ಹೊಸಪೇಟೆ: ಕೂಳಬಾಕ ಪೋಲಿಸರನ್ನ ಜೈಲಿಗಟ್ಟಿದ ಎಸ್ಪಿ ಅರುಣ್ ಕುಮಾರ್!

ಹೊಸಪೇಟೆ: ಕೂಳಬಾಕ ಪೋಲಿಸರನ್ನ ಜೈಲಿಗಟ್ಟಿದ ಎಸ್ಪಿ ಅರುಣ್ ಕುಮಾರ್!

ವಿಜಯನಗರ (ಹೊಸಪೇಟೆ) ಶಿಸ್ತಿನ ಇಲಾಖೆಯ ಖಡಕ್ ಐಪಿಎಸ್  ಅಧಿಕಾರಿಯೊಬ್ಬ ಸಿಂಗಂ ರೀತಿ ತಮ್ಮದೇ ಇಲಾಖೆಯ ಕೂಳುಬಾಕ ಪೋಲಿಸ್ ಸಿಬ್ಬಂದಿಗಳಿಗೆ ಬಟ್ಟೆ ಬಿಚ್ಚಿದ ಬಿಸಿ ಬಿಸಿ ಸುದ್ದಿ ಇದು. ತಮ್ಮದೇ, ಇಲಾಖೆಯ ಅನ್ನ ತಿಂದು ಆದೇ ಇಲಾಖೆಗೆ ದ್ರೋಹ ಬಗೆಯಲು ನಿಂತ ಅಡ್ನಾಡಿ ಪೋಲಿಸ್ ಪೇದೆಗಳನ್ನ ಮನೆಗೆ ಕಳುಹಿಸಿ ಖಡಕ್ ಪೋಲಿಸಿಂಗ್ ಮಾಡಿ ಇಲಾಖೆಯ ಗೌರವವನ್ನ ಹೆಚ್ಚಿಸಿದ ಸ್ಟೋರಿ ಇದು. ಹೌದು!

 ಪ್ರೀಯ ಓದುಗರೇ, ಗಣಿನಾಡು ಬಳ್ಳಾರಿಯಿಂದ ಬೇರ್ಪಟ್ಟು ಹೊಸ ವಿಜಯನಗರ ಜಿಲ್ಲೆ ಉದಯವಾಗಿದ್ದು ತಮಗೆಲ್ಲ ಗೋತ್ತೆ ಇದೆ. ಈ ವಿಜಯನಗರ ಜಿಲ್ಲೆ ಉದಯ ಆದ ಮೇಲೆ ಏನೆಲ್ಲ ಬದಲಾವಣೆ ಆಗಿದೆಯೊ, ಇಲ್ಲೋ ಗೊತ್ತಿಲ್ಲ, ಆದ್ರೆ ಹೊಸ ಜಿಲ್ಲೆಯ ವ್ಯಾಪ್ತಿಯ ಪೊಲೀಸ್ ಇಲಾಖೆಯಲ್ಲಂತೂ ಭರ್ಜರಿ ಬದಲಾವಣೆಯ ಬಿರುಗಾಳಿಯೇ ಬೀಸುತ್ತಿದೆ. ಇದಕ್ಕೆ ಕಾರಣ ಹೊಸ ಜಿಲ್ಲೆಗೆ ಪೊಲೀಸ್ ವರಿಷ್ಠಾದಿಕಾರಿಯಾಗಿ (ಎಸ್ಪಿ) ನೇಮಕ ಗೊಂಡಿರುವ ಡಾಕ್ಟರ್ ಅರುಣ್ ಕುಮಾರ್ ಕೆ.

