ಅಖಾಡಕ್ಕಿಳಿದ ಬಳ್ಳಾರಿ ಬುಲ್ಲೋಡು ಶ್ರೀರಾಮುಲು
ಬಳ್ಳಾರಿ: (ಜಾಗೃತಿ ಕಿರಣ ನ್ಯೂಸ್) ನನ್ನ ಜನ್ಮ ಭೂಮಿ, ನನಗೆ ರಾಜಕೀಯ ಜನ್ಮ ಕೊಟ್ಟ ಕರ್ಮಭೂಮಿ, ಈ ಮಣ್ಣಿನಿಂದ ಆಕಾಶದೆತ್ತರಕ್ಕೆ ಕೊಂಡ್ಯೊದ ಈ ಕ್ಷೇತ್ರದ ಜನರಿಗೆ ನಾನು ಋಣಿಯಾಗಿದ್ದೇನೆ. ಎಂದು ಬಳ್ಳಾರಿ-ವಿಜಯನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಪ್ರಚಾರದ ಅಖಾಡಕ್ಕೆ ಧುಮುಕಿದ ಶ್ರೀರಾಮುಲು ಮೊಟ್ಟಮೊದಲು ತಮ್ಮ ಪ್ರಚಾರವನ್ನ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಆರಂಭಿಸಿದ ಶ್ರೀರಾಮುಲುವರು ತಾಲೂಕಿನ ಹಲಕುಂದಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆನೇಕ ಹಳ್ಳಿಗಳ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು.
ತಮಗೆಲ್ಲ ನೆನಪಾಗುತ್ತಿರಬಹುದು ಕಳೆದ ಇದೇ ಎಪ್ರಿಲ್ ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಇದೇ ಹಲಕುಂದಿ ಗ್ರಾಮದ ಮುಖ್ಯದ್ವಾರದ ಮಧ್ಯೆ ನಿಂತು ಪ್ರಚಾರವನ್ನ ಆರಂಭಿಸಿದ್ದೆ. ಬೇರೆ ಬೇರೆ ಕಾರಣದಿಂದಾಗಿ ಈ ಕ್ಷೇತ್ರದಲ್ಲಿ ಜನ್ಮಕೊಟ್ಟ ತಾಯಂದಿರು, ನನಗೆ ಕೀರ್ತಿಯನ್ನ ತಂದುಕೊಟ್ಟ ಅಣ್ಣತಮ್ಮಂದಿರು, ಜಾತ್ಯತೀತವಾಗಿ ಬೆಳೆಸಿದ ಈ ಗ್ರಾಮಾಂತರ ಕ್ಷೇತ್ರದ ಜನ, ಕರ್ನಾಟಕ ರಾಜ್ಯದಲ್ಲಿ ಶ್ರೀರಾಮುಲು ಎಂಬ ವ್ಯಕ್ತಿಯನ್ನ ನಕ್ಷತ್ರದಂತೆ ಹೊಳೆಯುವಂತೆ ಮಾಡಿದ ಇಲ್ಲಿನ ಜನರು ಆನೇಕ ಕಾರಣಗಳಿಂದ ನನ್ನನ್ನ ಸೋಲಿಸಿದ್ದರು.
ಆದರೆ, ಪಕ್ಷ ಇವತ್ತು ಶ್ರೀರಾಮುಲು ರಾಜಕೀಯದಿಂದ ಕಳೆದು ಹೋಗಬಾರದು ಈ ರಾಜ್ಯದ ಶೋಷಿತರ ಹಾಗೂ ಬಡವರ ಮತ್ತು ಎಲ್ಲಾ ಜನಾಂಗದವರ ಮೇಲೆ ಪ್ರೀತಿಯನ್ನ ಇಟ್ಟುಕೊಂಡಿದ್ದಾರೆ. ಹಾಗಾಗಿ ಇಂತಹ ನಾಯಕ ಜನರ ಮಧ್ಯೆ ಇರಬೇಕು, ಜನಸೇವೆ ಮಾಡಬೇಕು ಎಂಬ ಕಾರಣದಿಂದ ನನ್ನನ್ನು ಪುನಃ ಲೋಕಸಭಾ ಚುನಾವಣೆಗೆ ನಿಲ್ಲಲು ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಜೀಯವರು ಹಾಗೂ ಯಡಿಯೂರಪ್ಪನವರು ಈ ಸಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಅವಕಾಶ ಮಾಡಿ ಕೊಟ್ಟು ನನ್ನನ್ನು ಅಭ್ಯರ್ಥಿಯಾಗಿ ಮಾಡಿದ್ದಾರೆ.
