ನಾಸೀರ್ ಸಾಬ್ ಬಂದ್ರೂ ದಾರಿ ಬಿಡಿ
ಬಳ್ಳಾರಿ: ರಾಜ್ಯಸಭೆಗೆ ಎರಡನೇ ಅವಧಿಗೆ ಆಯ್ಕೆಯಾದ ಬಳ್ಳಾರಿಯ ಹೆಮ್ಮೆಯ ಪುತ್ರ ಸನ್ಮಾನ್ಯ ಶ್ರೀ ಡಾ.ಸೈಯದ್ ನಾಸೀರ್ ಹುಸೇನ್ ರಿಗೆ ಬಳ್ಳಾರಿಯಲ್ಲಿ ಭವ್ಯ ಸ್ವಾಗತ ಕೋರಲಾಗಿದೆ.
ಯುದ್ಧ ಗೆದ್ದ ವೀರನಂತೆ ತೆರೆದ ವಾಹನದಲ್ಲಿ ಹೂವಿನ ಸುರಿಮಳೆ ಗೈದು ನಾಸೀರ್ ಹುಸೇನ್ ರನ್ನ ಭವ್ಯ ಮೆರವಣಿಗೆ ಮೂಲಕ ನಗರದಲ್ಲಿ ಕಾಂಗ್ರೇಸ್ ಪಕ್ಷವು ಅವರನ್ನ ಸ್ವಾಗತಿಸಿತು.
ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ವಿಧಾನಸೌಧದಲ್ಲೆ ನಾಸೀರ್ ಹುಸೇನ್ ಬೆಂಬಲಿಗರು ಪಾಕ್ ಪರ ಘೋಷಣೆಗಳನ್ನ ಕೂಗಿ ವಿವಾದವನ್ನ ಸೃಷ್ಟಿಸಿದರು. ಪಾಕ್ ಪರ ಘೋಷಣೆಗಳನ್ನ ಕೂಗಿಲ್ಲ ನಾಸೀರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದು ಎಂದು ಕಾಂಗ್ರೇಸ್ ಸಮರ್ಥಿಸಿದರೆ, ಇತ್ತ ಬಿಜೆಪಿ ಇಲ್ಲ ಪಾಕ್ ಪರ ಘೋಷಣೆ ಕೂಗಿದ್ದು ಎಂದು ಆರೋಪಿಸಿ ರಾಜ್ಯಾದ್ಯಂತ ಪ್ರತಿಭಟನೆಯೂ ಮಾಡಿತ್ತು.
ಪಾಕ್ ಪರ ಘೋಷಣೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಈ ವಿವಾದ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು. ಇದರ ನಡುವೆ ಸರಕಾರ ಈ ವಿವಾದದ ತನಿಖೆಗೆ ಆದೇಶಿಸಿತ್ತು. ತನಿಖೆಯ ಎಫ್ ಎಸ್.ಎಲ್ ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಸಾಬೀತಾಗಿ ಆರೋಪಿಗಳ ಬಂಧನವೂ ಆಗಿತ್ತು.
ಬೆಂಬಲಿಗರು ಮಾಡಿದ ವಿವಾದಕ್ಕೆ ಮುಜುಗರಕ್ಕೊಳಗಾದ ನಾಸೀರ್ ಈ ಘಟನೆ ಬಳಿಕ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಮೊನ್ನೆ ನಡೆದ ರಂಜಾನ್ ಹಬ್ಬಕ್ಕೂ ಬಳ್ಳಾರಿ ಬಂದಿರಲಿಲ್ಲ.
