ಸೋಮಶೇಖರ್ ರೆಡ್ಡಿ ಅಂಗಡಿ ಖಾಲಿ ಖಾಲಿ

ಸೋಮಶೇಖರ್ ರೆಡ್ಡಿ ಅಂಗಡಿ ಖಾಲಿ ಖಾಲಿ

ಬಳ್ಳಾರಿ: ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಬೆಂಬಲಿಗರು ದಿನೇ ದಿನೆ ರೆಡ್ಡಿ ಅಂಗಡಿ ಖಾಲಿ ಮಾಡಿ ಬೇರೆ ಬೇರೆ ಪಕ್ಷಕ್ಕೆ ಸೇರಿಕೊಳ್ತಿದ್ದಾರೆ.


ಆದೇ ಸಾಲಿನಲ್ಲಿ ಇಂದು ನಾರಾ ಸೂರ್ಯನಾರಾಯಣ ರೆಡ್ಡಿಯವರ ಕಛೇರಿಯಲ್ಲಿ ಬಿಜೆಪಿಯ ಸಂದೀಪ್ ರೆಡ್ಡಿ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುವ ಮೂಲಕ ಸೋಮಶೇಖರ್ ರೆಡ್ಡಿಗೆ ಶಾಕ್ ಕೊಟ್ಟಿದ್ದಾರೆ.

ನಿನ್ನೆ ಇದೇ ಸೋಮಶೇಖರ್ ರೆಡ್ಡಿಯ ಕಟ್ಟಾ ಬೆಂಬಲಿಗರಾದ ಹನುಮೇಶ್ ಉಪ್ಪಾರ್ ಹಾಗೂ ರಘು ಕೆಆರ್ ಪಿಪಿ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಪ್ರವೀಣ್ ರೆಡ್ಡಿ, ಹುಂಡೇಕರ್ ರಾಜೇಶ್, ಹೀಗೆ ಸಾಲು ಸಾಲು ಸೋಮಶೇಖರ್ ರೆಡ್ಡಿ ಬೆಂಬಲಿಗರು ರೆಡ್ಡಿಯ ಸಖ್ಯ ಬಿಟ್ಟು ಬೇರೆ ಬೇರೆ ಪಕ್ಷಕ್ಕೆ ಸೇರ್ಪಡೆಯಾಗುವುದರ ಮೂಲಕ ಸಂಪೂರ್ಣವಾಗಿ ಸೋಮಶೇಖರ್ ರೆಡ್ಡಿ ಅಂಗಡಿ ಖಾಲಿ ಆದಂತಿದೆ.