ಬಳ್ಳಾರಿ: ಅಹೋ ರಾತ್ರಿ ವಕ್ಘ್ ಕಛೇರಿಯ ಮುಂದೆ ಧರಣಿ!
ಬಳ್ಳಾರಿ: (ಜಾಗೃತಿ ಕಿರಣ) ನಗರದ ಕೌಲ್ ಬಜಾರ್ ಪ್ರದೇಶದ ಮೊಹಮ್ಮದೀಯ ಶಾಲೆಯ ಬಳಿ ಇರುವ ಜಿಲ್ಲಾ ವಕ್ಘ್ ಸಲಹಾ ಸಮಿತಿಯ ಕಛೇರಿ ಮುಂದೆ ಮುಸ್ಲಿಂ ಸಮುದಾಯದ ಮುಖಂಡರು ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಅಗ್ರಹಿಸಿ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಸಿದ್ದಾರೆ.
ಇಂದು ಬೆಳಿಗ್ಗೆಯಿಂದ ಎಂ.ಎ.ಕೆ ವೆಲ್ ಫೇರ್ ಟ್ರಸ್ಟ್ ನೇತೃತ್ವದಲ್ಲಿ ಈ ಪತ್ರಿಭಟನೆಯು ನಡೆಯುತ್ತಿದ್ದು ಟ್ರಸ್ಟ್ ನ ಮುಖ್ಯಸ್ಥ ಮೆಹಫೂಸ್ ಅಲಿಖಾನ್ ಮಾತನಾಡಿ ನಾವು ಕಳೆದ ತಿಂಗಳು ಪತ್ರಿಭಟನೆ ನಡೆಸಿ ನಮ್ಮ ವಿವಿಧ ಬೇಡಿಕೆಗಳನ್ನ ಈಡೇರಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು. ಇದರ ಪ್ರತಿಯಾಗಿ ವಕ್ಘ್ ಜಿಲ್ಲಾ ವಕ್ಘ್ ಸಲಹಾ ಸಮಿತಿಯ ಅದ್ಯಕ್ಷ ಹುಮಾಯೂನ್ ಖಾನ್ ರವರು ಮನವಿಯನ್ನ ಆಲಿಸಿ ಸಮಸ್ಯೆಗಳನ್ನ ಶೀಘ್ರದಲ್ಲಿ ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ನಮ್ಮ ಮನವಿಗೆ ಇವತ್ತಿಗೂ ಲಿಖಿತ ರೂಪದಲ್ಲಿ ಯಾವುದೇ ಭರವಸೆ ನೀಡಿರುವುದಿಲ್ಲ ಎಂದು ಆರೋಪಿಸಿದರಲ್ಲದೇ, ನಮ್ಮ ಸಮುದಾಯದ ಹಲವು ಸಂಸ್ಥೆಗಳು ವಕ್ಘ್ ನ ಅಧೀನಾದಲ್ಲಿದ್ದು ಆ ಸಂಸ್ಥೆಗಳಿಗೆ ಕಮಿಟಿಗಳನ್ನ ಮಾಡದೇ ಹಲವಾರು ವರ್ಷಗಳಿಂದ ಆಡಳಿತಾಧಿಕಾರಿಗಳನ್ನೆ ಮುಂದೆವರೆಸಿರುವುದು ಸಮುದಾಯದಕ್ಕೆ ವಂಚಿಸಿದಂತಾಗಿದೆ. ಸಮುದಾಯದ ವಿವಿಧ ಸಂಸ್ಥೆಗಳಿಗೆ ನೇಮಿಸಿರುವ ಆಡಳಿತಾಧಿಕಾರಿಗಳನ್ನ ರದ್ದು ಪಡಿಸಿ ಕಮಿಟಿಗಳನ್ನ ರಚಿಸಲು ಕ್ರಮವಹಿಸಬೇಕು ಮತ್ತು ಕಳೆದ ಆರು ತಿಂಗಳಿಂದ ಜಿಲ್ಲಾ ವಕ್ಘ್ ಅಧಿಕಾರಿಯ ನೇಮಕ ಮಾಡದೆ ಇರುವುದು ಸಮುದಾಯದ ಸಮಸ್ಯೆಗಳನ್ನ ಆಲಿಸುವವರಿಲ್ಲದೆ ಪತ್ರಿ ದಿನ ಮಸೀದಿ, ದರ್ಗಾ ಕಮಿಟಿಗಳ ಸದಸ್ಯರು