ನಾಲಾಯಕ್ ನಾಸೀರ್ ಬಳ್ಳಾರಿಗೆ ಪ್ರವೇಶ ಮಾಡಬಾರದು - ಅನಿಲ್ ನಾಯ್ಡು

ನಾಲಾಯಕ್ ನಾಸೀರ್ ಬಳ್ಳಾರಿಗೆ ಪ್ರವೇಶ ಮಾಡಬಾರದು - ಅನಿಲ್ ನಾಯ್ಡು
ಅನಿಲ್ ನಾಯ್ಡು

ಬಳ್ಳಾರಿ: ರಾಜ್ಯಸಭಾ ಸದಸ್ಯ ಸನ್ಮಾನ್ಯ ಶ್ರೀ ಶ್ರೀ ಡಾ.ಸೈಯದ್ ನಾಸೀರ್ ಸಾಬ್ ಬಳ್ಳಾರಿಗೆ ಇಂದು ಸಂಜೆ ಆಗಮಿಸುತ್ತಿದ್ದು, ಇವರನ್ನ ಯುದ್ಧ ಗೆದ್ದ ವೀರನಂತೆ ಭವ್ಯ ಸ್ವಾಗತಕ್ಕೆ ಕಾಂಗ್ರೆಸ್ ಯೋಜನೆ ರೂಪಿಸಿದರೆ, ಇತ್ತ ಬಿಜೆಪಿ ಗೋ ಬ್ಯಾಕ್ ನಾಸೀರ್, ನಾಲಾಯಕ್ ನಾಸೀರ್ ಎಂದು ಕಪ್ಪು ಬಾವುಟ ಪ್ರದರ್ಶಿಸಲು ಮುಂದಾಗಿದೆ.

ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಾಸೀರ್ ಹುಸೇನ್‌ ಗೆದ್ದ ಬಳಿಕ, ಈ ರಾಜ್ಯದ ಶಕ್ತಿ ಸೌಧದಲ್ಲೆ ಗೆದ್ದ ಸಂಭ್ರಮದಲ್ಲಿ ನಾಸೀರ್ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿ ಸಾಕಷ್ಟು ವಿವಾದವನ್ನ ಸೃಷ್ಟಿಸಿ, ಇಡೀ ರಾಜ್ಯಾದ್ಯಂತ ಕಿಚ್ಚು ಹಚ್ಚಿದ್ದರು. ಈ ವಿವಾದ ರಾಜ್ಯಾದ್ಯಂತ ಸಾಕಷ್ಟು ಸದ್ದು ಮಾಡಿತ್ತು. ಇಡೀ ರಾಜ್ಯಾದ್ಯಂತ ನಾಸೀರ್ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು.  ವಿಧಾನ ಪರಿಷತ್ ಮೇಲ್ಮನೆಯಲ್ಲಿ ನಾಸೀರ್ ಬೆಂಬಲಿಗರ ಪಾಕ್ ಪರ ಘೋಷಣೆಯ ವಿವಾದ ತಾರಕಕ್ಕೇರಿ ಆಡಳಿತ ಪಕ್ಷದ ಸದಸ್ಯರು ಹಾಗೂ ಪ್ರತಿ ಪಕ್ಷದ ಸದಸ್ಯರ ಮಧ್ಯೆ ವಾಕ್ಸಮರಕ್ಕೂ ಕಾರಣವಾಗಿತ್ತು. ಅಲ್ಲದೇ, ಸದನದಲ್ಲಿಯೂ ಈ ವಿಚಾರ ಗದ್ದಲ ಕೂಲಾಹಲವನ್ನೆ ಸೃಷ್ಟಿಸಿತ್ತು. 

ಇದಲ್ಲದೇ, ನಿವೃತ್ತ ಐಎಎಸ್, ಐಪಿಎಸ್ ನ 30 ಕ್ಕೂ ಹೆಚ್ಚು ಅಧಿಕಾರಿಗಳು ನಾಸೀರ್ ಸಾಬ್ ಗೆ ಪ್ರಮಾಣ ವಚನ ಭೋಧಿಸಬಾರದು ಎಂದು ರಾಷ್ಟ್ರಪತಿಗಳಿಗೆ ಪತ್ರವೂ ಬರೆದಿದ್ದರು.

ಪಾಕ್ ಪರ ಘೋಷಣೆ ಕೂಗಿದ್ದರ ಬಗ್ಗೆ ಪ್ರತಿ ಪಕ್ಷಗಳ ಪ್ರತಿಭಟನೆ ರಾಜ್ಯಾದ್ಯಂತ ನಡೆದ ಹೋರಾಟಕ್ಕೆ ಸರಕಾರ ಎಫ್ ಎಸ್ ಎಲ್ ಗೆ ವಿಡಿಯೋ ಕಳುಹಿಸಿ ವರದಿ ಕೇಳಿತ್ತು. ಎಫ್ ಎಸ್ ಎಲ್ ನ ವರದಿಯಲ್ಲಿಯೂ ಪಾಕ್ ಪರ ಘೋಷಣೆ ಕೂಗಿದ್ದು ಧೃಡವಾದ ಬೆನ್ನಲ್ಲೆ, ನಾಸೀರ್ ಬೆಂಬಲಿಗ ನಾಸೀಪುಡಿ ಹಾಗೂ ಇನ್ನಿತರರನ್ನ ಪೋಲಿಸರು ಬಂಧಿಸಿ ಜೈಲಿಗೂ ಕಳುಹಿಸಿದ್ದರು.