ನನ್ನ ರಾಜಕೀಯ ಜೀವನ ಸೋಲಿನಿಂದಲೇ ಆರಂಭವಾಗಿದ್ದು ತಮಗೆಲ್ಲ ಗೊತ್ತೆ ಇದೆ. ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಆನೇಕ ಸೋಲು-ಗೆಲುವು, ಏಳು-ಬೀಳುಗಳನ್ನು ಕಂಡ ನನ್ನನ್ನ ಗೆದ್ದಾಗ ತಾವೇಲ್ಲರೂ ಕೈಹಿಡಿದು ಮೇಲೆತ್ತಿದ್ದೀರಿ, ಸೋತಾಗ ಕೂಡ ನಿಮ್ಮ ಜೊತೆ ನಾವಿದ್ದೇವೆ ಎಂದು ಈ ಸಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನನ್ನ ಗೆಲ್ಲಿಸುತ್ತೀರಿ ಎಂದು ಈ ಭಾಗದ ಜನರ ಮೇಲೆ ನಂಬಿಕೆ ವಿಶ್ವಾಸವನ್ನ ಇಟ್ಟಿದ್ದೇನೆ ಎಂದು ಅವರು ಹೇಳಿದರು.
ನಾನು ನನ್ನ ಜೀವನದಲ್ಲಿ ರಾಜಕೀಯಕ್ಕೆ ಬರಬೇಕು ಎಂದು ಯಾವತ್ತು ಕೂಡ ಅಂದುಕೊಂಡಿರಲ್ಲಿಲ್ಲ. ಆಕಸ್ಮಿಕವಾಗಿ ಬೇರೆ ಬೇರೆ ಕಾರಣದಿಂದಾಗಿ ಆವಾಗಿನ ಸಂದರ್ಭದಲ್ಲಿ ತಾಯಿ ಸುಷ್ಮಾ ಸ್ವರಾಜ್ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ರಾಜಕೀಯ ಪ್ರವೇಶ ಮಾಡಿದ ನಾನು ಒಂದು ಬಾರಿ ಸೋಲು ಕಂಡಬಳಿಕ ಅಂದಿನಿಂದ ಈ ಭಾಗದ ಜನ ನನ್ನನ್ನ ಕೈಹಿಡಿದು ಮೇಲೆತ್ತಿ ಇತಿಹಾಸವನ್ನ ಬರೆದರು ಹಾಗಾಗಿ ಈ ಭಾಗದ ಜನರ ಋಣ ನಾನು ಎಷ್ಟು ಜನ್ಮಹೊತ್ತರು ತೀರಿಸಲಾರೆ ಎಂದು ಭಾವನಾತ್ಮಕವಾಗಿ ಶ್ರೀರಾಮುಲು ಹೇಳಿದರು.
ಇವತ್ತು ಪುನ: ತಮ್ಮೆಲ್ಲರ ಅಶೀರ್ವಾದವನ್ನ ಬೇಡಿ, ವಿಷವನ್ನ ನುಂಗಿ, ಒಂದು ರೀತಿಯಲ್ಲಿ ವಿಷಕಂಠನಾಗಿ ನಾನು ಇವತ್ತು ನಿಮ್ಮ ಬಳಿ ಬಂದು ನಿಂತಿದ್ದೇನೆ. ಜೀವನದಲ್ಲಿ ನಾನು ಯಾವ ತಪ್ಪು ಮಾಡಿಲ್ಲ, ಮಾಡೋದು ಇಲ್ಲ, ಎಂಬ ಭಾವನ್ಮಾತಕ ಮಾತಿಗೆ ನೆರೆದಿದ್ದ ಜನ ಶ್ರೀರಾಮುಲುರವರಿಗೆ ಜೈಕಾರ ಹಾಕಿದರು. ಈ ಸಾರಿ ನಾನು ಬಳ್ಳಾರಿ-ವಿಜಯನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಗೆಲ್ಲಬೇಕೆಂದರೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ನನ್ನ ತಾಯಂದಿರು, ಅಣ್ಣತಮ್ಮಂದಿರು, ಅಕ್ಕತಂಗಿಯರು, ಕಾರ್ಯಕರ್ತರು, ಗ್ರಾಮಗಳ ಹಿರಿಯರು ಆಶೀರ್ವಾದ ಮಾಡಲೇಬೇಕು. ಹಾಗಾಗಿ ಇವತ್ತು ನಾನು ನಿಮ್ಮ ಮನೆಮಗನಾಗಿ ಬಂದು ನಿಮ್ಮ ಬಳಿ ಮತ ಭಿಕ್ಷೆಯನ್ನ ಬೇಡುತ್ತಿದ್ದೇನೆ. ಈ ಅವಕಾಶವನ್ನ ಕಳೆದುಕೊಳ್ಳಬಾರದು ನನಗೆ ತಾವೇಲ್ಲರು ಆಶೀರ್ವಾದ ಮಾಡಬೇಕು. ಯಾಕೆಂದರೆ ದೇಶದ ಹಿತದೃಷ್ಟಿಯಿಂದ ಮೋದಿಜೀಯವರನ್ನ ಗೆಲ್ಲಿಸಲು ನನ್ನನ್ನು ಬೆಂಬಲಿಸಿ, ಇವತ್ತು ಜಾಗತಿಕ ಮಟ್ಟದಲ್ಲಿ ಭಾರತ ಪ್ರಕಾಶಿಸುತ್ತಿದೆ. ಈ ದೇಶ ವಿಕಸಿತ ಭಾರತವಾಗಿದೆ. ಹಳ್ಳಿಗಳ ಸಮಗ್ರ ಅಭಿವೃದ್ಧಿಗೆ ಮೋದಿಜೀ ಅವರ ಆಡಳಿತ ಈ ದೇಶಕ್ಕೆ ಅವಶ್ಯ. ಹಾಗಾಗಿ ಮತ್ತೋಮ್ಮೆ ಮೋದಿಜೀಯವರನ್ನ ಪ್ರಧಾನಿ ಮಾಡಲು ಈ ಶ್ರೀರಾಮುಲುರನ್ನ ಗೆಲ್ಲಿಸಿ ಮೋದಿಜೀಯವರ ಜೊತೆ ಈ ದೇಶದ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಈ ಗ್ರಾಮಾಂತರ ಕ್ಷೇತ್ರದಲ್ಲಿ ನಾನು ಹಲವಾರು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದೇನೆ. ಲೋಕಸಭಾ ಸದಸ್ಯನಾಗಿದ್ದಾಗ ಹೊಸಪೇಟೆಯಿಂದ ಗುತ್ತಿ, ಹೊಸಪೇಟೆಯಿಂದ ಚಿತ್ರದುರ್ಗ, ಬಳ್ಳಾರಿಯಿಂದ ಚಳ್ಳಕೆರೆ, ಹೀಗೆ ಆನೇಕ ರಸ್ತೆಗಳ ಅಭಿವೃದ್ಧಿಯನ್ನ ಮೋದಿಜೀಯವರ ನೇತೃತ್ವದಲ್ಲಿ ಮಾಡಿದ್ದೇವೆ. ಈ ದೇಶದ ಪ್ರತಿಯೊಬ್ಬ ರೈತನಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಆರು ಸಾವಿರ ರೂ. ಕೂಡುವಂತ ಕೆಲಸ ಮಾಡಿದ್ದೇವೆ. ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಇದ್ದ ಸಮಯದಲ್ಲಿ ಆರು ಸಾವಿರಕ್ಕೆ ನಾಲ್ಕು ಸಾವಿರ ಸೇರಿಸಿ ಹತ್ತು ಸಾವಿರ ರೂಗಳನ್ನ ಕೊಡುವ ಕೆಲಸ ಮಾಡಿದ್ವಿ ಆದರೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಆ ನಾಲ್ಕು ಸಾವಿರ ರೂ.ಗಳನ್ನ ಕಟ್ ಮಾಡಿದೆ. ಮೋದಿಜೀಯವರು ಆರು ಸಾವಿರ ರೂ. ಮಾತ್ರ ರೈತರಿಗೆ ಸೇರುತ್ತಿದೆ. ರಾಜ್ಯದಲ್ಲಿ ಇವತ್ತು ಬರ ತಾಂಡವವಾಡುತ್ತಿದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ ಮಳೆಯಿಲ್ಲದೆ ಬೆಳೆ ಸಂಪೂರ್ಣವಾಗಿ ನಾಶವಾಗಿದೆ ಪರಿಹಾರ ಕೊಡುವ ಕೆಲಸ ಈ ಸರಕಾರ ಮಾಡ್ತಾಯಿಲ್ಲ. ಈ ಭಾಗದ ಆನೇಕ ಹಳ್ಳಿಗಳ ಜನರಿಗೆ ಕುಡಿಯುವ ನೀರಿಲ್ಲ ಕೆರೆ-ಕುಂಟೆಗಳು ಬತ್ತಿಹೋಗಿವೆ.
