ಬಳ್ಳಾರಿ ಮಟ್ಕಾ ದಂಧೆಗೆ ಕಡಿವಾಣ ಹಾಕ್ತರಾ ಎಸ್ಪಿ ರಂಜೀತ್ ?

ಬಳ್ಳಾರಿ ಮಟ್ಕಾ ದಂಧೆಗೆ ಕಡಿವಾಣ ಹಾಕ್ತರಾ ಎಸ್ಪಿ ರಂಜೀತ್ ?

ಬಳ್ಳಾರಿ ಜಿಲ್ಲೆಯಾದ್ಯಂತ ಕಳೆದ ಹಲವು ವರ್ಷಗಳಿಂದ ಮಟ್ಕಾ ದಂಧೆ ಎಗ್ಗಿಲ್ಲದೇ, ನಡೆಯುತ್ತಿರುವುದು ಜಗ್ದಜಾಹೀರು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ. ಈ ಹಿಂದೆ ಆರ್.ಚೇತನ್ (ಸದ್ಯ ಮೈಸೂರು ಎಸ್ಪಿ) ಎಸ್ಪಿಯಾಗಿದ್ದಾಗ ಅಕ್ರಮ ದಂಧೆಗಳು ಸ್ಥಬ್ಧವಾಗಿ ಮಟ್ಕಾ ಹತೋಟಿಯಲ್ಲಿತ್ತು. ನಂತರ ಬಂದ ಎಸ್ಪಿ ಲಕ್ಷ್ಮಣ್ ನಿಂಬರಗಿ ಅಲ್ಪ ಅವಧಿಯಾದರು ಕೂಡ ಅಕ್ರಮ ದಂಧೆಗಳು ಸೇರಿದಂತೆ ಖಡಕ್ ಪೋಲಿಸಿಂಗ್ ಮಾಡಿದರು. ಆ ನಂತರದಲ್ಲಿ ಬಂದ ಅರುಣ್ ರಂಗರಾಜನ್, ಸೈದುಲ್ ಅಡಾವತ್, ಎಸ್ಪಿಯಾಗಿ ಬಳ್ಳಾರಿಗೆ ಕಾಲಿಟ್ಟ ತಕ್ಷಣ ಬಳ್ಳಾರಿಯಲ್ಲಿ ಮಟ್ಕಾ ದಂಧೆಕೋರರು ತಮ್ಮ ಕಬಂಧ ಬಾವುವನ್ನ ಚಾಚಿದರು. ಬಳ್ಳಾರಿಯ ಗಲ್ಲಿ ಗಲ್ಲಿ ಗಳಲ್ಲಿ ಮಟ್ಕಾ ಅಂಗಡಿಗಳು ಆರಂಭವಾದವು. ಅಕ್ರಮ ಅನ್ನಭಾಗ್ಯ ಅಕ್ಕಿ ಸಗಾಣೆ ಸೇರಿದಂತೆ ಬಳ್ಳಾರಿಯಲ್ಲಿ ಏನು ನಡಿಬಾರದೋ ಎಲ್ಲಾ ದಂಧೆಗಳು ಶುರುವಾದವು. ಮೊನ್ನೆ ಅನ್ನಭಾಗ್ಯ ಅಕ್ರಮ ಅಕ್ಕಿ ಸಗಾಣೆದಾರರ ಮದ್ಯೆ ಕಲಹ ಉಂಟಾಗಿ ಆ ಕಲಹ ಹತ್ಯೆಯಲ್ಲಿ ಅಂತ್ಯವಾಗಿದ್ದು, ಇಡೀ ಬಳ್ಳಾರಿ ಜಿಲ್ಲೆಯ ಜನ ಬೆಚ್ಚಿ ಬೀಳಿಸುವಂತೆ   ಮಾಡಿತ್ತು. ಅಷ್ಟರಲ್ಲೆ ಎಸ್ಪಿ ಸೈದುಲ್ ಅಡಾವತ್ ವರ್ಗಾವಣೆ ಆದೇಶ ಹೊರ ಬಿತ್ತು. ನೂತನ ಎಸ್ಪಿಯಾಗಿ ರಂಜೀತ್ ಕುಮಾರ್ ಭಂಡಾರು ಬಳ್ಳಾರಿಗೆ ಕಾಲಿಟ್ಟರು ಮಟ್ಕಾ ಅಂಗಡಿಗಳು ಬಂದ್ ಆಗಲಿಲ್ಲ. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ "ಜಾಗೃತಿ ಕಿರಣ" ಪತ್ರಿಕೆಯ ಮಾಹಿತಿ ಆಧರಿಸಿ ಎಸ್ಪಿ ಫೀಲ್ಡಿಗಿಳಿದು ಅಕ್ರಮ ದಂಧೆಕೋರರಿಗೆ ಅಕ್ಷರ ಸಹ ನಡುಕ ಹುಟ್ಟಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಬಳ್ಳಾರಿಯ ಆನೇಕ ಏರಿಯಾಗಳಲ್ಲಿ ಮಟ್ಕಾ ಅಂಗಡಿಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಹಿಂದಿನ ಎಸ್ಪಿ ಸೈದುಲ್ ಅಡಾವತ್ ಮಟ್ಕಾ ದಂಧೆಗೆ ಕಡಿವಾಣ ಹಾಕಲು ಸಂಪೂರ್ಣ ವಿಫಲವಾಗಿದ್ದರು. ಇದರಿಂದ ಜನಕ್ಕೆ ಇಲಾಖೆಯ ಮೇಲೆ ನಂಬಿಕೆ ಇಲ್ಲದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ನೂತನ ಯಂಗ್ ಅ್ಯಂಡ್ ಎನರ್ಜಿಟಿಕ್ ಖಡಕ್ ಎಸ್ಪಿಯಾಗಿ ರಂಜೀತ್ ಕುಮಾರ್ ಭಂಡಾರು ರವರಿಗೆ ಬಳ್ಳಾರಿ ಮೊದಲ ಪೋಸ್ಟಿಂಗ್ ಹಾಗಾಗಿ ಇವರ ಮೇಲೆ ಸಾರ್ವಜನಿಕರು ಸಾಕಷ್ಟು ನಿರೀಕ್ಷೆಗಳನ್ನ ಇಟ್ಟಿದ್ದಾರೆ. ಅಲ್ಲದೇ ಇಲ್ಲಿ ಖಡಕ್ ಪೋಲಿಸಿಂಗ್ ಮಾಡಿ ಒಳ್ಳೆಯ ಹೆಸರು ಮಾಡಲು ರಂಜೀತ್ ಕುಮಾರ್ ರವರಿಗೂ ಸುವರ್ಣ ಅವಕಾಶವಿದೆ.

