ಇಬ್ಬರ ಹೆಂಡಿರ ಮುದ್ದಿನ ಗಂಡ ವಿಜ್ಜಿಯಿಂದಲೇ ನಾಗೇಂದ್ರ ಕೆಟ್ರಾ?
ಮಾಜಿ ಸಚಿವ ನಾಗೇಂದ್ರ ಅವರು ವಾಲ್ಮೀಕಿ ಮಹರ್ಷಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದಲ್ಲಿ ಸಿಲುಕಿ ಅಪಮಾನಕ್ಕೀಡಾಗಿದ್ದಾರೆ.
ಮೊನ್ನೆ ನಾಗೇಂದ್ರರ ಪತ್ನಿಯನ್ನು ಈಡಿ ಅಧಿಕಾರಿಗಳು ಕಚೇರಿಗೆ ಕರೆಸಿ, ವಿಚಾರಣೆ ನಡೆಸಿ ಮರಳಿ ಕಳಿಸಿದ್ದಾರೆ. ಇಂತಹ ಒಂದು ಸ್ಥಿತಿಗೆ ನಾಗೇಂದ್ರರನ್ನು ತರುವಲ್ಲಿ ಅವರ ಆಪ್ತ ಸಹಾಯಕ ವಿಜಯಕುಮಾರ್ ಅಲಿಯಾಸ್ ವಿಜಿಯ ಪಾತ್ರ ಬಹಳನೇ ಇದೆ ಎಂದು ಬಲ್ಲವರೇ ಹೇಳುತ್ತಿದ್ದಾರೆ. ಅಷ್ಟಕ್ಕೂ ಮಾಜಿ ಸಚಿವ ನಾಗೇಂದ್ರರ ಆಪ್ತ ಸಹಾಯಕನಾಗಿರುವ ಈ ವಿಜಯಕುಮಾರ್ ಯಾರು? ಈತನ ಹಿನ್ನೆಲೆ ಏನು? ಮಾಜಿ ಸಚಿವ ನಾಗೇಂದ್ರರ ಆಪ್ತ ಸಹಾಯಕ ಆಗಿದ್ದು ಹೇಗೆ? ಈಗ ನಾಗೇಂದ್ರಣ್ಣನ ಬುಡಕ್ಕೆ ನೀರು ತಂದಿದ್ದು ಹೇಗೆ ಎಂದು ಹುಡುಕುತ್ತ ಹೋದಾಗ ಶಾಕಿಂಗ್ ಶಾಕಿಂಗ್ ಅಂಶಗಳು ಹೊರಗೆ ಬಿದ್ದಿವೆ.
ಮೆಕಾನಿಕ್ ಆಗಿದ್ದವನು ಪಿಎ ಆದ
ಕಳೆದ 25 ವರ್ಷಗಳ ಹಿಂದೆ ಟೂ ವೀಲರ್ ಮೆಕಾನಿಕ್ ಆಗಿದ್ದ ವಿಜಯಕುಮಾರ್ ಒಬ್ಬ ರಾಜ್ಯ ಮಟ್ಟದ ಪ್ರಭಾವಿ ರಾಜಕಾರಣಿಯ ಪಿಎ ಆಗುವವರೆಗೆ ಬೆಳೆದದ್ದೇ ಒಂದು ರೋಚಕ ಇತಿಹಾಸ. ಇಬ್ಬರು ಹೆಂಡಿರ ಮುದ್ದಿನ ಗಂಡನಾದ ಈತ, 2008ಕ್ಕೂ ಮೊದಲು ಒಬ್ಬ ಸಾಮಾನ್ಯ ಮೆಕಾನಿಕ್ ಆಗಿದ್ದವನು. ಅದೂ ಇನ್ನೊಬ್ಬರ ಸಹಾಯದಿಂದ. ಕಾಂಗ್ರೆಸ್ ಮುಖಂಡ ರಾಮ್‌ಪ್ರಸಾದ್ ಅವರ ಕೃಪಾ ಕಟಾಕ್ಷ ಇಲ್ಲದಿದ್ದರೆ ಇವನು ಇವತ್ತಿಗೂ ಅದೇ ರಾಧಿಕಾ ಟಾಕೀಜ್ ಬಳಿಯ ಮೆಕಾನಿಕ್ ಅಂಗಡಿಯಲ್ಲಿ ಮಸಿ ಬಟ್ಟೆ, ಗಿರೀಸ್‌ನಲ್ಲಿ ಕೈ ಅದ್ದಿಕೊಂಡು ಸ್ಪೇರ್ ಪಾರ್ಟ್ಸ್ ಹೊಂದಿಸಿಕೊಂಡು ಇರಬೇಕಿತ್ತು. 2008 ರಲ್ಲಿ ಮಾಜಿ ಸಚಿವ ನಾಗೇಂದ್ರ ಅವರು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಯಾಗಿ ಹೋದ ಮೇಲೆ ಅವರ ಜೊತೆ ಬಳ್ಳಾರಿಯಿಂದ ಕೂಡ್ಲಿಗಿಗೆ ಚಾಪೆ, ದಿಂಬು ತಗೊಂಡು ಹೋದವನು ಇವತ್ತಿಗೆ ಕೋಟಿ ಕೋಟಿ ಸಂಪಾದಿಸಿದ್ದಾನೆ. ಹೆಲ್ಪರ್ ಆಗಿ ಇರ್ತಿನಿ ಅಂತ ಹೋದವನು ಆಪ್ತ ಸಹಾಯಕನಾಗಿ ಬೆಳೆದ. ಕಾಂಗ್ರೆಸ್ ಮುಖಂಡ ರಾಮ್‌ಪ್ರಸಾದ್ ಅವರೇ ಇವನನ್ನು ನಾಗೇಂದ್ರ ಅವರ ಬಳಿ ಸಹಾಯಕ್ಕೆ ಇರಲಿ ಎಂದು ಕಳಿಸಿದ್ದರು. ಅವರಿಗೇನೋ ಇವನಿಂದ ನಾಗೇಂದ್ರ ಅವರಿಗೆ ಒಳ್ಳೆಯದಾಗಲಿ ಎಂಬ ಒಳ್ಳೆಯ ಉದ್ಧೇಶ ಇತ್ತು. ಆದರೆ, ಈ ಅಡ್ನಾಡಿ ತನ್ನ ಮಾಸಿದ ತಲೆ ಒಳಗಿನ ಮೆದುಳನ್ನು ಬಳಸಿ ನಾಗೇಂದ್ರರಿಗೇ ಕಂಟಕ ಆಗಿದ್ದಾನೆ. ಪಿಎ ಎಂದು ಸೇರಿಕೊಂಡ ವಿಜಿಯ ನಸೀಬು ಚೆನ್ನಾಗೇ ಇತ್ತು. ನಾಗೇಂದ್ರ ಅವರು ಕೂಡ್ಲಿಗಿಯಲ್ಲಿ ಎರಡು ಸಲ ಶಾಶಕರಾದರು. ಮುಂದೆ 2018 ರಲ್ಲಿ ಕೂಡ್ಲಿಗಿಯಿಂದ ಬಳ್ಳಾರಿಗೆ ಬಂದು ಇಲ್ಲೂ ಎರಡು ಸಲ ಗೆದ್ದರು. ನಡುವೆ ಯಾವುದೋ ಕಾರಣಕ್ಕೆ ನಾಗೇಂದ್ರಣ್ಣ ಈತನನ್ನು ದೂರು ಇಟ್ಟಿದ್ದರು. ಆದರೆ ಕಸ್ತೂರಿ ನಾಗರಾಜನ ಮಧ್ಯಸ್ಥಿಕೆಯಿಂದ ಮತ್ತೆ ವಕ್ಕರಿಸಿಕೊಂಡನು.