ಈ ಬರ ಪರಿಹಾರವಾಗಿ 2019 ರಲ್ಲಿ ರಾಜ್ಯಕ್ಕೆ ಮೋದಿಜೀಯವರು 1238 ಕೋಟಿ ರೂ.ಗಳನ್ನ ಹಾಗೂ 2024 ರ ಬರ ಪರಿಹಾರ ಕೇಂದ್ರದಿಂದ ಮೋದಿಜೀ ಕೊಟ್ಟಿದ್ದು 81790 ಕೋಟಿ. ಕಾಂಗ್ರೆಸ್ ಸರಕಾರಕ್ಕಿಂತ ಮೋದಿಜೀಯವರ ಹತ್ತು ವರ್ಷದ ಆಡಳಿತದಲ್ಲಿ 800 ಕೋಟಿಗೂ ಅಧಿಕ ಬರ ಪರಿಹಾರವನ್ನ ನೀಡಿದ್ದಾರೆ.
ರಾಜ್ಯದಲ್ಲಿ ವಿಪರೀತ ಬರ ಇದ್ದರು ಯಾವೊಬ್ಬ ಸಚಿವನಾಗಲಿ ಶಾಸಕನಾಗಲಿ ರೈತರ ಹೊಲಗಳಿಗೆ ಹೋಗಿ ರೈತರಿಗೆ ನೀರಿನ ಬಗ್ಗೆಯಾಗಲಿ ಬೆಳೆಗಳ ಬಗ್ಗೆಯಾಗಲಿ ಕೇಳಿದ್ದಾರೆ? ಜನರಿಗೆ ಕುಡಿಯುವ ನೀರಿಲ್ಲ ಇದಕ್ಕೆ ಪರಿಹಾರವನ್ನ ಕೊಟ್ಟಿದ್ದಾರಾ? ಸರಕಾರ ಬಂದು ಒಂದು ವರ್ಷವಾಯಿತು ಈ ಕ್ಷೇತ್ರದಲ್ಲಿ ಒಂದು ಸಣ್ಣ ಅಭಿವೃದ್ಧಿ ಕೆಲಸ ಸಹ ಆಗಿಲ್ಲ ಇಲ್ಲಿ ಯಾವ ಶಾಸಕರು ಕೆಲಸ ಮಾಡ್ತೀಲ್ಲ, ಯಾವ ಸಚಿವರು ಕೆಲಸ ಮಾಡ್ತಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ವೀರಶೈವ ಸಮುದಾಯದ ಮುಖಂಡರು ವಿಧಾನ ಪರಿಷತ್ ಸದಸ್ಯರಾದ ವೈ.ಎಂ.ಸತೀಶ್, ಮಾಜಿ ಸಂಸದರಾದ ದಿ.ಬಸವರಾಜೇಶ್ವರಿ ಪುತ್ರ ಬಿಜೆಪಿಯ ಹಿರಿಯ ಮುಖಂಡರಾದ ಡಾ.ಮಹಿಪಾಲ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ದಲಿತ ಮುಖಂಡ ಹನುಮಂತಪ್ಪ, ಕುರುಬ ಸಮುದಾಯದ ಮುಖಂಡರಾದ ಪ್ರಕಾಶ್, ವೈದ್ಯರಾದ ಡಾ.ಅರುಣ, ಬಿಜೆಪಿ ಮುಖಂಡರಾದ ಗುರುಲಿಂಗನಗೌಡ, ಎಸ್ಟಿ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾದ ಓಬಳೇಶ್, ಸೇರಿದಂತೆ ಹಲಕುಂದಿ, ಬೆಳಗಲ್ಲು, ಮಿಂಚೇರಿ, ಸಂಜೀವರಾಯನಕೋಟೆಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.