 

ಇನ್ನು ಈ ಮಟ್ಕಾ ದಂಧೆ ಬಳ್ಳಾರಿಯಲ್ಲಿ ಎಗ್ಗಿಲ್ಲದೆ, ನಡೆಯುತ್ತಿರುವುದರಿಂದ ಬಡ ಜನರ ಬದುಕು ಬರ್ಬಾದ್ ಆಗ್ತಾಯಿದೆ. ಸ್ಲಂ ಪ್ರದೇಶಗಳಲ್ಲಿ ಜನ ಮಟ್ಕಾದಂತಹ ದುಷ್ಚಟಗಳಿಗೆ ಬಲಿಯಾಗುತ್ತಿದ್ದು, ಈ ದಂಧೆಗೆ ಕಡಿವಾಣ ಇಲ್ಲದಂತಾಗಿತ್ತು. ಆದರೆ, ಮೊನ್ನೆ ದಸರಾ ಹಬ್ಬದ ದಿನ ಎಸ್ಪಿ ರಂಜೀತ್ ಕುಮಾರ್ ರವರು ಫೀಲ್ಡಿಗಿಳಿದು ಬಳ್ಳಾರಿ ಜನತೆಗೆ ಹೊಸ ಭರವಸೆ ಮೂಡಿಸಿದ್ದಾರೆ. "ಜಾಗೃತಿ ಕಿರಣ" ಪತ್ರಿಕೆಯ ಖಚಿತ ಮಾಹಿತಿ ಮೇರೆಗೆ ಖುದ್ದು ಎಸ್ಪಿಯೇ ನೇರವಾಗಿ ಫೀಲ್ಡಿಗಿಳಿದು ನಗರದ ಮಿಲ್ಲರ್ ಪೇಟೆಯ ಪೋಲಿಸ್ ಕ್ವಾಟ್ರಾಸ್ ಹಿಂಭಾಗದ ಮಟ್ಕಾ ಅಡ್ಡೆಯ ಮೇಲೆ ದಾಳಿ ಮಾಡಿ ಪರಿಶೀಲಿಸಿ, ಅಂದಾಜು 87 ಸಾವಿರ ನಗದು ಹಾಗೂ ಮಟ್ಕಾ ಪಿಂಪ್ ಕಣೇಕಲ್ ಅಬ್ದುಲ್ ಸೇರಿ 11 ಜನರನ್ನ ಬಂಧಿಸಿ ಖಡಕ್ ಪೋಲಿಸಿಂಗ್ ಮಾಡುವ ದಿಟ್ಟ ಸಂದೇಶ ರವಾನಿಸಿದ್ದಾರೆ. ಆದರೆ ಈ ಮಟ್ಕಾ ಪಿಂಪ್ ಕಣೇಕಲ್ ಅಬ್ದುಲ್ ಯಾರಿಗೆ ಪಟ್ಟಿಯನ್ನ ಕೊಡ್ತಾಯಿದ್ದ ಎಂಬುವುದನ್ನ ಪೋಲಿಸ್ ಭಾಷೆಯಲ್ಲಿ ಬಾಯಿಬಿಡಿಸಿದರೆ ಆಗ ಈ ಮಟ್ಕಾ ದಂಧೆಯ ಮೂಲ ಎಲ್ಲಿದೆ ಎಂಬುದು ಗೊತ್ತಾಗುತ್ತದೆ.

ಇನ್ನು ಬಳ್ಳಾರಿಯ ಗ್ರಾಮಾಂತರ ಪ್ರದೇಶ, ಕಪ್ಪಗಲ್ ರಸ್ತೆ, ತಾಳೂರು ರಸ್ತೆ, ಕೌಲ್ ಬಜಾರ್ ಗಳಲ್ಲಿ ಮಟ್ಕಾ ಅಂಗಡಿಗಳು ಸಾಕಷ್ಟಿದ್ದು ಬಹು ಮುಖ್ಯವಾಗಿ ಮಟ್ಕಾ ಕಿಂಗ್ ಕೌಲ್ ಬಜಾರ್ ಇಮ್ರಾನ್ ಬಾಗ್ವಾನ್, ಸಿರುಗುಪ್ಪ, ಕಂಪ್ಲಿ, ಕುರುಗೋಡು, ಬಳ್ಳಾರಿ ಗ್ರಾಮಾಂತರ ಹಾಗೂ ಬಳ್ಳಾರಿ ನಗರ ಪ್ರದೇಶದ ಎಲ್ಲಾ ಚೋಟ ಮೊಟ ಮಟ್ಕಾ ಬುಕ್ಕಿಗಳಿಂದ ಪಟ್ಟಿಗಳನ್ನ ತೆಗೆದುಕೊಳ್ಳುತ್ತಿದ್ದು, ಈ ಮಟ್ಕಾ ದಂಧೆಕೋರನ ಕೈಗೆ ಕೊಳ ಹಾಕಬೇಕಿದೆ. ಬಳ್ಳಾರಿಯ ಸುತ್ತಮುತ್ತಲಿನ ಸಣ್ಣ ಪುಟ್ಟ ಬಿಟರ್ ಗಳಿಂದಲೂ ಪಟ್ಟಿಯನ್ನ ಪಡೆದು ದೊಡ್ಡ ಮಟ್ಟದಲ್ಲಿ ಮಟ್ಕಾ ದಂಧೆಯನ್ನ ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು ಇವನನ್ನ ಮಟ್ಟಹಾಕದೇ ಇರುವುದು ಬಳ್ಳಾರಿ ಮಟ್ಕಾ ದಂಧೆಗೆ ಕಿಂಗ್ ಆಗಿ ಮೆರೆಯುತ್ತಿದ್ದಾನೆ.

ಇವನು ಪ್ರತಿ ದಿನ ಕೊಟ್ಯಾಂತರ ರೂ. ದಂಧೆ ಮಾಡ್ತಿದ್ದಾನೆ. ಇನ್ನು ಹಳೆಯ ಮಟ್ಕಾ ಕಿಂಗ್ ಮೋಯಿನ್ ಮಟ್ಕಾ ದಂಧೆಯಿಂದ ದೂರ ಇದ್ದ ಅಂದರೆ ಈ ಇಮ್ರಾನ್ ಬಾಗ್ವಾನ್ ಫೀಲ್ಡಿಗಿಳಿದು ಮೋಯಿನ್ ನನ್ನ ಸೈಡ್ ಲೈನ್ ಮಾಡಿದ್ದ, ಆದರೀಗ ಮತ್ತೆ ಮೋಯಿನ್ ಫೀಲ್ಡಿಗಿಳಿದ್ದಿದ್ದಾನೆ ಎಂಬ ಮಾತುಗಳು ಕೌಲ್ ಬಜಾರ್ ಪ್ರದೇಶದಲ್ಲಿ ಕೇಳಿಬರುತ್ತಿವೆ. ಆದರೆ ಒಂದು ಕಾಲದಲ್ಲಿ ಮಟ್ಕಾ ಕಿಂಗ್ ನಂತೆ ಮೆರೆದ ಮೋಯಿನ್ ನನ್ನ ಹಿಂದಿನ ಎಸ್ಪಿ ಆರ್.ಚೇತನ್ ಸರಿಯಾದ ಹೊಡೆತ ಕೊಟ್ಟು ಇವನನ್ನ ಸಂಪೂರ್ಣ ಮಟ್ಟಹಾಕಿದ್ದರು. ಚೇತನ್ ಎಸ್ಪಿ ಇದ್ದಾಗ ಅಂಡರ್ ಗ್ರೌಂಡ್ ಆಗಿದ್ದ ಮೋಯಿನ್ ಸದ್ಯ ಈಗ ಹೊರ ಬಂದು ದಂಧೆ ಆರಂಭಿಸಿದ್ದಾನೆ ಎಂಬುವುದು ಬಲ್ಲಮೂಲಗಳ ಮಾಹಿತಿ.


