ಚಳ್ಳಕೆರೆ ಸಿಪಿಐ ಉಮೇಶ್ ಮೇಲೆ ಅತ್ಯಾಚಾರ ಪ್ರಕರಣ!
ಚಿತ್ರದುರ್ಗ, ಅ.24:ಹಾಲಿ ಚಳ್ಳಕೆರೆ ಠಾಣೆಯ ಸಿಪಿಐ ಜಿ.ಬಿ.ಉಮೇಶ್ ವಿರುದ್ಧ ಚಿತ್ರದುರ್ಗ ಮಹಿಳಾ ಪೋಲಿಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಉಮೇಶ್ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ದೂರುದಾರ ಯುವತಿಗೆ ಉಮೇಶ್ ಸೋದರ ಮಾವನ ಮಗನಾಗನಿದ್ದು, ನಿವೇಶನದ ಸಮಸ್ಯೆಯ ಹಿನ್ನೆಲೆಯಲ್ಲಿ ಸಹಾಯ ಮಾಡುವ ನೆಪದಲ್ಲಿ ಐದು ವರ್ಷಗಳಿಂದ ಅತ್ಯಾಚಾರ ಎಸಗಿದ್ದಾಗಿ ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.
ಘಟನೆ ವಿವರ: ಜಿ.ಬಿ.ಉಮೇಶ್ ಐದು ವರ್ಷಗಳ ಹಿಂದೆ ದಾವಣಗೆರೆಯ ಉತ್ತರ ವಿಭಾಗದ ವೃತ್ತ ನಿರೀಕ್ಷಕರಾಗಿ ಬಸವನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು ಆ ವೇಳೆ ನಿವೇಶನದ ಸಮಸ್ಯೆ ಬಗ್ಗೆ ಯುವತಿಯು ಉಮೇಶ್ ಅವರಲ್ಲಿ ಸಹಾಯ ಯಾಚಿಸಿದ್ದಳು. ಅದರಂತೆ ಸಹಾಯ ಮಾಡುವ ನೆಪದಲ್ಲಿ ಉಮೇಶ್ ಅತ್ಯಾಚಾರ ಎಸಗಿದ್ದಾನೆ. ಇದಲ್ಲದೆ ಉಮೇಶ್ ಬೆದರಿಸಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಐದು ಸಲ ಯುವತಿಗೆ ಗರ್ಭಪಾತ ಮಾಡಿಸಿರುವ ಆರೋಪ ಕೇಳಿಬಂದಿದೆ.
ಉಮೇಶ್ ಗೆ ಈಗಾಗಲೇ ಇಬ್ಬರು ಪತ್ನಿಯರಿದ್ದು, ನನ್ನನ್ನು ಮೂರನೆಯವಳಾಗಿರು ಎಂದು ಹೇಳಿಕೊಂಡಿದ್ದ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಒಂದು ವೇಳೆ ತಾನು ಹೇಳಿದ ಹಾಗೆ ಕೇಳದೆ ಇದ್ದಲ್ಲಿ ನಿಮ್ಮ ನಿವೇಶನ ನಿಮಗೆ ಸಿಗದ ಹಾಗೆ ಮಾಡುತ್ತೇನೆ, ನಿಮ್ಮ ತಂದೆ ತಾಯಿಯ ಬದುಕು ಬೀದಿಗೆ ತರುತ್ತೇನೆಂದು ಪ್ರಾಣ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.ಈ ಹಿಂದೆ ದಾವಣಗೆರೆ ಜಾಲಿನಗರದಲ್ಲಿಯೂ ಸಹ ಗಂಡ ಹೆಂಡತಿಯ ವಾಜ್ಯದಲ್ಲಿಯು ಸಹ ದುರುದಾರಳ ಪರವಾಗಿ ನಿಂತು ದೂರುದಾರಳ ಜೊತೆ ಅಕ್ರಮ ಸಂಬಂಧದ ವಿಚಾರದಲ್ಲಿ ಒಂದು ಕೋಮಿನ ಕೆಂಗಣ್ಣಿಗೇ ಗುರಿಯಾಗಿದ್ದರು
ಘಟನೆ ಕುರಿತು ಸಿಪಿಐ ಉಮೇಶ್ ವಿರುದ್ಧ ಪ್ರಕರಣ ಸಂಖ್ಯೆ 199/2022 ಕಲಂ 376 ಕ್ಲಾಸ್ (2) (K)(N), 323, 504, 506 ಐಪಿಸಿ ಅಡಿ ಪ್ರಕರಣ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಸಿಪಿಐ ಉಮೇಶ್ ತಲೆಮರೆಸಿಕೊಂಡಿದ್ದಾರೆ