ಹಾನಗಲ್ಲು ಶ್ರೀ ಶ್ರೀ ಶ್ರೀ ಕುಮಾರೇಶ್ವರ ವಚನ ವೃಂದದ ತಂಡಕ್ಕೆ ಬೆಂಬಲಿಸಲು ಚಾನಾಳ್ ಶೇಖರ್ ಮನವಿ

ಹಾನಗಲ್ಲು ಶ್ರೀ ಶ್ರೀ ಶ್ರೀ ಕುಮಾರೇಶ್ವರ ವಚನ ವೃಂದದ ತಂಡಕ್ಕೆ ಬೆಂಬಲಿಸಲು ಚಾನಾಳ್ ಶೇಖರ್ ಮನವಿ
ಚಾನಾಳ್ ಶೇಖರ್

ಬಳ್ಳಾರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಹಾಗೂ ನಿರ್ದೇಶಕರ ಚುನಾವಣೆ ನಾಳೆ ನಡೆಯಲಿದೆ. 

ಹಾನಗಲ್ಲು ಶ್ರೀ ಕುಮಾರೇಶ್ವರ ವಚನ ವೃಂದದ ಚಾನಾಳ್ ಶೇಖರ್ ನೇತೃತ್ವದ ತಂಡ ಉಪನ್ಯಾಸಕ ಪಂಚಾಕ್ಷರಪ್ಪ ನೇತೃತ್ವದ ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ತಂಡ ಚುನಾವಣೆಯ ಕಣದಲ್ಲಿದ್ದು, ಈ ಎರಡು ತಂಡಗಳ ಭವಿಷ್ಯವನ್ನ ನಾಳೆ ಮತದಾರ ಬರೆಯಲಿದ್ದಾನೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಚುನಾವಣೆ ಈ ಬಾರಿ ಜಿಲ್ಲೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದು, ಎರಡು ತಂಡಗಳು ಈ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಕಳೆದ ಕೆಲವು ದಿನಗಳಿಂದ ಭರ್ಜರಿ ಪ್ರಚಾರ ಕಾರ್ಯವನ್ನ ಕೈಗೊಂಡಿವೆ.

ಹಾಲಿ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ನೇತೃತ್ವದ ತಂಡಕ್ಕೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರಾದ ಶ್ರೀನಿವಾಸರೆಡ್ಡಿ, ಅಲ್ಲಂ ವೀರಭದ್ರಪ್ಪ, ಚೊಕ್ಕಬಸವನಗೌಡ, ಉದ್ಯಮಿ ಸಾಹುಕಾರ್ ಸತೀಶ್ ಬಾಬು, ದರೂರು ಶಾಂತನಗೌಡ, ಆನೆ ಗಂಗಣ್ಣ, ಕೋರಿ ವಿರುಪಾಕ್ಷಪ್ಪ, ದಂಡಿನ ಶಿವಾನಂದ, ಮೇಟಿ ಪೊಂಪನಗೌಡ, ಅರವಿ ಬಸವನಗೌಡ, ವಿರೂಪಾಕ್ಷಗೌಡ, ನಿಷ್ಠಿ ರುದ್ರಪ್ಪ, ಸಂಗಮೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಎಲ್ಟಿ ಶೇಖರ್, ಮಲ್ಲನಗೌಡ, ತಿಮ್ಮನಗೌಡ, ಬಸಲಿಂಗಪ್ಪ ಶ್ರೀಧರಗಡ್ಡೆ, ತೆಕ್ಕಲಕೋಟೆ ಸಿದ್ರಾಮನಗೌಡ, ಗೋನಾಳು ವಿರುಪಾಕ್ಷಗೌಡ,  ರೂಪನಗುಡಿ ಬಸವರಾಜ, ಕುರುಗೋಡು ಹೇಮಾದ್ರಿ, ಕುರಿಹಟ್ಟಿ ರಾಜಣ್ಣ, ಶೋಭಾ ಕಾಳಿಂಗ, ಹೊನ್ನನಗೌಡ, ಗಾಳಿ ರಾಜಶೇಖರ್, ಸೇರಿದಂತೆ ನೂರಾರು ಜನ ಸಮಾಜದ ಮುಖಂಡರು ಹಿರಿಯರು ಸಮಾಜದ ಹಿರಿಯ ರಾಜಕಾರಣಿಗಳು ಹಲವು ಮಠಾಧೀಶರ ಬೆಂಬಲವಿದ್ದು, ಗೆಲ್ಲುವ ವಿಶ್ವಾಸದಲ್ಲಿದ್ದಾರೆ.  

