ಸ್ನೇಹಿತನ ಪತ್ನಿ ಜೊತೆ ಕಾರ್ಪೋರೆಟರ್ ಆಸೀಫ್ ಲವ್ವಿಡವ್ವಿ
ಬಳ್ಳಾರಿ;(ಜಾಗೃತಿ ಕಿರಣ) ರಸಿಕತೆ ಅನ್ನೊ ಮಾಯೇ ಯಾರನ್ನೂ ಬಿಟ್ಟಿಲ್ಲ. ಏನಾದರೊಂದು ಮಾಡಿಯೇ ಬಿಡುತ್ತದೆ. ರಸಿಕತೆ ಸ್ವಪತ್ನಿಯರಲ್ಲಿ ಇರಬೇಕು ಎನ್ನುವುದು ಭಾರತೀಯ ಸಂಸ್ಕೃತಿಯ ಪ್ರತೀಕ. ಪರಸ್ತ್ರೀಯರಲ್ಲಿ ಮೂಡಿದರೆ ಅದು ಬೇರೆಯದ್ದೇ ಆದ ರೀತಿಯಲ್ಲಿ ಅರ್ಥೈಸಬೇಕಾಗುತ್ತದೆ.
ಇದೀಗ ಮಹಾ ನಗರ ಪಾಲಿಕೆಯ 30ನೇ ವಾರ್ಡಿನ ಸದಸ್ಯ, ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಆಸೀಫ್ ಅವರದ್ದೂ ಇದೇ ಕಥೆಯಾಗಿದೆ ಎಂಬುವುದು ಬಳ್ಳಾರಿಗರ ಹುಬ್ಬೆರುವಂತೆ ಮಾಡಿದೆ. ಒಂದೊಮ್ಮೆ ಸಚಿವ ಬಿ.ನಾಗೇಂದ್ರ ಅವರ ಸಂಬಂಧಿ ಎರಿಸ್ವಾಮಿ(ಮಾಮ) ಅವರು ಮೇಯರ್ ಸ್ಥಾನ ಕೊಡಿಸುವುದಾಗಿ ಹೇಳಿ ಹಣ ಪಡೆದು, ಮೋಸ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಆಸೀಫ್ ಬಳ್ಳಾರಿಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ. ಇದರ ಸೂಕ್ಷ್ಮತೆ ಅರಿತ ಬಿ.ನಾಗೇಂದ್ರ ಆಸೀಫ್ ರ ಹಣವನ್ನು ವಾಪಸ್ಸು ನೀಡಿ ಕಳಂಕದಿಂದ ಮುಕ್ತರಾಗಿದ್ದರು. ಆಗ ಆಸೀಫ್ ಎಲ್ಲರ ಗಮನ ಸೆಳೆದಿದ್ದ. ಇದೀಗ ಬೇರೆಯದ್ದೇ ಆದ ರೀತಿಯಲ್ಲಿ ಆಸೀಫ್ ಮತ್ತೆ ಗಮನ ಸೆಳೆದಿದ್ದಾನೆ.