ಕಛೇರಿಗೆ ಅಲೆಯುವಂತ ಪರಿಸ್ಥಿತಿ ಸೃಷ್ಟಿಯಾಗಿದ್ದು ಯಜಮಾನನಿಲ್ಲದ ಮನೆಯಂತಾಗಿದೆ ಬಳ್ಳಾರಿ ಜಿಲ್ಲಾ ವಕ್ಘ್ ಕಛೇರಿ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಕ್ಘ್ ಸಲಹಾ ಸಮಿತಿಯ ಮಾಜಿ ಅದ್ಯಕ್ಷರಾದ ಖುದ್ದುಸ್ ಮೌಲಾನಾ ರವರು ಮಾತನಾಡಿ ಈದ್ಗಾಕ್ಕೆ ಆಡಳಿತಾಧಿಕಾರಿಯನ್ನಾಗಿ ಶಕೀಬ್ ರನ್ನ ನೇಮಿಸಲಾಗಿತ್ತು. ಈದ್ಗಾಗೆ ಆಡಳಿತ ಕಮಿಟಿಯನ್ನ ಮಾಡಲು ರಾಜ್ಯ ವಕ್ಘ್ ಮಂಡಳಿ ಸೂಚನೆ ಮೇರೆಗೆ ಶಕೀಬ್ ರವರು ಮಸೀದಿಗಳಲ್ಲಿ ಈ ಕುರಿತು ತಿಳಿಸಿ ಬಳ್ಳಾರಿ ನಗರದ ಎಲ್ಲಾ ಪ್ರದೇಶಗಳಿಂದ ಸಮುದಾಯದವರಿಂದ ಸದಸ್ಯತ್ವ ಪಡೆದು ಸದಸ್ಯತ್ವದ ಹಣ ಮತ್ತು ಸದಸ್ಯತ್ವದ ಅರ್ಜಿಗಳನ್ನ ವಕ್ಘ್ ಕಛೇರಿಗೆ ಕೊಡದೆ ಸದಸ್ಯತ್ವದ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ಅವರ ವಿರುದ್ದ ಕಾನೂನು ಕ್ರಮ ಜರುಗಿಬೇಕೆಂದು ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ. ಇಲ್ಲಿ ಕಳೆದ ಆರು ತಿಂಗಳಿಂದ ವಕ್ಘ ಅಧಿಕಾರಿಯೇ ಇಲ್ಲದಿರುವುದರಿಂದ ಪತ್ರಿಭಟನಾ ನಿರತರ ಮನವಿ ಸ್ವಿಕರಿಸುವವರಿಲ್ಲದಂತಾಗಿದ್ದು ಅದ್ಯಕ್ಷ ಹುಮಾಯೂನ್ ಖಾನ್ ರವರಿಗೆ ಕರೆ ಮಾಡಿದರೆ ಬೆಂಗಳೂರಿನಲ್ಲಿರುವುದಾಗಿ ತಿಳಿಸಿರುವುದರಿಂದ ಮನವಿ ಸ್ವಿಕರಿಸುವವರಿಲ್ಲದ ಪರಿಸ್ಥಿತಿ ನಿರ್ಮಾಣವಾದ್ದರಿಂದ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಸಿದ್ದೇವೆಂದು ಪತ್ರಿಭಟನಕಾರರು ದೂರಿದರು. ಈ ಸಂದರ್ಭದಲ್ಲಿ ಟ್ರಸ್ಟ್ ನ ಮುಖ್ಯಸ್ಥ ಮಹೆಫೂಸ್ ಅಲಿಖಾನ್, ವಕ್ಘ್ ಬೋರ್ಡ್ ನ ಮಾಜಿ ಅದ್ಯಕ್ಷ ಖುದ್ದುಸ್ ಮೌಲಾನಾ, ಸುನಾರ್ ಅಜೀಮ್, ಗೌಸ್, ಸುಫೀಯಾನ್, ಖಧೀರ್, ಅಬ್ದುಲ್ ರಜಾಕ್, ಬಂಡಿಮೋಟ್ ಫಾರೂಕ್, ಜಹೀರ್, ಇಕ್ಬಾಲ್, ಅಶ್ವಾಖ್, ಖಲಿಲ್, ಷಾಷ, ದಾದ ಸಲ್ಮಾನ್, ಹಸೇನ್, ಇನ್ನಿತರರು ಉಪಸ್ಥಿತರಿದ್ದರು.