ನನ್ನ ತಾಯಿಯನ್ನ ಗೆಲ್ಲಿಸಲು ನಿಮ್ಮ ಬಳಿ ಮತ ಬಿಕ್ಷೆಗೆ ಬಂದಿದ್ದೇನೆ :- ಬ್ರಹ್ಮೀಣಿ
ಬಳ್ಳಾರಿ:(ಜಾಗೃತಿ ಕಿರಣ ನ್ಯೂಸ್) ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ - ಬಿಜೆಪಿಯ ಘಟಾನೂಘಟಿಗಳ ಮಧ್ಯೆ ಒಂದು ಹೆಣ್ಣು ಹೋರಾಟಕ್ಕೆ ಧುಮುಕಿದ್ದಾಳೆ. ಒಂದು ಹೆಣ್ಣು ಮಗಳಾಗಿ, ತಾಯಿಯಾಗಿ, ಮಡದಿ, ಗೆಳತಿಯಾಗಿ, ಅಕ್ಕ-ತಂಗಿಯಾಗಿ ಎಲ್ಲಾರ ಮನೆ ಮನಗಳನ್ನು ಬೆಳಗುತ್ತಾಳೆ ಹಾಗೆ ಈ ಬಳ್ಳಾರಿಯ ಬೆಳಕಿಗಾಗಿ ಈ ಬಳ್ಳಾರಿಯ ಅಭಿವೃದ್ಧಿಗಾಗಿ ಈ ಬಳ್ಳಾರಿಗರ ಸುಂದರ ಬದುಕಿಗಾಗಿ ನನ್ನ ತಾಯಿ ಲಕ್ಷ್ಮೀ ಅರುಣಾರನ್ನ ಗೆಲ್ಲಿಸಿ ಎಂದು ಜನಾರ್ಧನರೆಡ್ಡಿ ಪುತ್ರಿ ಬ್ರಹ್ಮೀಣಿ ಹೇಳಿದ್ದಾರೆ.
ಅವರು ನಿನ್ನೆ ಸಾಯಂಕಾಲ ದೇವಿನಗರ, ಕಪ್ಪಗಲ್ ರಸ್ತೆ, ಹೊಸ ಬಸ್ಟಾಂಡ್ ಹತ್ತಿರ, ಮಿಲ್ಲರ್ ಪೇಟೆ ಭಾಗಗಳಲ್ಲಿ ನಗರ ವಿಧಾನಸಭಾ ಕ್ಷೇತ್ರದ ಕೆಆರ್ ಪಿಪಿ ಪಕ್ಷದ ಅಭ್ಯರ್ಥಿ ಹಾಗೂ ಅವರ ತಾಯಿ ಅರುಣಾ ಲಕ್ಷ್ಮೀ ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ - ಬಿಜೆಪಿಯ ದುರಾಡಳಿತವನ್ನ ನೋಡಿದ್ದೀರಿ ನನ್ನ ತಂದೆ ಬಳ್ಳಾರಿಯಲ್ಲಿದ್ದಾಗ ಆದ ಅಭಿವೃದ್ಧಿ ಬಿಟ್ಟರೆ, ಅವರು ಹೋದಾಗಿನಿಂದ ಬಳ್ಳಾರಿ ಅಭಿವೃದ್ಧಿ ಶ್ಯೂನವಾಗಿದೆ. ನಗರದ ಜನತೆಗೆ ಕನಿಷ್ಟ ಮೂಲಭೂತ ಸೌಕರ್ಯ ಒದಗಿಸಲಾಗದ ಬಿಜೆಪಿ-ಕಾಂಗ್ರೆಸ್ ಬೇಕಾ ಎಂದು ಪ್ರಶ್ನಿಸಿದ ಅವರು ಈ ಬಾರಿ ಒಂದೇ ಒಂದು ಅವಕಾಶ ನನ್ನ ತಾಯಿಗೆ ಕೊಡಿ ನಿಮ್ಮೆಲ್ಲರ ಸೇವೆ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ. ಎಂದು ಮತದಾರರಲ್ಲಿ ಮನವಿ ಮಾಡಿದರು.
ಬಳ್ಳಾರಿಯ ಇತಿಹಾಸದಲ್ಲಿ ಮಹಿಳೆಗೆ ಅವಕಾಶ ಸಿಕ್ಕಿರಲಿಲ್ಲ ಹಾಗಾಗಿ ಈ ಬಾರಿ ಒಬ್ಬ ಮಹಿಳೆಗೆ ಶಾಸಕಿಯಾಗಿ ಆಯ್ಕೆ ಮಾಡುವ ಸುವರ್ಣ ಅವಕಾಶ ಒದಗಿಬಂದಿದೆ, ಇದನ್ನ ಯಾರು ಕಳೆದುಕೊಳ್ಳಬೇಡಿ ಈ ಬಾರಿ ಬಳ್ಳಾರಿಗರು ಮಹಿಳಾ ಶಾಸಕಿಯನ್ನ ಆಯ್ಕೆ ಮಾಡುವುದರ ಮೂಲಕ ಇತಿಹಾಸ ನಿರ್ಮಿಸಿ ಎಂದು ಹೇಳಿದರು.