ವಯಸ್ಸಿನಲ್ಲಿದ್ದಾಗ ಹಣ, ಅಂತಸ್ತು ಮತ್ತು ಅಧಿಕಾರ ಏನೇನೆಲ್ಲ ಮಾಡಿಸಿ ಬಿಡುತ್ತದೆ ಎನ್ನುವುದಕ್ಕೆ ಆಸೀಫ್ ವ್ಯಕ್ತಿತ್ವವೇ ನಿದರ್ಶನ ಎನ್ನುವಂತಾಗಿದೆ. ಕೌಲ್ ಬಜಾರ್ ಪ್ರದೇಶದಲ್ಲಿ ಇದೀಗ ಎಲ್ಲಿ ನೋಡಿದರೂ ಆಸೀಫ್ ನದ್ದೇ ಹಾಟ್ ಟಾಪಿಕ್. ಅಂದು ಎರಿಸ್ವಾಮಿ (ಮಾಮ) ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರಿ ಬಿ.ನಾಗೇಂದ್ರ ಅವರಿಗೆ ಮುಜುಗರ ಉಂಟು ಮಾಡಿದ್ದ. ಇತನ ವರ್ತನೆ ಗಮನಿಸಿದ ಶ್ರೀರಾಮುಲು ರಾಜಕೀಯದಲ್ಲಿ ಸೆಳೆದುಕೊಂಡರೆ ಕೆಲಸಕ್ಕೆ ಬರುತ್ತಾನೆ ಎನ್ನುವ ಕಾರಣಕ್ಕೆ ಸಚಿವರಾಗಿದ್ದ ಸಂದರ್ಭದಲ್ಲಿ ರಾಮುಲು ಆಸೀಫ್ ರ ನಿವಾಸಕ್ಕೆ ಭೇಟಿ ನೀಡಿದ್ದರು. ಅಂಥ ಆಸೀಫ್ ಇದೀಗ ಮಂದಿ ಮನಿಗೆ ಕಣ್ಣಾಕಿ ಕೌಲ್ ಬಜಾರ್ ನಲ್ಲಿ ಹಾಟ್ ಬಿರಿಯಾನಿಯಂತೆ ಸುದ್ದಿಯಲ್ಲಿದ್ದಾನೆ. ಈ ಮೂಲಕ ಪಡ್ಡೆ ಹುಡುಗರನ್ನೂ ನಾಚಿಸುವ ರೀತಿಯಲ್ಲಿ ಚರ್ಚೆಗೆ ಈಡಾಗಿದ್ದು ಸುಳ್ಳಲ್ಲ.
ಏನಿದು ಆಸೀಫ್ ಕಥೆ?
ಆಸೀಫ್ ಮಹಾನಗರ ಪಾಲಿಕೆ ಸದಸ್ಯ. ಒಂದು ವಾರ್ಡನ್ನು ಪ್ರತಿನಿಧಿಸುವ ಜನಸೇವಕ. ಇವರಿಗೆ ಅದಾಗಲೇ ಪ್ರೇಮ ವಿವಾಹವು ಅಲ್ಲದೇ ಎರಡನೇಯ ಮದುವೆಯೂ ಆಗಿದೆ ಎಂಬುವುದು ಕೌಲ್ ಬಜಾರ್ ನಲ್ಲಿ ಜಗಜಾಹೀರು.
ಇನ್ನು ಪಾಲಿಕೆ ಸದಸ್ಯನಾಗಿ ಅಸೀಫ್ ಅಷ್ಟಿಷ್ಟು ಹೆಸರು ಮಾಡಿಕೊಂಡಿದ್ದ. ಶಾಸಕರು, ಸಚಿವರೊಂದಿಗೆ ಸಹ ಗುರುತಿಸಿಕೊಂಡಿದ್ದ. ಪಾಲಿಕೆ ಸದಸ್ಯರ ಪ್ರಚಲಿತ ಹೆಸರುಗಳಲ್ಲಿ ಆಸೀಫ್ ಹೆಸರೂ ಕೂಡ ಫೇಮಸ್. ಈ ಫೇಮಸ್ ಹೆಸರಿನ ಆಸೀಫ್ ತನ್ನದೇ ಸ್ನೇಹಿತನ ಮಡದಿಗೆ ಕಣ್ಣು ಹಾಕಿ ಮನ್ಮಥನ ರಾಸಲೀಲೆ ತೋರಿಸಿದ್ದಾನೆ ಎಂಬ ಮಾತುಗಳು ಕೌಲ್ ಬಜಾರ್ ತುಂಬಾ ಹರಿದಾಡುತ್ತಿದೆ.