ದುಡ್ಡು ಕೊಟ್ಟರೆ ಮಾತ್ರ ಲೆಟರ್
ಮೊದಲಿನಿಂದಲೂ ಇವನದು ಒಂದೇ ಪಾಲಿಸಿ. ನಾಗೇಂದ್ರಣ್ಣನ ಬಳಿ ಇವನ ಮೂಲಕ ಲೆಟರ್ ಪಡೆಯಬೇಕೆಂದರೆ ದಕ್ಷಿಣೆ ಕೊಡಲೇಬೇಕು. ಲೆಟರ್ ಮೇಲೆ ನೀವು ಎಷ್ಟು ವೇಟ್ ಜಾಸ್ತಿ ಹಾಕುತ್ತೀರೋ? ಅಷ್ಟು ಬೇಗ ಲೆಟರ್ ರೆಡಿ ಮಾಡಿಸಿ, ನಾಗೇಂದ್ರಣ್ಣನ ಸಹಿ ಮಾಡಿಸಿ ಕೊಡುತ್ತಾನೆ. ಹೋದ ವರ್ಷ 2023 ರಲ್ಲಿ ನಾಗೇಂದ್ರಣ್ಣ ಸಚಿವ ಆಗುತ್ತಿದ್ದಂತೆ ಎಲ್ಲರಿಗಿಂತ ಮುಂದೆ ನಿಂತು ಲೆಟರ್ ಕೊಡಿಸಿ ಕೊಡಿಸಿಯೇ ಕೋಟ್ಯಾಂತರ ರೂಪಾಯಿಗಳನ್ನು ಸಂಪಾದಿಸಿದ ಅಡ್ನಾಡಿ ಇವನು. ವರ್ಗಾವಣೆಯಲ್ಲಂತೂ ಇವನದು ಸಿಂಹಪಾಲು. ಇವನು, ಇವನ ಜೊತೆಗೆ ಕಸ್ತೂರಿ ನಾಗರಾಜ ಜೋಡಿ. ಈ ಅಡ್ನಾಡಿ ಜೋಡಿಗಳಿಬ್ಬರೂ ಸೇರಿಕೊಂಡು ಸರ್ಕಾರಿ ಅಧಿಕಾರಿಗಳನ್ನು ಲೂಟಿ ಮಾಡಿದರು ಎಂದು ನಾಗೇಂದ್ರಣ್ಣನ ಆಪ್ತರೇ ಹೇಳುತ್ತಾರೆ. ಯಾವ ಅಧಿಕಾರಿಯ ವರ್ಗಾವಣೆಗೆ ಎಷ್ಟು? ಯಾವ ಅಧಿಕಾರಿಗೆ ಎಲ್ಲಿಗೆ ಪೋಸ್ಟಿಂಗ್ ಕೊಡಿಸಬೇಕು? ಅದರಲ್ಲಿ ತಮ್ಮ ಮಾಮೂಲು ಎಷ್ಟು? ಹೀಗೆ ಇವರೇ ಫಿಕ್ಸ್ ಮಾಡಿಕೊಳ್ಳುತ್ತಿದ್ದರು. ದುಡ್ಡು ಕೊಟ್ಟಿಲ್ಲ ಎಂದರೆ ನಾಗೇಂದ್ರಣ್ಣ ಸಹಿ ಮಾಡಿದರೂ ಆ ಲೆಟರ್ ಜನರಿಗೆ ಕೊಡುತ್ತಿರಲಿಲ್ಲ ಈ ಅಡ್ನಾಡಿ. ಕಳೆದಿದೆ ಎಂದು ಹೇಳುವುದು, ಬೆಂಗಳೂರಿನಲ್ಲಿದೆ ಎಂದು ಹೇಳುವುದು ಮಾಡುತ್ತಿದ್ದ. ಇನ್ನೂ ಕೆಲವರ ಲೆಟರ್ ರೆಡಿ ಆಗಿದ್ದರೂ ಕೂಡ ನಾಗೇಂದ್ರಣ್ಣನ ಬಳಿ ಸಹಿ ಮಾಡಿಸುತ್ತಿರಲಿಲ್ಲ. ಪೇಮೆಂಟ್ ಆಗಿರುವ ಜನರ ಲೆಟರ್‌ಗಳನ್ನು ಮಾತ್ರ ನಾಗೇಂದ್ರಣ್ಣ ಎಲ್ಲೇ ಇದ್ದರೂ ಹೋಗಿ ಮಾಡಿಸಿಕೊಂಡು ಬರುತ್ತಿದ್ದ. ಅಷ್ಟು ಕೂಳುಬಾಕ ಈ ವಿಜಯಕುಮಾರ್. ಇನ್ನು ಎಷ್ಟೋ ಸಲ ನಾಗೇಂದ್ರಣ್ಣ ಬಳ್ಳಾರಿಯಿಂದ ಬೆಂಗಳೂರಿಗೆ ಹೋಗುವಾಗ ಆಂಧ್ರದ ಗಡಿ ಚೇಳ್ಳಗುರ್ಕಿ ಬಳಿ ದಾರಿಯಲ್ಲೇ ಅಡ್ಡ ನಿಂತು ಸಹಿ ಮಾಡಿಸಿಕೊಂಡು ಬರುತ್ತಿದ್ದ ಎನ್ನುತ್ತಾರೆ ತಿಳಿದವರು.
ಎಷ್ಟೋ ಅಧಿಕಾರಿಗಳಿಗೆ ಪಂಗನಾಮ
ಇವನು ಅದೆಂತ ಅಡ್ನಾಡಿ ಎಂದರೆ ವರ್ಗಾವಣೆ ಮಾಡಿಸುವುದಾಗಿ ಹೇಳಿ ಎಷ್ಟೋ ಅಧಿಕಾರಿಗಳ ಬಳಿ ಹಣ ಪಡೆದು ಅವರಿಗೆ ಲೆಟರ್ ಕೊಟ್ಟು ಅದೇ ಜಾಗಗಳಿಗೆ ಬೇರೆ ಅಧಿಕಾರಿಗಳಿಗೆ ಲೆಟರ್ ಕೊಟ್ಟು ದುಡ್ಡು ಮಾಡಿದ್ದಾನೆಂಬ ಆರೋಪ ಇವನ ಮೇಲೆ ಇದೆ. ಜಿಲ್ಲಾ ಮಟ್ಟದ ಒಬ್ಬ ಅಧಿಕಾರಿಯಂತೂ ಇವನಿಗೆ ಹಣ ಕೊಟ್ಟು ಲೆಟರ್ ಪಡೆದರೂ ಕೆಲಸ ಆಗದೇ, ಅವರು ಬೇರೆ ಕಡೆಗೆ ವರ್ಗಾವಣೆ ಆಗಿ ಪಡಬಾರದ ಕಷ್ಟ ಅನುಭವಿಸಿದ್ದಾರೆ. ಇವನಿಗೆ ಶಾಪ ಹಾಕಿದ್ದಾರೆ. ಇವನ ಬಗ್ಗೆ ನಾಗೇಂದ್ರರ ಬಳಿ ಕಂಪ್ಲೇಂಟ್ ಕೂಡ ಕೊಡುವ ಹಾಗಿಲ್ಲ. ಏಕೆಂದರೆ ಇವನು ಇಪ್ಪತ್ನಾಲ್ಕು ತಾಸು ಅಲ್ಲಿಯೇ ಇರುತ್ತಾನೆ. ಅಲ್ಲದೇ, ಇವನ ಪಾರ್ಟ್ನರ್ ಕಸ್ತೂರಿ ನಾಗರಾಜ ಮೂಲಕ ಕೂಡ ಕಣ್ಣಿಟ್ಟಿರುತ್ತಿದ್ದ. ಜೊತೆಗೆ ಲೆಟರ್ ಟೈಪ್ ಮಾಡಲು ನಾಗೇಂದ್ರರ ಕಚೇರಿಯಲ್ಲಿ ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಿರುವುದೂ ಇವನೇ. ಹೀಗಾಗಿ ನಾಗೇಂದ್ರ ಅವರು ಯಾರಿಗೆ ಯಾವ ಲೆಟರ್ ನೀಡಿದರೆಂಬ ಮಾಹಿತಿಯನ್ನೂ ಇವನು ನಾಗೇಂದ್ರರಿಗೆ ಗೊತ್ತಿಲ್ಲದ ಹಾಗೆ ಕಲೆಕ್ಟ್ ಮಾಡುತ್ತಿದ್ದ.