25 ವರ್ಷದಿಂದ ನನ್ನ ತಾಯಿ ಯಾವತ್ತು ಹೊರ ಬಂದಿರಲ್ಲಿಲ್ಲ ಈಗ ನಿಮ್ಮ ಕಷ್ಟಗಳಲ್ಲಿ ಭಾಗಿಯಾಗಲು ನಿಮ್ಮ ಸೇವೆ ಮಾಡಲು ಹೊರ ಬಂದಿದ್ದಾರೆ. ಹಾಗಾಗಿ ನಿಮ್ಮೆಲ್ಲರ ಸೇವೆಗೆಂದು ನಾವು ನಿಮ್ಮ ಬಳಿ ಮತ ಬಿಕ್ಷೆಗೆ ಬಂದಿದ್ದೇವೆ ಎಂದು ಭಾವನಾತ್ಮಕವಾಗಿ ಮಾತನಾಡಿದ ಬ್ರಹ್ಮಿಣಿಯವರು ಮತದಾರರ ಮನಮುಟ್ಟುವ ರೀತಿಯಲ್ಲಿ ಮತ ಶಿಕಾರಿ ಮಾಡಿದರು.
ಈ ಹಿಂದೆ ಜನಾರ್ಧನರೆಡ್ಡಿಯವರು ಮಾಡಿದ ಅಭಿವೃದ್ಧಿ ಕೆಲಸಗಳನ್ನ ಮುಂದುವರೆಸಲು ಹಾಗೂ ಬಳ್ಳಾರಿಯ ಸರ್ವಾಂಗೀಣ ಅಭಿವೃದ್ಧಿ ಮತ್ತು ಬಡವರ ಬದುಕು ಬದಲಿಸುವ ಸಲುವಾಗಿ ಈ ಬಾರಿ ನನ್ನ ತಾಯಿ ಲಕ್ಷ್ಮೀ ಅರುಣಾರಿಗೆ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಆನೇಕ ಪ್ರದೇಶಗಳಲ್ಲಿ ಬಹಿರಂಗ ಪ್ರಚಾರ ಸಭೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದು ವಿಶೇಷವಾಗಿತ್ತು. ನೆರೆದಿದ್ದ ಸಹಸ್ರಾರು ಸಂಖ್ಯೆಯ ಜನಸ್ತೋಮ ಬ್ರಹ್ಮೀಣಿಯವರ ಮಾತುಗಳಿಗೆ ಜಯಘೋಷ ಮೊಳಗಿಸಿದರು.
ಆಂಧ್ರಪ್ರದೇಶದ ಶಾಸಕ ಕಾಪು ರಾಮಚಂದ್ರರೆಡ್ಡಿ ಸಾಥ್
ಇನ್ನು ಕೆಆರ್ ಪಿಪಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾರವರ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ವೈಎಸ್ ಆರ್ ಕಾಂಗ್ರೆಸ್ ನ ರಾಯದುರ್ಗ ಶಾಸಕ ಕಾಪು ರಾಮಚಂದ್ರ ರೆಡ್ಡಿ ಭಾಗವಹಿಸಿ ಮಹಿಳೆಯರಲ್ಲಿ ಮತಯಾಚಿಸಿದರು ಬಹಿರಂಗ ಸಭೆಯ ವಾಹನ ಹತ್ತದೆ ಜನಸಾಮಾನ್ಯರ ಮಧ್ಯೆದಲ್ಲಿ ನಿಂತು ಮಹಿಳೆಯರಿಗೆ ಅರುಣಾ ಲಕ್ಷ್ಮೀ ಪರ ಪತ ಯಾಚಿಸಿ ಬ್ರಹ್ಮೀಣಿಯವರ ಮಾತುಗಳನ್ನ ಆಲಿಸಿ ಸಾಮಾನ್ಯರಂತೆ ನಿಂತಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಗೋನಾಳ ರಾಜಶೇಖರ ಗೌಡ, ದರೂರು ಶಾಂತನಗೌಡ, ವೆಂಕಟರಮಣ, ಕೊನಂಕೀ ತಿಲಕ್, ಪರ್ವೀನ್ ಬಾನು, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಶ್ರೀಮತಿ ಹೇಮಲತ, ಸುಪುತ್ರಿ ಬ್ರಹ್ಮಿಣಿ ಸೇರಿದಂತೆ ಆನೇಕರು ಮುಖಂಡರು ಪಕ್ಷದ ಕಾರ್ಯಕರ್ತರು ಮಹಿಳೆಯರು ಭಾಗವಹಿಸಿದ್ದರು.