ಹೌದು!  ಅರುಣ್ ಕುಮಾರ್ ಹೆಸರು ಕೇಳುತಿದ್ದಂತೆ ಪೊಲೀಸ್ ಇಲಾಖೆಯ ಕೆಲ ಭ್ರಷ್ಟ, ಕೂಳುಬಾಕ  ಸಿಬ್ಬಂದಿಗಳಿಗೆ ಅಧಿಕಾರಿಗಳಿಗೆ ತನ್ನಿಂತಾನೆ ಬೆವರು ಕಿತ್ತು ಬರೋದಕ್ಕೆ ಶುರುವಾಗಿದೆ. ಈ ಹಿಂದೆ ಹೊಸಪೇಟೆಗೆ ಪೋಸ್ಟಿಂಗ್ ಸಲುವಾಗಿ ಕೆಲ ಅಧಿಕಾರಿಗಳು ಇನ್ನಿಲ್ಲದ ಪ್ರಯತ್ನ ಮಾಡಿ ಎಲ್ಲೆಲ್ಲಿ ಪ್ರಸಾದ ಮುಟ್ಟಿಸಬೇಕೋ ಅಲ್ಲೆಲ್ಲ ಪ್ರಸಾದ ಮುಟ್ಟಿಸಿ ಹೊಸಪೇಟೆಗೆ ಬರಲು ತುದಿಗಾಲ ಮೇಲೆ ನಿಲ್ಲುತ್ತಿದ್ದರು, ಆದರೆ ಈಗ ಅರುಣ್ ಕುಮಾರ್ ರ ಹೊಡೆತಕ್ಕೆ ಇಲ್ಲಿಗೆ ಬರೋದು ಹಾಗಿರಲಿ ಇರೋ ಕೆಲ ಭ್ರಷ್ಟ ಅಧಿಕಾರಿಗಳು ಹೊಸಪೇಟೆಯಿಂದ ಜಾಗ ಖಾಲಿ ಮಾಡಲು ನಿಂತಿದ್ದಾರೆ. 


ಇದಕ್ಕೆ ಕಾರಣ, ಅವರ ಜನ ಪರ ಕಾಳಜಿ, ಖಡಕ್ ಪೋಲಿಸಿಂಗ್ ಹಾಗೂ ವಿಜಯನಗರ ಜಿಲ್ಲೆಯಾದ್ಯಂತ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿ ಅಕ್ರಮ ದಂಧೆಕೋರರಿಗೆ ನಡುಕ ಹುಟ್ಟಿಸಿದ್ದು, ಇಡೀ ವಿಜಯನಗರ ಜಿಲ್ಲೆಯ ಜನಕ್ಕೆ ಗೋತ್ತಿರುವ ವಿಚಾರವಾಗಿದೆ. ಆದರೆ ದೀಪಾವಳಿ ಹಬ್ಬದ ಪ್ರಯುಕ್ತ ಮೂರ್ನಾಲ್ಕು ದಿನಗಳ ಕಾಲ ಹಳ್ಳಿಗಳಲ್ಲಿ ಪಟ್ಟಣಗಳಲ್ಲಿ ಬೀದಿಯಲ್ಲಿ ಶಾಮೀಯಾನ ಹಾಕಿ ಟೆಂಟ್ ಗಳನ್ನ ಹಾಕಿ ಇಸ್ಪೀಟ್ ಆಟ (ಜೂಜಾಟ) ಆಡುವುದು ವಾಡಿಕೆ ಇತ್ತು. ಆದರೆ ಆಖಂಡ ಬಳ್ಳಾರಿ ಜಿಲ್ಲೆ ಇದ್ದ ಸಂದರ್ಭದಲ್ಲಿ ಖಡಕ್ ಎಸ್ಪಿ ಆರ್.ಚೇತನ್ ಇದ್ದಾಗ ಇದಕ್ಕೆ ಕಡಿವಾಣ ಹಾಕಲಾಗಿತ್ತು. ಅಂದಿನಿಂದ ಪ್ರತಿವರ್ಷ ದೀಪಾವಳಿ ಹಬ್ಬಕ್ಕೆ ಈ ಜೂಜಾಟ ಬೀದಿ ಬದಿ ಸಾರ್ವಜನಿಕ ಸ್ಥಳದಲ್ಲಿ ಆಡುವುದು ಕಡಿಮೆಯಾಗಿತ್ತು. ಆದರೆ ಕದ್ದು ಮುಚ್ಚಿ ಹಾಗೆ ಜೂಜಾಡುವವರು ನಾಯಿ ಬಾಲ ಡೊಂಕು ಎಂಬಂತೆ ಪೋಲಿಸರ ಕಣ್ತಪ್ಪಿಸಿ ಆಡುತ್ತಾರೆ. ಆದರೆ, ವಿಜಯನಗರದಲ್ಲಿ ಕಳೆದ ಎರಡು ದಿನಗಳಿಂದ ದೀಪಾವಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗಿತ್ತು. ಆದರೆ, ಕೆಲ ಜೂಜು ಕೋರರು ಈ ಶುಭ ದಿನದಂದೇ ತಮ್ಮ ಜೂಜಾಟದ ಚಟವನ್ನ ಬಿಡದೆ ಪೋಲಿಸರ ಭಯವಿಲ್ಲದೇ ಜೂಜಾಟವನ್ನ ರಸ್ತೆಗೆ ತಂದು ಬೀದಿಯಲ್ಲಿ ಆಡಲಾರಂಭಿಸಿದ್ದಾರೆ.