ಆತ ಕೌಲ್ ಬಜಾರ್ ನ ದಾದು
ಹೌದು! ಈ ದಾದು ಆಸೀಫ್ ನ ಪಕ್ಕ ಬಲಗೈ ಭಂಟ ಆಸೀಫ್ ನ ಹಣಕಾಸೀನ ವ್ಯವಹಾರಗಳನ್ನೆಲ್ಲ ಈ ದಾದು ನೋಡಿಕೊಳ್ತಿದ್ದ ಅಲ್ಲದೇ ಆಫೀಸ್ ಅಂದರೆ ದಾದುಗೆ ಇನ್ನಿಲ್ಲದ ಗೌರವ ಇಂತಹ ದಾದುವಿನ ಕುಟುಂಬದಲ್ಲಿ ಈ ಆಸೀಫ್ ಹುಳಿ ಹಿಂಡಲು ಕೈ ಹಾಕಿದ ಅಂದರೆ, ನಿಜಕ್ಕು ಈತ ಮನುಷ್ಯನೇನಾ? ಎಂಬ ಪ್ರಶ್ನೆ ಕಾಡುತ್ತದೆ.
ಕಳೆದ ಕೆಲ ದಿನಗಳ ಹಿಂದೆ ಬಳ್ಳಾರಿಗೆ ಕಾಂಗ್ರೇಸ್ ಮುಖಂಡ ನಲ್ಪಾಡ್ ಹ್ಯಾರಿಸ್ ಬಂದಾಗ ಇದೇ ಆಸೀಫ್ ನಲ್ಪಾಡ್ ರಿಗೆ ಊಟದ ಅತಿಥ್ಯ ನೋಡಿಕೊಂಡಿದ್ದ, ಆಗ ನಲ್ಪಾಡ್ ರಿಗೆ ಬಗೆ ಬಗೆಯ ಅಡುಗೆಗಳನ್ನ ಮಾಡಿ ತರಲು ತನ್ನ ಬಲಗೈ ಭಂಟ ದಾದುವಿಗೆ ಹೇಳಿದಾಗ ದಾದು ಸ್ವತಃ ತಮ್ಮ ಪತ್ನಿಯಿಂದ ಅಡುಗೆಗಳನ್ನ ಮಾಡಿಸಿ ತಂದು ಉಣಬಡಿಸಿದ್ದ ಎನ್ನಲಾಗಿದೆ.
ಆಗ ಆ ಊಟದ ರುಚಿ ಸವಿದ ಈ ಆಸೀಫ್ ಊಟ ತಯಾರಿಸಿದ ಕೈಗಳನ್ನ ನೆನೆದು ಪ್ರೇಮಲೋಕದಲ್ಲಿ ತೇಲಿ ಹೋಗಿದ್ದ, ಅಲ್ಲಿಂದ ಈ ಆಫೀಸ್ ದಾದು ಪತ್ನಿಗೆ ಮೊಬೈಲ್ ನಿಂದ ಮೇಸೆಜ್ ಸಂದೇಶಗಳಲ್ಲಿ ಊಟದ ಬಗ್ಗೆ ಹೊಗಳತೊಡಗಿದ. ಹಾಗೆಯೇ ಅದು ಸಲುಗೆಯಿಂದ ಈ ಆಸೀಫ್ ಗೆ ಒಳಗಿಂದೊಳಗೆ ದಾದು ಪತ್ನಿ ಮೇಲೆ ಪ್ರೇಮಾಂಕುರವಾಗಿದೆ.
ದಾದು ಪತ್ನಿಯ ಊಟ ಸವಿಯಲು ದಾದುಗೆ ನಿನ್ನ ಪತ್ನಿ ಮಾಡಿದ ಅಡುಗೆ ತುಂಬಾ ಚೆನ್ನಾಗಿದೆ ಕಛೇರಿಗೆ ತಗೊಂಡ ಬಾ ಎಂದು ಆಗಾಗ ಹೇಳಿ ತರಿಸಿಕೊಂಡು ಆಸೀಫ್ ಊಟ ಮಾಡಿದ್ದಾನೆ.