ಕಳೆದ ಅವಧಿಯಲ್ಲಿ ಚಾನಾಳ್ ಶೇಖರ್ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಜಿಲ್ಲಾಧ್ಯಕ್ಷರಾದ ಬಳಿಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಕ್ಕೆ ಮೆರಗು ತಂದು ಕೊಟ್ಟು ಸಂಘಟನೆಗೆ ಶಕ್ತಿ ತುಂಬಿದರು. ತೆರೆಮರೆಯಲ್ಲಿದ್ದ  ಈ ಮಹಾಸಭಾಕ್ಕೆ ಸದಸ್ಯತ್ವ ಅಭಿಯಾನ ನಡೆಸಿ, ಜಿಲ್ಲೆಯಾದ್ಯಂತ ಸಂಚರಿಸಿ ದಾಖಲೆ ಪ್ರಮಾಣದ ಸದಸ್ಯತ್ವ ಮಾಡಿಸಿ ವೀರಶೈವ ಲಿಂಗಾಯತರಲ್ಲಿ ಜಾಗೃತಿ ಮೂಡಿಸಿ ಸಂಘಟನೆ ಕಟ್ಟಿದ್ದಾರೆ.

ಚಾನಾಳ್ ಶೇಖರ್ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗುವ  ಮುನ್ನಾ ಕೇವಲ 250 ಸದಸ್ಯರಿದ್ದ ಈ ಮಹಾಸಭಾಕ್ಕೆ ಸುಮಾರು 3600 ಜನರ ಸದಸ್ಯತ್ವ ಮಾಡಿಸಿ ವೀರಶೈವ ಮಹಾಸಭಾಕ್ಕೆ ಹೊಸ ಚೈತನ್ಯ ತುಂಬಿದ ಕೀರ್ತಿ ಚಾನಾಳ್ ಶೇಖರ್ ತಂಡಕ್ಕೆ ಲಭಿಸುತ್ತದೆ. ಇನ್ನು ಚಾನಾಳ್ ಶೇಖರ್ ಜಿಲ್ಲಾಧ್ಯಕ್ಷರಾದ ಬಳಿಕ ಬಳ್ಳಾರಿಯ ಬಸವ ಭವನದಲ್ಲಿ ಐತಿಹಾಸಿಕ ರಾಜ್ಯಕಾರ್ಯಕಾರಿಣಿ ಸಭೆ ನಡೆಸಿ, ರಾಜ್ಯದ ವೀರಶೈವ ಲಿಂಗಾಯತರು ಬಳ್ಳಾರಿ ಕಡೆ ಮುಖ ಮಾಡುವ ಹಾಗೆ ಸಂಘಟನೆಗೆ ಹೊಸ ಮೆರಗು ತಂದು ಕೊಟ್ಟಿದ್ದಾರೆ. ಅಲ್ಲದೇ, ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುತ್ಸದ್ದಿ ಎನ್.ತಿಪ್ಪಣ್ಣ ಅವರ ಅಭಿನಂದನಾ ಸಮಾರಂಭ ಬಳ್ಳಾರಿಯಲ್ಲಿ ನಡೆಸಿ ರಾಜ್ಯದ ಗಮನ ಸೆಳೆಯುವಂತೆ ಮಾಡಿದ್ದಾರೆ. ಇನ್ನು ವೀರಶೈವ ಸಮಾಜದ ವಿಧ್ಯಾರ್ಥಿನಿಯರ ವಸತಿ ನಿಲಯಕ್ಕೆ ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಗಳಿದ್ದಾಗ ವಸತಿ ನಿಲಯಕ್ಕೆ ಎರಡು ಎಕರೆ ಜಾಗ ಮಂಜೂರು ಮಾಡಲು ಮನವಿ ಮಾಡಿ ಜಾಗ ಮಂಜೂರಾತಿಗೆ ಹೋರಾಟ ಮಾಡುತ್ತಿದ್ದಾರೆ. ಅದು ಈಗ ಕಾರ್ಯರೂಪಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಅಲ್ಲದೇ, ನಗರದಲ್ಲಿ ಶ್ರೀ ಬಸವೇಶ್ವರ ಹೆಸರಿನಲ್ಲಿ ಕೆಇಬಿ ವೃತ್ತವನ್ನ ಮರು ನಾಮಕರಣ ಮಾಡಿಸಿ, ಅದಕ್ಕೆ ಬಸವೇಶ್ವರ ವೃತ್ತ ಎಂದು ನಾಮಕರಣ ಮಾಡಿಸಿ  ಅದರ ಅಭಿವೃದ್ಧಿಗೆ ಶಾಸಕರಿಂದ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿಯ ಹಾದಿಯನ್ನ ತೋರಿಸಿದ್ದಾರೆ. ಹೀಗೆ ಹತ್ತು ಹಲವು ಸಮಾಜದ ಪರ ಆನೇಕ ಕೆಲಸಗಳನ್ನ ಮಾಡಿದ ಕೀರ್ತಿ ಚಾನಾಳ್ ಶೇಖರ್ ತಂಡಕ್ಕೆ ಲಭಿಸುತ್ತದೆ ಎಂದು ಸಮಾಜದ  ಹಿರಿಯರು ಮಾತನಾಡಿಕೊಳ್ಳುತ್ತಿದ್ದಾರೆ. 

