ದಾವಣಗೆರೆ ಡಿ. ಸಿ. ಆರ್. ಬಿ. ಪೊಲೀಸರ ಭರ್ಜರಿ ಕಾರ್ಯಾಚರಣೆ ನಕಲಿ ಬಂಗಾರ ನೀಡಿ ವಂಚಿಸಿದ್ದ ಆರೋಪಿಯ ಬಂಧನ 22 ಲಕ್ಷ ಹಾಗೂ ನಕಲಿ ಬಂಗಾರದ ಡಾಲರ್ ವಶ..

ದಾವಣಗೆರೆ ಡಿ. ಸಿ. ಆರ್. ಬಿ. ಪೊಲೀಸರ ಭರ್ಜರಿ ಕಾರ್ಯಾಚರಣೆ ನಕಲಿ ಬಂಗಾರ ನೀಡಿ ವಂಚಿಸಿದ್ದ ಆರೋಪಿಯ ಬಂಧನ 22 ಲಕ್ಷ ಹಾಗೂ ನಕಲಿ ಬಂಗಾರದ ಡಾಲರ್ ವಶ..

ದಾವಣಗೆರೆ: ಕೇರಳ ಮೂಲದ ವ್ಯಕ್ತಿಗೆ ಸಾಬು ಎಂಬ ವ್ಯಕ್ತಿಗೆ  ದಾವಣಗೆರೆ ನಗರದ ಪಿಬಿರಸ್ತೆಯ ಟೊಯೋಟಾ ಶೋರೂಂ ಬಳಿ ನಕಲಿ ಬಂಗಾರ ನೀಡಿ 30 ಲಕ್ಷ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲಾ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 22 ಲಕ್ಷ ವಶಕ್ಕೆ ಪಡೆಯಲಾಗಿದೆ. ಕೇರಳದ ಅಂಬಾಲಾವೈಯಲ್ ಪೊಲೀಸ್ ಠಾಣೆಯಿಂದ ವರ್ಗಾವಣೆಗೊಂಡು ದಾವಣಗೆರೆಯ ಗಾಂಧಿನಗರ  ಪೊಲೀಸ್ ಠಾಣೆಯಲ್ಲಿ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣ ದಾಖಲಾಗಿ 6-7 ತಿಂಗಳುಗಳು ಕಳೆದರೂ ಆರೋಪಿತರು ಪತ್ತೆಯಾಗದ ಕಾರಣ ಮಾನ್ಯ ಪೊಲೀಸ್ ಅಧೀಕ್ಷಕರು, ಆರೋಪಿ ಪತ್ತೆ ಮಾಡಿ ಹಣ ಅಮಾನತ್ತು ಮಾಡಲು ಡಿಸಿಆರ್‌ಬಿ ಘಟಕದ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಬಸವರಾಜ್ ಅವರಿಗೆ ಪ್ರಕರಣದ ಕಡತವನ್ನು ವರ್ಗಾಯಿಸಿದ್ದರ ಮೇರೆಗೆ ಕಾರ್ಯಪ್ರವೃತ್ತರಾದ ಡಿಸಿಆರ್‌ಬಿ ತಂಡದವರು ಬೆಂಗಳೂರು, ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳಲ್ಲಿ  ಹುಡುಕಾಡಿ ಆರೋಪಿತರ     ಬಗ್ಗೆ ಮಾಹಿತಿ ಕಲೆಹಾಕಿರುತ್ತಾರೆ. ಈ ಪ್ರಕರಣದ ಒಬ್ಬ ಆರೋಪಿತ ಗಿರೀಶ್ ತಂದೆ ರಂಗಪ್ಪ ಎಂಬುವನು ದಾವಣಗೆರೆಗೆ ಬರುವ ಬಗ್ಗೆ ಖಚಿತ ಮಾಹಿತಿಯನ್ನಾಧರಿಸಿ ಆರೋಪಿತತನನ್ನು ದಸ್ತಗಿರಿ ಮಾಡಿದ್ದು, ಆರೋಪಿತನಿಂದ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಲಕ್ಷ ನಗದು ಹಣವನ್ನು ಅಮಾನತ್ತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಕರಣದಲ್ಲಿನ ಉಳಿದ ಆರೋಪಿತರು ಬೇರೆ ಬೇರೆ ರಾಜ್ಯದವರಾಗಿದ್ದು, ತನಿಖೆ ಮುಂದುವರೆದಿರುತ್ತದೆ.
ಈ ಪ್ರಕರಣದಲ್ಲಿನ ಆರೋಪಿತ ಪತ್ತೆ ಹಾಗೂ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಬಿ.ಎಸ್.ಬಸವರಾಜ್ ಪೊಲೀಸ್ ಉಪಾಧೀಕ್ಷಕರು, ಡಿಸಿಆರ್‌ಬಿ ಘಟಕ ಮತ್ತು ಸಿಬ್ಬಂದಿಗಳಾದ ಕೆ.ಸಿ ಮಜೀದ್, ಕೆ.ಟಿ. ಆಂಜನೇಯ, ಡಿ.ರಾಘವೇಂದ್ರ, ಯು.ಮಾರುತಿ, ಪಿ.ಸುರೇಶ್, ಜೆ.ಹೆಚ್.ಆರ್.ನಟರಾಜ್, ಈ.ಬಿ.ಅಶೋಕ, ಆರ್.ರಮೇಶ್‌ನಾಯ್, ಸಿ.ಎಸ್.ಬಾಲರಾಜ್, ಸಿ.ಮಲ್ಲಿಕಾರ್ಜುನ್ ಹಾಗೂ ಕೆ.ರಂಗಪ್ಪ ಎಆರ್‌ಎಸ್‌ಐ ಇವರುಗಳು ಭಾಗವಹಿಸಿರುತ್ತಾರೆ. ಈ ಹಿಂದೆ ತಮಗೆ ನೆನಪಿರಬಹುದು ರೈತರ ಮೆಕ್ಕೆಜೋಳ ಪ್ರಕರಣವನ್ನು ಬೇಧಿಸಿ 2.ಕೋಟಿ 68ಲಕ್ಷದ  91ಸಾವಿರದ 498 ರೂಪಾಯಿಗಳ ಪೂರ್ಣ ಪ್ರಮಾಣದ ಹಣವನ್ನು ರೈತರಿಗೆ ಕೊಡಿಸುವಲ್ಲಿ ಸಫಲವಾಗಿ ಪೊಲೀಸ್  ಇಲಾಖೆಗೆ ಕೀರ್ತಿ ತಂದ ಈ ತಂಡದ ಮತ್ತೊಂದು     ಈ ಕಾರ್ಯವನ್ನು ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ಶ್ಲಾಘಿಸಿದ್ದಾರೆ.