ಅಧಿಕಾರಿಗಳಿಗೆ ಧಮಕಿ, ಅಕ್ಕಿ ದುಡ್ಡು ಕಲೆಕ್ಷನ್
ಇವನು ಅದೆಂತ ಹರಾಮಿ ಎಂದರೆ ಪಡಿತರ ಅಕ್ಕಿಯ ಮಾಫಿಯಾದಿಂದ ಹಣ ಸಂಗ್ರಹಿಸುವ ಕೆಲಸವನ್ನೂ ಇವನೇ ಮಾಡುತ್ತಾನೆ. ಕಚೇರಿ ಕಚೇರಿ, ಮನೆ ಮನೆ ತಿರುಗಿ ಹಫ್ತಾ ವಸೂಲಿ ಮಾಡುತ್ತಾನೆ. ಬಡವರ ಹೊಟ್ಟೆ ತುಂಬಿಸಲು ಸರ್ಕಾರ ಮಾಡಿರುವ ಯೋಜನೆಯನ್ನು ಒಬ್ಬ (ಮಾಜಿ)ಸಚಿವರ ಆಪ್ತ ಸಹಾಯಕನಾಗಿ ಲೂಟಿ ಮಾಡುತ್ತಾನೆಂದರೆ ಹೇಗೆ? ಇನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇವನು ಧಮಕಿ ಹಾಕುವುದೇನು? ಏಕ ವಚನದಲ್ಲಿ ಮಾತಾಡುವುದೇನು? ಹೇಳಬಾರದು. ಆಫ್ಟರ್ ಆಲ್ ಒಬ್ಬ ಮೆಕಾನಿಕ್ ಆಗಿದ್ದವನು ದೊಡ್ಡ ಅಧಿಕಾರಿಗಳಿಗೆ ಫೋನ್ ಮಾಡಿ ಇವನು ರೋಪ್ ಹಾಕುತ್ತಿದ್ದ. ಹೇಳಿದ ಕೆಲಸ ಮಾಡಲು ಆಗದಿದ್ದರೆ ಕತ್ತೆ ಕಾಯಿರಿ ಎಂದು ರುಬಾಬು ತೋರಿಸುತ್ತಿದ್ದ. ಇನ್ನು ಎಷ್ಟೋ ಕೆಲಸಗಳನ್ನು ಅಧಿಕಾರಿಗಳಿಗೆ ಹೇಳಿ ಮಾಡಿಸಿಕೊಳ್ಳುತ್ತಿದ್ದ. ಅವುಗಳ ಬಗ್ಗೆ ನಾಗೇಂದ್ರಣ್ಣನಿಗೆ ಗೊತ್ತೇ ಇರುತ್ತಿರಲಿಲ್ಲ. ನಾಗೇಂದ್ರಣ್ಣನಿಗೂ ಇವನು ಎಷ್ಟೋ ವಿಷಯಗಳಲ್ಲಿ ಮೋಸ ಮಾಡಿದ್ದಾನೆ ಎನ್ನುತ್ತಾರೆ ಅವರ ಆಪ್ತರು.
