ಬಳ್ಳಾರಿ ಮಟ್ಕಾ ಅಡ್ಡೆಯ ಮೇಲೆ ಎಸ್ಪಿ ದಾಳಿ ಕಣೇಕಲ್ ಅಬ್ದುಲ್ ಸೇರಿ 11 ಮಂದಿ ಬಂಧನ!
ಬಳ್ಳಾರಿಗೆ ನೂತನ ಎಸ್ಪಿಯಾಗಿ ನಿನ್ನೆ ತಾನೇ ಅಧಿಕಾರ ವಹಿಸಿಕೊಂಡ ರಂಜೀತ್ ಕುಮಾರ್ ಭಂಡಾರು ರವರು ಫೀಲ್ಡಿಗಿಳಿದು ಅಕ್ರಮ ದಂಧೆಕೋರರಿಗೆ ಅಕ್ಷರ ಸಹ ನಡುಕ ಹುಟ್ಟಿಸಿದ್ದಾರೆ. ಕಳೆದ ಒಂದು ವರ್ಷದಿಂದ ಬಳ್ಳಾರಿಯ ಆನೇಕ ಏರಿಯಾಗಳಲ್ಲಿ ಮಟ್ಕಾ ಅಂಗಡಿಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಈ ಹಿಂದಿನ ಎಸ್ಪಿ ಸೈದುಲ್ ಅಡಾವತ್ ಮಟ್ಕಾ ದಂಧೆಗೆ ಕಡಿವಾಣ ಹಾಕಲು ಸಂಪೂರ್ಣ ವಿಫಲವಾಗಿದ್ದರು. ಇದರಿಂದ ಜನಕ್ಕೆ ಇಲಾಖೆಯ ಮೇಲೆ ನಂಬಿಕೆ ಇಲ್ಲದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ನೂತನ ಯಂಗ್ ಅ್ಯಂಡ್ ಎನರ್ಜಿಟಿಕ್ ಖಡಕ್ ಎಸ್ಪಿಯಾಗಿ ರಂಜೀತ್ ಕುಮಾರ್ ಭಂಡಾರು ರವರಿಗೆ ಬಳ್ಳಾರಿ ಮೊದಲ ಪೋಸ್ಟಿಂಗ್ ಹಾಗಾಗಿ ಇವರ ಮೇಲೆ ಸಾರ್ವಜನಿಕರು ಸಾಕಷ್ಟು ನಿರೀಕ್ಷೆಗಳನ್ನ ಇಟ್ಟಿದ್ದಾರೆ. ಈ ಮಟ್ಕಾ ದಂಧೆ ಬಳ್ಳಾರಿಯಲ್ಲಿ ಎಗ್ಗಿಲ್ಲದೆ, ನಡೆಯುತ್ತಿರುವುದರಿಂದ ಬಡ ಜನರ ಬದುಕು ಬರ್ಬಾದ್ ಆಗ್ತಾಯಿದೆ. ಸ್ಲಂ ಪ್ರದೇಶಗಳಲ್ಲಿ ಜನ ಮಟ್ಕಾದಂತಹ ದುಷ್ಚಟಗಳಿಗೆ ಬಲಿಯಾಗುತ್ತಿದ್ದು, ಈ ದಂಧೆಗೆ ಕಡಿವಾಣ ಇಲ್ಲದಂತಾಗಿತ್ತು. ಆದರೆ, ಎಸ್ಪಿ ರಂಜೀತ್ ಕುಮಾರ್ ರವರು ಫೀಲ್ಡಿಗಿಳಿದು ಬಳ್ಳಾರಿ ಜನತೆಗೆ ಹೊಸ ಭರವಸೆ ಮೂಡಿಸಿದ್ದಾರೆ. "ಜಾಗೃತಿ ಕಿರಣ" ಪತ್ರಿಕೆಯ ಖಚಿತ ಮಾಹಿತಿ ಮೇರೆಗೆ ಖುದ್ದು ಎಸ್ಪಿಯೇ ನೇರವಾಗಿ ಫೀಲ್ಡಿಗಿಳಿದು ನಗರದ ಮಿಲ್ಲರ್ ಪೇಟೆಯ ಪೋಲಿಸ್ ಕ್ವಾಟ್ರಾಸ್ ಹಿಂಭಾಗದ ಮಟ್ಕಾ ಅಡ್ಡೆಯ ಮೇಲೆ ದಾಳಿ ಮಾಡಿ ಪರಿಶೀಲಿಸಿ, 87 ಸಾವಿರ ನಗದು ಹಾಗೂ ಮಟ್ಕಾ ಪಿಂಪ್ ಕಣೇಕಲ್ ಅಬ್ದುಲ್ ಸೇರಿ 