ವಿಧಾನಸೌದದಲ್ಲಿ ನಡೆದ ಈ ಘಟನೆಯ ಬಳಿಕ ಮೊದಲ ಬಾರಿಗೆ ಬಳ್ಳಾರಿಗೆ ಇಂದು ಆಗಮಿಸಿದ ಡಾ.ಸೈಯದ್ ನಾಸೀರ್ ಹುಸೇನ್ ಗೆ ರೆಡ್ ಕಾರ್ಪೆಟ್ ಹಾಸಿ, ಹೂವಿನ ಸುರಿಮಳೆ ಗೈದು, ತೆರೆದ ವಾಹನದಲ್ಲಿ ಭವ್ಯ ಮೆರವಣಿಗೆ ಮೂಲಕ ನಗರದ ಎಂ.ಜಿ, ಸಂಗಮ್ ಸರ್ಕಲ್, ರಾಯಲ್ ವೃತ್ತ, ಮೋತಿಯಿಂದ ಕೌಲ್ ಬಜಾರ್ ಮಾರ್ಗವಾಗಿ ನಾಸೀರ್ ಅವರ ಮನೆಯವರೆಗೂ ಮೆರವಣಿಗೆಯಲ್ಲಿ ಅವರನ್ನ ಕರೆ ತರಲಾಯಿತು.
ಸಂಗಮ್ ಸರ್ಕಲ್ ನಲ್ಲಿ ಜೆಸಿಬಿಗಳಿಂದ ನಾಸೀರ್ ಹುಸೇನ್ ಮೇಲೆ ಹೂವಿನ ಸುರಿ ಮಳೆ ಸುರಿಸಿ ದಾರಿಯುದ್ದಕ್ಕೂ ಪಟಾಕಿಗಳನ್ನ ಸಿಡಿಸುತ್ತ, ನಾಸೀರ್ ಸಾಬ್ ಮೇಲೆ ಹೂವಿನ ಮಳೆ ಸುರಿಸಿ, ಡಿಜೆ ಹಾಕಿ ಕಾರ್ಯಕರ್ತರು ಬೈಕ್ ರ್ಯಾಲಿ ಮುಖಾಂತರ ಅವರನ್ನ ಬರಮಾಡಿಕೊಂಡರು.
ನಾಸೀರ್ ಹುಸೇನ್ ರವರ ಭವ್ಯ ಮೆರವಣಿಗೆಗೆ ಬಿಜೆಪಿ ಕಪ್ಪು ಬಟ್ಟೆ ಪ್ರದರ್ಶಿಸಲು ಮುಂದಾದ ಬೆನ್ನಲ್ಲೆ ಎಚ್ಚೆತ್ತ ಪೋಲಿಸರು ಬಿಜೆಪಿ ಕಾರ್ಯಕರ್ತರನ್ನ ಬಂಧಿಸಿ ನಾಸೀರ್ ಹುಸೇನ್ ರವರ ಭವ್ಯ ಮೆರವಣಿಗೆಗೆ ಸೂಕ್ತ ಬಂದೋಬಸ್ತ್ ನೀಡಿಲಾಗಿತ್ತು. ನಗರದ ಪ್ರಮುಖ ವೃತ್ತಗಳಲ್ಲಿ ಪೋಲಿಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ರಾಯಲ್ ವೃತ್ತದಲ್ಲೆ ಬಿಡುಬಿಟ್ಟ ಎಸ್ಪಿ ರವಿಕುಮಾರ್ ರವರು ಮೆರವಣಿಗೆಗೆ ಯಾವುದೇ ತೊಂದರೆಯಾಗದಂತೆ ಬಂದೋಬಸ್ತ್ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ಸಚಿವ ಬಿ.ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ, ಪಾಲಿಕೆ ಸದಸ್ಯರಾದ ನೂರ್ ಮೊಹ್ಮದ್, ಗಾದೆಪ್ಪ, ಪೇರಂ ವಿಕ್ಕೀ, ಕುಬೇರಾ, ಮುಖಂಡರಾದ ಪಿ.ಜಗನ್, ಮುರಳಿಕೃಷ್ಣ, ಬೋಯಪಾಟಿ ವಿಷ್ಣುವರ್ಧನ್, ಬಿ.ಆರ್.ಎಲ್.ಸೀನಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.