ಇಷ್ಟೆಲ್ಲ ಮಾಡುವ ವಿಜಯಕುಮಾರ್ ಒಬ್ಬ ಹುಟ್ಟಾ ಜಾತಿವಾದಿ. ನಾಗೇಂದ್ರಣ್ಣ ಬಳ್ಳಾರಿಯಲ್ಲಿ ಇಲ್ಲದ ವೇಳೆಯಲ್ಲಿ ನಾಗೇಂದ್ರಣ್ಣನ ಕಚೇರಿಗೆ ತನ್ನ ಜಾತಿಯ ಅಧಿಕಾರಿಗಳು, ತನ್ನ ಜಾತಿಯ ಗುತ್ತಿಗೆದಾರರನ್ನು ಕರೆಸಿ ಎಷ್ಟೋ ಸಲ ಮೀಟಿಂಗ್ ಮಾಡಿದ್ದಾನೆ. ಒಳ ಒಳಗೆ ತನ್ನ ಜಾತಿಯವರಿಗೆ ಕೆಲಸ ಮಾಡಿಸಿ ಕೊಟ್ಟಿದ್ದಾನೆ. ತನ್ನ ಜಾತಿಯೆ ಗುತ್ತಿಗೆದಾರರಿಗೆ ವರ್ಕ್ಸ್ ಕೊಡಿಸಿದ್ದಾನೆ. ಇಂತಹ ಹರಾಮಿಯಿಂದಾಗಿ ನಾಗೇಂದ್ರಣ್ಣನ ಆಪ್ತರು ಎಷ್ಟೋ ಜನ ನಾಗೇಂದ್ರಣ್ಣನಿಂದ ದೂರ ಹೋಗಿದ್ದಾರೆ. ಈಗ ಇ.ಡಿ ದಾಳಿ ಆಗಿರುವ ವಾಲ್ಮೀಕಿ ನಿಗಮದ ಹಗರಣದಲ್ಲೂ ಈ ಅಡ್ನಾಡಿಯ ಪಾತ್ರ ಇದೆ ಎನ್ನಲಾಗಿದೆ. ಇತ್ತಿಚೆಗೆ ಬಳ್ಳಾರಿಯ ನಾಗೇಂದ್ರ ಅವರ ಮನೆ ಮೇಲೆ ಇ.ಡಿ ದಾಳಿ ಮಾಡಿದಾಗ ಈ ವಿಜಯಕುಮಾರ್ ಮನೆಗೂ ಹೋಗಿದ್ದಾರೆ ಆಗ ಈ ವಿಜಯ್ ಮನೆಯಲ್ಲಿ ಇರಲಿಲ್ಲ ಆದ ಕಾರಣ ಇ.ಡಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು ಆದರೆ ಬೆನ್ನಲ್ಲೆ ಇವನು ಹೋಗದಿದ್ದಾಗ ಇ.ಡಿ ಅಧಿಕಾರಿಗಳು ಇವನನ್ನ ಬಳ್ಳಾರಿಯಿಂದು ಬೆಂಗಳೂರಿಗೆ ಕರೆದೊಯ್ಯುದು ಡ್ರೀಲ್ ಮಾಡಿ ಕಳುಹಿಸಿದ್ದಾರೆ. ಇವನಿಂದಾಗಿಯೇ ನಾಗೇಂದ್ರಣ್ಣ ಇಂದು ಈ ಸ್ಥಿತಿಗೆ ಬಂದಿದ್ದಾರೆ ಎಂದು ಅವರ ಆಪ್ತರು ಹೇಳುತ್ತಾರೆ. ಇನ್ನಾದರೂ ಇವನನ್ನು ನಾಗೇಂದ್ರಣ್ಣ ದೂರ ಇಡಬೇಕು ಎಂದು ನಾಗೇಂದ್ರ ಅವರು ಬೆಂಬಲಿಗರು ಹಿತೈಷಿಗಳು ಒತ್ತಾಯಿಸಿದ್ದಾರೆ.