11 ಜನರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಇನ್ನು ಬಳ್ಳಾರಿಯ ಕಪ್ಪಗಲ್ ರಸ್ತೆ, ತಾಳೂರು ರಸ್ತೆ, ಕೌಲ್ ಬಜಾರ್ ಗಳಲ್ಲಿ ಮಟ್ಕಾ ಅಂಗಡಿಗಳು ಸಾಕಷ್ಟಿದ್ದು ಬಹು ಮುಖ್ಯವಾಗಿ ಮಟ್ಕಾ ಕಿಂಗ್ ಕೌಲ್ ಬಜಾರ್ ಇಮ್ರಾನ್ ಬಾಗ್ವಾನ್, ಸಿರುಗುಪ್ಪ, ಬಳ್ಳಾರಿ ಗ್ರಾಮಾಂತರ ಹಾಗೂ ಬಳ್ಳಾರಿ ನಗರ ಪ್ರದೇಶದ ಮಟ್ಕಾ ಬುಕ್ಕಿಗಳಿಂದ ಪಟ್ಟಿಗಳನ್ನ ತೆಗೆದುಕೊಳ್ಳುತ್ತಿದ್ದು, ಈ ಮಟ್ಕಾ ದಂಧೆಕೋರನ ಕೈಗೆ ಕೊಳ ಹಾಕಬೇಕಿದೆ. ಬಳ್ಳಾರಿಯ ಸುತ್ತಮುತ್ತಲಿನ ಸಣ್ಣ ಪುಟ್ಟ ಬಿಟರ್ ಗಳಿಂದ ಪಟ್ಟಿಯನ್ನ ಪಡೆದು ದೊಡ್ಡ ಮಟ್ಟದಲ್ಲಿ ಮಟ್ಕಾ ದಂಧೆಯನ್ನ ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು ಇವನ್ನ ಮಟ್ಟಹಾಕದೇ ಇರುವುದು ಬಳ್ಳಾರಿ ಮಟ್ಕಾ ದಂಧೆಗೆ ಬುನಾದಿಯಾಗಿದ್ದಾನೆ.
ಇನ್ನು ಹಳೆಯ ಮಟ್ಕಾ ಕಿಂಗ್ ಮೋಯಿನ್ ಮಟ್ಕಾ ದಂಧೆಯಿಂದ ದೂರ ಇದ್ದ ಅಂತ ಹೇಳಲಾಗಿತ್ತು. ಆದರೆ, ಈಗ ಕಳೆದ ತಿಂಗಳಿಂದ ಕೌಲ್ ಬಜಾರ್ ಮೊಯೀನ್ ಮತ್ತೆ ಫೀಲ್ಡಿಗಿಳಿದ್ದಾನೆ ಎನ್ನುವ ಮಾತುಗಳು ಕೇಳಿ ಬಂದಿವೆ. ಇವನ ಕೈಗೂ ಕೊಳ ತೋಡಿಸಿ, ಹೆಡೆಮುರಿ ಕಟ್ಟಬೇಕಿದೆ. ಇನ್ನು ಕೌಲ್ ಬಜಾರ್ ನಲ್ಲಿ ಹೊಸ ಹೊಸ ಮುಖಗಳು ಮಟ್ಕಾ ದಂಧೆಗೆ ಎಂಟ್ರಿಯಾಗಿದ್ದು, ಅವರನ್ನೆಲ್ಲ ಪತ್ತೆ ಹಚ್ಚಿ, ಹೆಡೆಮುರಿ ಕಟ್ಟಿ ಮಟ್ಕಾ ದಂಧೆಯನ್ನ ನಿಯಂತ್ರಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಲ್ಲದೇ, ಮಟ್ಕಾ ದಂಧೆಯ ಮಾಹಿತಿ ಸಿಗುತ್ತಿದ್ದಂತೆ ಸ್ಥಳೀಯ ಫೋಲಿಸ್ ಅಧಿಕಾರಿಗಳ ಸಹಾಯ ಇಲ್ಲದೇ, ಖುದ್ದು ಎಸ್ಪಿಯೇ ಬಂದು ದಾಳಿ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗಳ ಸುರಿಮಳೆಯೇ ವ್ಯಕ್ತವಾಗುತ್ತಿದೆ.