ಇದರಿಂದ ಆಡಳಿತ ರೂಢ ಕಾಂಗ್ರೆಸ್ ಗೆ ಮುಜುಗರವೂ ಆಗಿತ್ತು. ಈ ಘಟನೆಯ ಬಳಿಕ ನಾಸೀರ್ ಹುಸೇನ್ ಸಹ ಸಾರ್ವಜನಿಕವಾಗಿ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ.

ಪ್ರತಿ ವರ್ಷವೂ ರಂಜಾನ್ ಹಬ್ಬಕ್ಕೆ ಬಳ್ಳಾರಿಗೆ ಬರುತ್ತಿದ್ದ ಸೈಯದ್ ನಾಸೀರ್ ಸಾಬ್ ಪಾಪ ಈ ವರ್ಷ ರಂಜಾನ್ ಹಬ್ಬಕ್ಕೆ ಈದ್ಗಾದಲ್ಲಿ ಕಾಣಿಸಲೇ ಇಲ್ಲ. 

ಇಷ್ಟೇಲ್ಲ ಘಟನೆ ನಡೆದರು ನಾಸೀರ್ ಹುಸೇನ್ ಈ ರಾಜ್ಯದ ಹಾಗೂ ದೇಶದ ಜನರ ಮುಂದೆ ಕ್ಷಮೆ ಕೇಳಲ್ಲಿಲ್ಲ? ತಮ್ಮ ಪಕ್ಕದಲ್ಲೆ ನಿಂತು ಪಾಕ್ ಪರ ಘೋಷಣೆ ಕೂಗಿದವರ ಕಪಾಳಕ್ಕೆ ಹೊಡೆಯಲಿಲ್ಲ. ದೇಶದ್ರೋಹಿಗಳಿಗೆ  ನಾಸೀರ್ ಬೆಂಬಲಿಸಿದ್ದು ತಪ್ಪು ಎಂದು ಬಳ್ಳಾರಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಕಿರಿಕಾರಿದ್ದಾರೆ.

ಇಂದು ನಾಸೀರ್ ಹುಸೇನ್ ಬಳ್ಳಾರಿಗೆ ಬರುತ್ತಿದ್ದು ಇವರನ್ನ ಸ್ವಾಗತಿಸಲು ಕಾಂಗ್ರೆಸ್ ನ ಕಾರ್ಯಕರ್ತರು ಭವ್ಯ ಸ್ವಾಗತ ಸಿದ್ದತೆ ಮಾಡಿಕೊಂಡ ಬಗ್ಗೆ ತಿಳಿಯುತ್ತಲೆ ನಗರದ ರಾಯಲ್ ಸರ್ಕಲ್ ನಲ್ಲಿ ಜಾಮಾಯಿಸಿ ಬಿಜೆಪಿಯ ಕಾರ್ಯಕರ್ತರು ಗೋ ಬ್ಯಾಕ್ ನಾಸೀರ್ ಗೋ ಬ್ಯಾಕ್ ಎಂದು ಘೋಷಣೆಗಳನ್ನ ಕೂಗಿದರು. 

ನಮ್ಮ ಜಿಲ್ಲೆಯಿಂದ ಹೋದ ವ್ಯಕ್ತಿ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ನಾಸೀರ್ ತನ್ನ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹಿ ಕೆಲಸ ಮಾಡಿದ್ದಾರೆ ಇಂತಹ ನಾಲಾಯಕ್ ನಾಸೀರ್ ಬಳ್ಳಾರಿಗೆ ಪ್ರವೇಶ ಮಾಡಬಾರದು ಎಂದು ಅನಿಲ್ ನಾಯ್ಡು ಹೇಳಿದ್ದಾರೆ.

ನಾಸೀರ್ ಹುಸೇನ್ ಗೆ ಕಪ್ಪು ಬಟ್ಟೆ ಪ್ರದರ್ಶಿಸಲು ನಗರದ ರಾಯಲ್ ವೃತ್ತದಲ್ಲಿ ಜಮಾವಣೆಗೊಂಡಿದ್ದ ಬಿಜೆಪಿ ಕಾರ್ಯಕರ್ತರನ್ನ ಪೋಲಿಸರು ಬಂಧಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎಸ್.ಸಿದ್ದಪ್ಪ, ಅಡವಿಸ್ವಾಮಿ, ರಘು, ಪಾಲಿಕೆ ಸದಸ್ಯ ಹನುಮಂತಪ್ಪ, ಶ್ರೀನಿವಾಸ ಮೋತ್ಕರ್ ದಾಸರಿಗೋವಿಂದ, ಸುಗುಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.