ಊಟ ಮಾಡ್ತಾ ಮಾಡ್ತಾ ಆಸೀಫ್ ಗೆ ಕಾಮದ ಹಸಿವಾಗಿ ಕಾಮದೂಟ ಮಾಡುವ ಆಸೆಯಾಗಿ ಸ್ನೇಹಿತನ ಪತ್ನಿ ಅಂತನೂ ನೋಡದೆ ಸ್ನೇಹಿತನ ಮನೆಯಲ್ಲಿ ಜಾರಿ ಬಿದ್ದಿದ್ದಾನೆ.
ಇನ್ನು ದಾದು ಆಸೀಫ್ ಮೇಲಿನ ಗೌರವಕ್ಕೆ ತನ್ನ ಪತ್ನಿಗೆ ಹೇಳಿ ಅಡುಗೆ ಮಾಡಿಸಿಕೊಂಡು ಆಸೀಫ್ ನ ಕಛೇರಿಗೆ ಆಗಾಗ ಊಟ ತಂದು ಕೊಡ್ತಾಯಿದ್ದ, ಹೀಗೆ ಕೆಲ ದಿನಗಳು ನಡೆದ ನಂತರ ಆಸೀಫ್ ದಾದುವಿಗೆ ನೀನು ಊಟ ನನ್ನ ಕಛೇರಿಗೆ ತರುವವರೆಗೆ ತಣ್ಣಾಗಾಗಿರುತ್ತೆ ಎಂದಾಗ, ಅಣ್ಣ ಹಾಗಿದ್ದರೆ ನೀವು ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಬರಬಹುದಲ್ಲವೇ? ಎಂದು ದಾದು ಆಸೀಫ್ ಅಣ್ಣನಿಗೆ ಹೇಳಿದ ಮಾತು ಆಸೀಫ್ ಗೆ ಅಫಾರ್ ಕೊಟ್ಟಂಗಾಗಿದೆ.
ಇನ್ನು ಆಸೀಫ್ ದಾದು ಮನೆಗೆ ಊಟಕ್ಕೆಂದು ಹೋದಾಗ ದಾದುಗೆ ಅಲ್ಲಿ ಪೇಮೆಂಟ್ ಬರೋದಿದೆ, ಇಲ್ಲಿ ಪೇಮೆಂಟ್ ಬರೋದಿದೆ, ನೀನು ಹೋಗಿ ಕಲೆಕ್ಟ್ ಮಾಡಿಕೊಂಡು ಬಾ ಎಂದು ಹಣ ಕಾಸಿನ ನೆಪ ಹೇಳಿ ಕಳುಹಿಸಿ, ಇತ್ತ ಸ್ನೇಹಿತನ ಪತ್ನಿ ಜೊತೆ ಲವ್ವಿ ಡವ್ವಿ ಮಾಡಲಾರಂಭಿಸುತ್ತಿದ್ದನಂತೆ.