ನಗರದ ಕೆಲವು ಪ್ರದೇಶಗಳ ನಡು ರಸ್ತೆಯಲ್ಲೇ ಚಾಪೆ ಹಾಸಿಕೊಂಡು ರಾಜಾ ರೋಷವಾಗಿ ಇಸ್ಪಿಟ್ ಆಟ ಜೋರಾಗಿ ಆಡುವುದಕ್ಕೆ ಪ್ರಾರಂಬಿಸಿದ್ದಾರೆ. ಇದನ್ನ ಮಟ್ಟಹಾಕಬೇಕಿದ್ದ ಪೋಲಿಸರು
ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಭ್ರಷ್ಟ ಕೂಳುಬಾಕ ಪೊಲೀಸ್ ಸಿಬ್ಬಂದಿಗಳು, ಎಂಜಲು ಕಾಸಿಗೆ ಕೈಚಾಚಿ ಒಂದೊಂದು ಇಸ್ಪಿಟ್ ಅಡ್ಡದಿಂದ ಸಾವಿರ ಎರಡು ಸಾವಿರ ಲಂಚದ ಹಣ ವಸೂಲಿ ಮಾಡುವ ಮೂಲಕ ಅನ್ನ ಹಾಕೋ ಇಲಾಖೆಗೆ ದ್ರೋಹ ಬಗೆದಿದ್ದಾರೆ. ಇನ್ನು ಎಂಜಲು ಕಾಸು ಕೊಡದ ಕೆಲವು ಕಡೆಗಳಲ್ಲಿ ದಾಳಿ ನಡೆಸುವ ಪೊಲೀಸ್ ಸಿಬ್ಬಂದಿಗಳು, ದಾಳಿಯಲ್ಲಿ ಸಿಕ್ಕ ಹಣವನ್ನ ಪೊಲೀಸ್ ಇಲಾಖೆಯ ಗಮನಕ್ಕೆ ತಾರದೆ ತಮ್ಮ ಜೇಬಿಗೆ ಇಳಿಸಿಕೊಂಡು ಬೆತ್ತಲಾಗಿದ್ದಾರೆ.


ಅಂತದ್ದೇ ಪ್ರಕರಣದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗಳು ಅಮಾನತ್ತು ಆಗುವುದಲ್ಲದೆ, ತಾವು ಕೆಲಸ ಮಾಡುವ ಪೊಲೀಸ್ ಠಾಣೆಯಲ್ಲೇ ಆರೋಪಿಯಾಗಿ ಜೈಲಿಗೆ ತಳ್ಳಲ್ಪಟ್ಟಿದ್ದಾರೆ. ಹೌದು! ಹೊಸಪೇಟೆ ನಗರದ ಛಲವಾದಿ ಕೇರಿಯಲ್ಲಿ ಮೊನ್ನೆ 23/10/2022 ರ ಮದ್ಯರಾತ್ರಿ ಇಸ್ಪಿಟ್ ಆಟ ಆಡುವ ಮಾಹಿತಿ ತಿಳಿದ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿಗಳು,ಇಸ್ಪಿಟ್ ಅಡ್ಡಾದ ಮೇಲೆ ದಾಳಿ ನಡೆಸಿದ್ದಾರೆ, ದಾಳಿಯ ವೇಳೆ 20 ಸಾವಿರ ನಗದು ಸೇರಿದಂತೆ ಒಂದು ಮೊಬೈಲ್ ಕೂಡ ವಶಕ್ಕೆ ಪಡೆದಿದ್ದಾರೆ.

ಆದರೆ ಕಾರ್ಯಾಚರಣೆಯ ವರದಿಯನ್ನ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಿಲ್ಲ. ಅದರ ಪರಿಣಾಮ ತೊಟ್ಟ ಖಾಕಿ ಬಟ್ಟೆಯನ್ನ ಬಿಚ್ಚಿ ಜೈಲಿಗೆ ಹೋಗಿದ್ದಾರೆ.
ಹೌದು! ಹೊಸಪೇಟೆಯ ಬಾಣದಕೇರಿಯಲ್ಲಿ ವಾಸವಾಗಿರುವ ವೆಂಕಟೇಶ್ ಎಂಬ ವ್ಯಕ್ತಿ ಮಾರನೆ ದಿನ ಬೆಳಿಗ್ಗೆ ಪಟ್ಟಣ ಪೊಲೀಸ್ ಠಾಣೆಗೆ ಬಂದು ನಿನ್ನೆ ರಾತ್ರಿ ನಡೆದ ದಾಳಿಯಲ್ಲಿ ವಶಕ್ಕೆ ಪಡೆದಿರುವ ಮೊಬೈಲ್ ಹಿಂಪಡೆಯಲು ಮುಂದಾಗಿದ್ದಾರೆ,