ಈ ಮೋಯಿನ್ ಹಾಗೂ ಇಮ್ರಾನ್ ಬಾಗ್ವಾನ್ ನ ಕೈಗೂ ಕೊಳ ತೋಡಿಸಿ, ಹೆಡೆಮುರಿ ಕಟ್ಟಿದರೆ ಬಳ್ಳಾರಿಯಲ್ಲಿ ಮಟ್ಕಾ ದಂಧೆಯನ್ನ ಹತೋಟಿಗೆ ತರಬಹುದು ಇಲ್ಲದಿದ್ದರೆ ಈ ದಂಧೆ ಬಳ್ಳಾರಿಯಲ್ಲಿ ಕಿರಾಣಿ ಅಂಗಡಿಗಳ ರೀತಿ ಪ್ರತಿ ಒಣಿಯಲ್ಲಿ ಆರಂಭವಾದರು ಅಚ್ಚರಿ ಪಡುವಂತಿಲ್ಲ. ಇನ್ನು ಕೌಲ್ ಬಜಾರ್ ನಲ್ಲಿ ಹೊಸ ಹೊಸ ಮುಖಗಳು ಮಟ್ಕಾ ದಂಧೆಗೆ ಎಂಟ್ರಿಯಾಗಿದ್ದು, ಅವರನ್ನೆಲ್ಲ ಪತ್ತೆ ಹಚ್ಚಿ, ಹೆಡೆಮುರಿ ಕಟ್ಟಿ ಮಟ್ಕಾ ದಂಧೆಯನ್ನ ನಿಯಂತ್ರಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಲ್ಲದೇ, ಮೊನ್ನೆ ದಸರಾ ಹಬ್ಬದ ದಿನ ಮಟ್ಕಾ ದಂಧೆಯ ಮಾಹಿತಿ ಸಿಗುತ್ತಿದ್ದಂತೆ ಸ್ಥಳೀಯ ಫೋಲಿಸ್ ಅಧಿಕಾರಿಗಳ ಸಹಾಯ ಇಲ್ಲದೇ, ಖುದ್ದು ಎಸ್ಪಿಯೇ ಬಂದು ದಾಳಿ ಮಾಡಿದ್ದು ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಎಸ್ಪಿಯ ಈ ಖಡಕ್ ನಿರ್ಧಾರದಿಂದ ದಸರಾ ಹಬ್ಬದ ದಿನದಿಂದ ಮಟ್ಕಾ ಸಂಪೂರ್ಣ ಬಂದ್ ಆಗಿದೆ. ಇಮ್ರಾನ್ ಬಾಗ್ವಾನ್ ಪಟ್ಟಿಯನ್ನ ಯಾರು ಕೊಡಬೇಡಿ ನಾನು ತೆಗೆದುಕೊಳ್ಳುವುದಿಲ್ಲ ಎಂದು ಬಿಟರ್ ಗಳಿಗೆ ಹೇಳಿದ್ದಾನೆ ಎಂಬ ಮಾಹಿತಿ ತಿಳಿದು ಬಂದಿದೆ. ಇನ್ನು ಈ ಖಡಕ್ ಪೋಲಿಸಿಂಗ್ ಎಸ್ಪಿ ರಂಜೀತ್ ಕುಮಾರ್ ಮುಂದುವರಿಸುತ್ತಾರಾ? ಇಲ್ಲ ಬಂದ ಹೊಸತನದಲ್ಲಿ ಸಂಪ್ರದಾಯದಂತೆ ಒಂದೆರಡು ಕಡೆ ದಾಳಿ ಮಾಡಿ ಹಲ್ ಚಲ್ ಸೃಷ್ಟಿಸಿ ಸೈಲೆಂಟ್ ಆಗ್ತಾರಾ ಕಾದು ನೋಡಬೇಕಿದೆ.