ಇನ್ನು ಚಾನಾಳ್ ಶೇಖರ್ ತಂಡದಲ್ಲಿ ಸಮಾಜದ ಪ್ರಭಾವಿಗಳು, ಹಿರಿಯರು, ಮುಖಂಡರ ಮಾರ್ಗದರ್ಶನ ಬೆಂಬಲವಿದ್ದು, ಇತ್ತ ಪಂಚಾಕ್ಷರಪ್ಪ ನೇತೃತ್ವದ ತಂಡದಲ್ಲಿ ಹೊಸ ಮುಖಗಳಿಂದ ಕೊಡಿದ  ಅನಾನುಭವಿಗಳ ತಂಡ ಚುನಾವಣೆ ಕಣದಲ್ಲಿದ್ದು, ಚಾನಾಳ್ ಶೇಖರ್ ನೇತೃತ್ವದ ತಂಡಕ್ಕೆ ಪಂಚಾಕ್ಷರಪ್ಪ ನೇತೃತ್ವದ ತಂಡವನ್ನ ಹೊಲಿಸಿದರೆ, ಚಾನಾಳ್ ಶೇಖರ್ ನೇತೃತ್ವದ ತಂಡ ಬಲಿಷ್ಠವಾಗಿದೆ ಎನ್ನುತ್ತಾರೆ ಸಮಾಜದ ಆನೇಕರು. ಇನ್ನು ನಾಳೆ ಈ ಎರಡು ತಂಡಗಳ ಭವಿಷ್ಯವನ್ನ ಮತದಾರರು ಬರೆಯಲಿದ್ದು ಸಂಜೆ ಅಥವಾ ರಾತ್ರಿ ವೇಳೆಗೆಲ್ಲ ಫಲಿತಾಂಶ ಹೊರ ಬೀಳಲಿದ್ದು ಯಾವ ತಂಡ ಗೆಲ್ಲಲಿದೆ ಎಂದು ಕಾದು ನೋಡಬೇಕಿದೆ.