲ್ ಮಾಡಿದರು. ನಿರಂತರ 12 ಗಂಟೆಗಳ ಕಾಲ ತಲಾಶ್ ನಡೆಸಿದ ಇಡಿ ಅಧಿಕಾರಿಗಳು ದಾಳಿ ಮುಗಿಸಿ, ಎರಡು ಬ್ಯಾಗ್ ದಾಖಲೆಗಳೊಂದಿಗೆ ತೆರಳಿದ್ದಾರೆ.
ಇಡಿ ಅಧಿಕಾರಿಗಳು ಇಡೀ ದಿನ ಬಳ್ಳಾರಿಯ ನೆಹರು ಕಾಲೋನಿಯಲ್ಲಿನ ಮಾಜಿ ಸಚಿವ ನಾಗೇಂದ್ರರ ಮನೆ ಹಾಗೂ ಕಚೇರಿಯಲ್ಲಿ ತಲಾಶ್ ನಡೆಸಿದ್ದಾರೆ.
ದಾಳಿ ವೇಳೆ ನಾಗೇಂದ್ರ ಆಪ್ತ ಸಹಾಯಕ ಚೇತನ್ ಅವರನ್ನು ಇಡಿ ತೀವ್ರ ವಿಚಾರಣೆ ನಡೆಸಿದೆ. ಮನೆಯಲ್ಲಿದ್ದ ದಾಖಲೆಗಳು, ಕಂಪ್ಯೂಟರ್‌ನಲ್ಲಿದ್ದ ದಾಖಲೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದೆ. ಅಷ್ಟೇ ಅಲ್ಲದೇ ಕಚೇರಿಯಲ್ಲಿದ್ದ ಸಿಸಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲನೆ ನಡೆಸಿ, ಹಾರ್ಡ್ ಡಿಸ್ಕ್ ವಶ ಪಡಿಸಿಕೊಂಡಿದೆ. ನಾಗೇಂದ್ರ ಆಸ್ತಿ ವಿವರವನ್ನ ಪಡೆದು, ಹೊಸದಾಗಿ ಖರೀದಿ ಮಾಡಿದ ಮನೆ, ಜಮೀನು, ಕಾರಿನ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.


ಅಂದು ಬೆಳಗ್ಗೆಯಿಂದ ನಾಗೇಂದ್ರ ಆಪ್ತ ಸಹಾಯಕ ಚೇತನ್ ವಿಚಾರಣೆ ನಡೆಸಿದ್ದ ಇಡಿ ಮಧ್ಯಾಹ್ನ ನಾಗೇಂದ್ರರ ಮಾಧ್ಯಮ ಸಲಹೆಗಾರ ನಾಗರಾಜ್ ಅಲಿಯಾಸ್ ಕಸ್ತೂರಿ ನಾಗರಾಜ್ ನ ವಾಜಪೇಯಿ ಲೇಔಟ್ ನಲ್ಲಿರುವ  ಮನೆಯ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು ಕಸ್ತೂರಿ ನಾಗನ ಮನೆ ತಲಾಷ್ ಮಾಡಿ ಅಲ್ಲಿಂದ ಕಸ್ತೂರಿ ನಾಗನನ್ನ ಇಡಿ ಅಧಿಕಾರಿಗಳು ತಮ್ಮ ಕಾರಿನಲ್ಲೆ ನಾಗೇಂದ್ರರ ನೆಹರು ಕಾಲೋನಿಯ  ಕಚೇರಿಗೆ ಕರೆ ತಂದು ಸತತ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿ ಕಸ್ತೂರಿ ನಾಗನಿಗೆ ಡ್ರೀಲ್ ಮಾಡಿದ್ದಾರೆ. ನಾಗೇಂದ್ರ ಅವರ ಇತ್ತೀಚಿನ ವ್ಯವಹಾರಗಳು, ಆಸ್ತಿ ಖರೀದಿ ವಿಚಾರ ಹಾಗೂ ಕೆಲ ದಾಖಲೆಗಳ ಮಾಹಿತಿ ಕಸ್ತೂರಿ ನಾಗನಿಂದ ಪಡೆದಿದ್ದಾರೆ. ನಾಗೇಂದ್ರರ ಆಪ್ತರ ಅಕೌಂಟ್‌ಗಳಿಗೆ ಹೈದರಾಬಾದ್‌ನಿಂದ ಸುಮಾರು 20 ಕೋಟಿ ರೂ. ಹಣ ಬಂದಿದೆ ಎನ್ನುವ ಶಂಕೆ ಇದೆ. ಜೊತೆಗೆ ಈ ಹಣ ಬಂಗಾರದ ಅಂಗಡಿ ಮಾಲೀಕರಿಗೆ, ಮದ್ಯದ ಅಂಗಡಿ ಮಾಲೀಕರ ಅಕೌಂಟ್ ಹಾಕಲಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಎಲ್ಲ ಆಯಾಮಗಳಲ್ಲೂ ಇಡಿ ಅಧಿಕಾರಿಗಳು ತೀವ್ರ ತನಿಖೆ ನಡೆಸಿದ್ದಾರೆ. ಇದರ ಬೆನ್ನಲ್ಲೆ ಬಳ್ಳಾರಿಯ ನಾಗೇಂದ್ರ ಆಪ್ತರಿಗೆ ನಡುಕ ಶುರುವಾಗಿದೆ. ಇನ್ನು ಈ ಕಸ್ತೂರಿ ನಾಗನಿಗೆ ಇಡಿ ಕರೆದಾಗ ವಿಚಾರಣೆ ಹಾಜರಾಗಬೇಕು ಹೇಳಿ ಲಾಕ್ ಮಾಡಿದೆ ಯಾವಾಗ ಈ ಅಡ್ನಾಡಿ ನಾಗನಿಗೆ ಇಡಿ ಬೇಡಿ ಹಾಕುತ್ತೋ ಕಾದು ನೋಡಬೇಕು.