ಅಷ್ಟು ಸಾಲದೆಂಬಂತೆ ದಾದು ಮತ್ತು ಆತನ ಪತ್ನಿಯನ್ನು ದೂರದ ಅಜ್ಮೀರ್, ರಾಜಸ್ಥಾನ ಮತ್ತು ಜೈಪುರ್ ಗೆ ಕರೆದ್ಯೊದು ಮಗಧೀರನಂತೆ ಪೋಸು ಕೊಟ್ಟಿದ್ದಾನೆ. ಇಲ್ಲಿಗೆ ಬಂದ ಮೆಲೆ ಮತ್ತೆ ದಾದು ಪತ್ನಿಯೊಂದಿಗೆ ಆಸೀಫ್ ಸಲುಗೆ ಮುಂದುವರಿಸಿದ್ದಂತೆ ಇದನ್ನು ತನ್ನ ಹೆಂಡತಿಗೆ ಪ್ರಶ್ನಿಸಿದ್ದ ದಾದು ಆಸೀಫ್ ಸಹವಾಸ ಬಿಟ್ಟುಬಿಡು ಅಂತ ಮನವಿ ಮಾಡಿದ್ದಾನೆ. ಇದನ್ನು ಮರೆಯೋಕೆ ಪ್ರತಿನಿತ್ಯ ಖಬರಸ್ತಾನಕ್ಕೆ ಹೋಗಿ ಕಣ್ಣೀರುಗರೆದಿದ್ದಾನಂತೆ ದಾದು. ಮೂರು ಮಕ್ಕಳ ಸುಂದರವಾಗಿದ್ದ ಕುಟುಂಬವನ್ನು ಆಸೀಫ್ ಆಪೋಷನ ತೆಗೆದುಕೊಂಡಿದ್ದಾನೆ ಎಂಬ ಅರೋಪಗಳು ಬರ ಸಿಡಿಲಿನಂತೆ ಕೌಲ್ ಬಜಾರ್ ನಲ್ಲಿ ಅಪ್ಪಳಿಸಿ ಬಂದಿವೆ. ಅಷ್ಟೇ ಅಲ್ಲ ದಾದುವಿನಿಂದ 15 ಲಕ್ಷ ರೂ. ಹಣ ಪಡೆದದ್ದಲ್ಲದೆ, ಆತನ ಪತ್ನಿಯನ್ನೂ ಮರುಳು ಮಾಡಿದ್ದಾನೆ ಎಂದು ಸ್ವತಃ ದಾದುನೇ ಆರೋಪಿಸಿದ್ದಾನೆ.
ಇನ್ನು ಇದರಿಂದ ಕುಗ್ಗಿ ಹೋಗಿರುವ ದಾದು ಆಗಿದ್ದು ಆಯ್ತು ನಿನ್ನ ತಪ್ಪನ್ನ ಕ್ಷಮಿಸಿದ್ದೇನೆ. ಇನ್ನಾದರೂ ಚೆನ್ನಾಗಿರು. ನಿನಗೆ ಏನೂ ಕೊರತೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ತನ್ನ ಹೆಂಡ್ತಿ ಬಳಿ ಗೋಗರೆದಿದ್ದಾನಂತೆ.
ಆದರೆ ಆಗಿದ್ದೇ ಬೇರೆ
ದಾದುವಿನ ಪತ್ನಿಗೆ ಅಸೀಫ್ ಮೇಲೆ ಅದೇನು ಅನುರಾಗವೋ ಏನೋ? ಗಂಡನ ವಿರುದ್ಧವೇ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ. ಗಂಡ ನನಗೆ ದಿನಾಲೂ ಕಿರಿಕಿರಿ ಮಾಡುತ್ತಾನೆ. ಹಿಂಸೆ ನೀಡುತ್ತಾನೆ. ಗಂಡನ ಕಿರುಕುಳ ಸಾಕಾಗಿದೆ ಅಂತ ದೂರು ನೀಡಿದ್ದಾಳೆ. ಅಸೀಫ್ ನ ಮನ್ಮಥ ಲೀಲೆಯನ್ನ ಕಣ್ಣಾರೆ ನೋಡಿದ ದಾದು ಸಂಕಟ ತಾಳಲಾರದೇ ಮನೆಯಲ್ಲಿ ಶೌಚಾಲಯಕ್ಕೆ ಬಳಕೆ ಮಾಡುತ್ತಿದ್ದ ಫಿನಾಯಿಲ್ ಮತ್ತು ನಿದ್ರೆ ಮಾತ್ರೆ ಸೇವಿಸಿ, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸಂಬಂಧಿಗಳು ಮತ್ತು ಸ್ನೇಹಿತರು ಕೂಡಲೇ ನಿನ್ನೆ ಮಧ್ಯಾಹ್ನ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಧ್ಯ ತುರ್ತು ಚಿಕಿತ್ಸಾ ಘಟಕದಲ್ಲಿ ಗಂಭೀರ ಸ್ಥಿತಿಯಲ್ಲಿರುವ ದಾದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಎಂದು ತಿಳಿದು ಬಂದಿದೆ. ನಗು ನಗುತ್ತಾ ಸುಂದರವಾಗಿದ್ದ ಕುಟುಂಬವೊಂದು ಇದೀಗ ಆಸೀಫ್ ನಿಂದಾಗಿ ಮುರಿದು ಹೋಗುವ ಹಂತ ತಲುಪಿರುವುದು ದುರಂತವೇ ಸರಿ ಎಂದು ಇಡೀ ಕೌಲ್ ಬಜಾರ್ ಪ್ರದೇಶದ ಗಲ್ಲಿಗಲ್ಲಿಯಲ್ಲೂ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಸಚಿವ ನಾಗೇಂದ್ರ ಸಂಬಂಧಿ ವಿರುದ್ಧ ದೂರು ಕೊಟ್ಟು ಹೀರೋ ಆಗಿದ್ದ
ತನಗೆ ಮೇಯರ್ ಗಿರಿ ಕೊಡಿಸುವುದಾಗಿ ಹೇಳಿ 3 ಕೋಟಿ ರೂ. ಹಣ ಪಡೆದಿದ್ದಾರೆ. ಮೇಯರ್ ಸ್ಥಾನ ನೀಡದೇ ಮೋಸ ಮಾಡಿದ್ದಾರೆ ಎಂದು ಅಲವತ್ತುಕೊಂಡು ಪೊಲೀಸ್ ಠಾಣೆಗೆ ಹೋಗಿದ್ದ ಆಸೀಫ್ ನಾಗೇಂದ್ರ ಅವರ ಸಂಬಂಧಿ ಎರಿಸ್ವಾಮಿ(ಮಾಮ) ವಿರುದ್ಧ ದೂರು ನೀಡಿ ಹೀರೋ ಎನಿಸಿಕೊಂಡಿದ್ದ. ಈತನ ಧೈರ್ಯ ನೋಡಿ ಖುದ್ದು ಶ್ರೀರಾಮುಲು ಈತನ ಮನೆಗೆ ಹೋಗಿದ್ದರು. ರಾಮುಲು ಜೊತೆಗೆ ಹೋಗದ ಆಸೀಫ್ ಒಂದಷ್ಟು ವಿಶ್ವಾಸ ಇಟ್ಟುಕೊಂಡು, ಕಾಂಗ್ರೆಸ್ ನಲ್ಲೇ ಮುಂದುವರೆದ. ಆದರೆ, ಸ್ವಂತ ಸ್ನೇಹಿತನ ಪತ್ನಿಗೆ ಯಾಮಾರಿಸಿ ಇದೀಗ ಆತನ ಕುಟುಂಬವನ್ನೇ ಮುರಿದು ಹಾಕಿದ್ದಾನೆ ಎಂಬ ಆರೋಪವು ಕೇಳಿ ಬಂದಿದೆ. ಆಸೀಫ್ ಗೆ ಇದೆಲ್ಲಾ ಬೇಕಿತ್ತಾ? ಒಂದು ವಾರ್ಡಿನ ಅಸಂಖ್ಯಾತ ಜನರನ್ನು ಪ್ರತಿನಿಧಿಸುವ ಒಬ್ಬ ಜನಪ್ರತಿನಿಧಿಯಾಗಿ, ನೈತಿಕತೆ ತೋರದೇ ಮಂದಿ ಮನಿಗೆ ಕಣ್ಣಾಕಿ ಬೆತ್ತಲಾಗಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಕೌಲ್ ಬಜಾರ್ ನ ಜನ ಮಾತನಾಡಿಕೊಳ್ಳುತ್ತಿದ್ದಾರೆ.
-------