ಆದರೆ ಮೊಬೈಲೂ ಇಲ್ಲ, ಇತ್ತ ದಾಳಿಯ ದಾಖಲೆಯೂ ಠಾಣೆಯಲ್ಲಿ ಇಲ್ಲ, ಹೀಗಿರುವಾಗ ನಿನ್ನೆ ಇಸ್ಪಿಟ್ ಅಡ್ಡೆಯ ಮೇಲೆ ದಾಳಿ ನಡೆಸಿದ್ದು ಪೊಲೀಸರೊ ಅಥವಾ ವಂಚಕರೋ ಎಂದು ಪತ್ತೆ ಹಚ್ಚುವಂತೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ, ದೂರ ಆಧರಿಸಿದ ಇಲಾಖೆಯ ಅಧಿಕಾರಿಗಳು ತನಿಖೆ ಕೈಗೊಂಡು ವಿಚಾರಣೆ ಮುಂದುವರೆಸಿದಾಗ ತಮ್ಮ ಠಾಣೆಯ ನಾಲ್ಕು ಜನ ಸಿಬ್ಬಂದಿಗಳಾದ ಮಹೇಶ್, ಅಭಿಶೇಕ್, ಮಂಜುನಾಥ, ಶ್ರೀಕಾಂತ್ ಎಂದು ತಿಳಿದು ಬಂದಿದೆ,

ತನಿಖಾ ವರದಿಯ ಅನುಸಾರ ದಿಟ್ಟ ನಿರ್ಧಾರ ತೆಗೆದುಕೊಂಡ ವಿಜಯನಗರ ಎಸ್ಪಿ ಅರುಣ್ ಕುಮಾರ್  ಈ ನಾಲ್ವರು ಸಿಬ್ಬಂದಿಗಳ ವಿರುದ್ದ ವಂಚನೆ ಪ್ರಕರಣ ದಾಖಲಿಸಲು ಆದೇಶ ಮಾಡುವುದರ ಜೊತೆಗೆ ಕೂಡಲೆ ಈ ನಾಲ್ವರನ್ನ ಪೋಲಿಸ್ ಬಟ್ಟೆ ಬಿಚ್ಚಿಸಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಸದ್ಯಕ್ಕೆ ಈ ನಾಲ್ವರು ಪೊಲೀಸ್ ಸಿಬ್ಬಂದಿಗಳು ನ್ಯಾಯಾಂಗ ಬಂದನದಲ್ಲಿ ಇದ್ದು, ಇನ್ನೂ ಕೆಲ ಭ್ರಷ್ಟ ಪೊಲೀಸ್ ಸಿಬ್ಬಂದಿಗಳು ಬಲಿಯಾಗುವ ಮುನ್ಸೂಚನೆ ವಿಜಯನಗರ ಜಿಲ್ಲೆಯಲ್ಲಿದೆ. ಸದ್ಯಕ್ಕೆ ವಿಜಯನಗರ ಎಸ್ಪಿ ಅರುಣ್ ಕುಮಾರ್  ಅವರ ಕಾರ್ಯ ವೈಖರಿ ಜಿಲ್ಲೆಯ ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದ್ದರೆ ಇಂತಾ ಖಡಕ್ ಅಧಿಕಾರಿ ಇರಬೇಕು ಎನ್ನುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಈ ಹಿಂದೆ ಕೊಟ್ಟೂರು ಪೋಲಿಸರಿಗೂ ಜೈಲಿಗೆ ಕಳುಹಿಸಿದ್ದನ್ನ ನಾವು ಇಲ್ಲಿ ಸ್ಮರಿಸ ಬೇಕಿದೆ. ಕಾನೂನು ರಕ್ಷಕರೇ ಭಕ್ಷಕರಾದರೆ ಹೇಗೆ? ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಬೇಕಾದ ಪೋಲಿಸರೇ ಅಕ್ರಮ ದಂಧೆಕೋರರಿಂದ ಎಂಜುಲು ಕಾಸಿಗೆ ಕೈ ಚಾಚಿದರೆ ಹೇಗೆ? ಎಂಬ ಪ್ರಶ್ನೆಗಳು ಸಾರ್ವಜನಿಕರನ್ನ ಕಾಡಲಾರಂಭಿಸಿದೆ.