ಅಖಾಡಕ್ಕಿದ ಬಳ್ಳಾರಿ ಬುಲ್ಲೊಡು ಶ್ರೀರಾಮುಲು ಆಪ್ತಮಿತ್ರ ಜನಾರ್ದನರೆಡ್ಡಿ ಜಂಟಿ ಪ್ರಚಾರ
ಸಂಡೂರು: ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರದಿಂದ ಸಂಡೂರು ಕ್ಷೇತ್ರ ಸಂಪೂರ್ಣ ಅಭಿವೃದ್ಧಿಯಿಂದ ವಂಚಿತವಾಗಿದೆ. ಕಾಂಗ್ರೆಸ್ ಪಕ್ಷದವರ ದುರಾಡಳಿತದಿಂದ ಅಭಿವೃದ್ಧಿಯೇ ಕಾಣದ ಸಂಡೂರು ಕ್ಷೇತ್ರದ ಜನ ಕಂಗಾಲಾಗಿದ್ದಾರೆ. ಕ್ಷೇತ್ರದ ಆನೇಕ ಗ್ರಾಮಗಳ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ಬಿಜೆಪಿಯ ಹಿರಿಯ ಧುರೀಣ ಮಾಜಿ ಸಚಿವ ಶ್ರೀರಾಮುಲು ಹೇಳಿದರು.
ಸಂಡೂರು ವಿಧಾನಸಭಾ ಕ್ಷೇತ್ರದ ಯಶ್ವಂತ್ ನಗರ, ಸೋಮಲಾಪುರ, ಬಂಡ್ರಿ, ಬಂಡ್ರಿ ಗೊಲ್ಲರಹಟ್ಟಿ ಗ್ರಾಮಗಳಿಗೆ ತೆರಳಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು ಆವರ ಪರ ಪ್ರಚಾರ ಕಾರ್ಯದಲ್ಲಿ ಅವರ ಭಾಗವಹಿಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.
ಸಂಡೂರು ಕ್ಷೇತ್ರದ ಜನರಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ತುಕಾರಾಂ ಮಾಡಿಲ್ಲ, ಸಂಡೂರಿನ ಬಸ್ ನಿಲ್ದಾಣದ ಅಭಿವೃದ್ಧಿ ಮಾಡದ ತುಕಾರಾಂ ಕ್ಷೇತ್ರದ ಅಭಿವೃದ್ಧಿ ಏನೂ ಮಾಡ್ತಾರೆ ಎಂದು ತುಕಾರಾಂ ವಿರುದ್ಧ ವಾಗ್ದಾಳಿ ನಡೆಸಿದ ಶ್ರೀರಾಮುಲು, ಪ್ರತಿ ಸಾರಿ ಅವರು ಗೆದ್ದಿದ್ದು ಬಿಜೆಪಿಯ ಬಂಡಾಯ ಅಭ್ಯರ್ಥಿಗಳ ಲಾಭ ಪಡೆದು ಗೆದ್ದರು ವಿನಹ ಸ್ವತ ಶಕ್ತಿಯಿಂದ ಗೆದ್ದಿಲ್ಲ. ಈ ಬಾರಿ ಭಾರತೀಯ ಜನತಾ ಪಾರ್ಟಿಯ ಎಲ್ಲಾ ನಾಯಕರು ಎಲ್ಲಾ ಕಾರ್ಯಕರ್ತರು ಕ್ಷೇತ್ರದ ಮತದಾರರು ಒಗ್ಗಟ್ಟಾಗಿದ್ದಾರೆ. ಬಿಜೆಪಿ ಪಕ್ಷಕ್ಕೆ ಕ್ಷೇತ್ರದೆಲ್ಲೆಡೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ, ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತುರವರ ಗೆಲುವು ಖಚಿತ ಎಂದು ನಿನ್ನೆ ನಡೆದ ನಾಮಪತ್ರ ಸಲ್ಲಿಕೆಯ ರೋಡ್ ಶೋ ನಲ್ಲಿ ಸೇರಿದ್ದ ಜನಸ್ತೋಮವೇ ಸಾಕ್ಷಿ ಎಂದು ಶ್ರೀರಾಮುಲು ಹೇಳಿದರು. ಇನ್ನು ಮುಂದೆ ತುಕಾರಾಂ ಆಟ ನಡೆಯಲ್ಲ, ಕುಟುಂಬ ರಾಜಕಾರಣಕ್ಕೆ ಜನ ತಕ್ಕಪಾಠ ಕಲಿಸಲು ಸಿದ್ದರಾಗಿದ್ದಾರೆ. ಲಾಡ್ ಹಾಗೂ ತುಕಾರಾಂ ಡ್ರಾಮ ಕಂಪನಿಯ ಆಟ ಬಂದ್ ಆಗಲಿದೆ ಎಂದ ಅವರು, ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ವಿಜಯಭೇರಿ ಬಾರಿಸುವುದು ನಿಶ್ಚಿತ ಕಾಂಗ್ರೆಸ್ ಸೋಲುವುದು ಖಚಿತ ಎಂದು ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀರಾಮುಲು ಜನಾರ್ದನರೆಡ್ಡಿ ಜಂಟಿಯಾಗಿ ಪ್ರಚಾರದ ಅಖಾಡಕ್ಕೆ ಇಳಿದ್ದು, ಶ್ರೀರಾಮುಲು ಇಂದು ಪ್ರಚಾರಕ್ಕೆ ಧುಮುಕಿರುವುದು ಬಿಜೆಪಿ ಕಾರ್ಯಕರ್ತರಲ್ಲಿ ಉತ್ಸಾಹ ಮನೆ ಮಾಡಿದ್ದು, ಸಂಡೂರು ಉಪ ಚುನಾವಣೆ ಮತ್ತಷ್ಟು ರಂಗೇರಿದೆ ಎಂದು ಹೇಳಬಹುದು.
ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಬಂಗಾರು ಹನುಮಂತು, ಸಂಡೂರು ಚುನಾವಣಾ ಸಹ ಉಸ್ತುವಾರಿಗಳಾದ ನವೀನ್ ಕೊಟ್ಟಿಗೆ, ರಾಜ್ಯ ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ ಹಾಗೂ ಮುಖಂಡರಾದ ಪಾಪಣ್ಣ ಇನ್ನಿತರ ಗ್ರಾಮಗಳ ಹಿರಿಯರು, ಪ್ರಮುಖರು, ಪಕ್ಷದ ಮುಖಂಡರು ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.