ಸಚಿವ ಶ್ರೀರಾಮುಲುಗೆ ಅದ್ಧೂರಿ ಸ್ವಾಗತ!
ನಿನ್ನೆ ಬೆಂಗಳೂರಿನಲ್ಲಿ ವಾಲ್ಮೀಕಿ ಜಯಂತಿಯ ಸರ್ಕಾರಿ ಕಾರ್ಯಕ್ರಮ ಮುಗಿಸಿಕೊಂಡು ಬಳ್ಳಾರಿಗೆ ಆಂಧ್ರದ ಅನಂತಪುರ ಮೂಲಕ ಬಂದ ಸಚಿವ ಶ್ರೀರಾಮುಲು ಅವರನ್ನು ಜಿಲ್ಲೆಯ ಗಡಿ ಭಾಗದಿಂದಲೇ ಸ್ವಾಗತಿಸಲು ಅಭಿಮಾನಿಗಳು ಭರ್ಜರಿ ಸಿದ್ದತೆಯನ್ನ ಮಾಡಿಕೊಂಡು ನಿನ್ನೆ ಮಧ್ಯಾಹ್ನ ಮೂರು ಗಂಟೆಯಿಂದಲೇ ಕಾದು ನಿಂತಿದ್ದರು. ಸಂಜೆ ಜಿಟಿ ಜಿಟಿ ಮಳೆ ಆರಂಭವಾದರು ಅಭಿಮಾನಿಗಳು ನೆಚ್ಚಿನ ನಾಯಕನ ಬರಮಾಡಿಕೊಳ್ಳಲು ಮಳೆಯನ್ನು ಲೆಕ್ಕಿಸದೆ ಕಾದು ನಿಂತಿದ್ದು ವಿಶೇಷ.
ಇನ್ನು ಬಳ್ಳಾರಿ ಹೊರವಲಯ ಬಿಸಿಲಹಳ್ಳಿಯಲ್ಲಿ ಸಾವಿರಾರು ಜನ ಅಭಿಮಾನಿಗಳು ನೆರೆದಿದ್ದರು. ಇನ್ನು ಚೇಳ್ಳಗುರ್ಕಿಯ ಬಳಿ ಸಚಿವ ಶ್ರೀರಾಮುಲು ಅವರನ್ನು ಗ್ರಾಮಾಂತರ ಪ್ರದೇಶದ ನೂರಾರು ಕಾರ್ಯಕರ್ತರು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿ ಶ್ರೀರಾಮುಲು ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಹರ್ಷೋದ್ಗಾರಗೈದರು.
ಚೇಳ್ಳಗುರ್ಕಿಯ ಶ್ರೀ ಎರ್ರಿತಾತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಬಳ್ಳಾರಿ ತಲುಪುವವರೆಗೂ ಮಾರ್ಗ ಮಧ್ಯೆ ಬರುವ ಎಲ್ಲ ಗ್ರಾಮಗಳಲ್ಲೂ ಕೂಡ ಸಚಿವ ಶ್ರೀರಾಮುಲು ಅವರಿಗೆ ಹೂವಿನ ಸುರಿಮಳೆಗೈದು ಸ್ವಾಗತಿಸಿದ್ದು ವಿಶೇಷವಾಗಿತ್ತು. ಚೇಳ್ಳಗುರ್ಕಿಯಿಂದ ಬಳ್ಳಾರಿಯ ಎಸ್ಪಿ ಸರ್ಕಲ್ ವರೆಗೆ ಬೈಕ್ ರ್ಯಾಲಿ ನಡೆಸಲಾಯಿತು. ಬಳ್ಳಾರಿ ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಬಳಿ ಅಭಿಮಾನಿಗಳು ಸೇಬು ಹಣ್ಣಿನ ಬೃಹತ್ ಹಾರ ಹಾಕಿದರು. ಕನಕದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಿದ ನಂತರ ಎಸ್ಪಿ ಸರ್ಕಲ್ ನಲ್ಲಿ ಆಯೋಜಿಸಲಾಗಿದ್ದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶ್ರೀರಾಮುಲು ಭಾಗಿಯಾದರು.
ಬುಡಾ ಮಾಜಿ ಅಧ್ಯಕ್ಷ ಪಿ.ಪಾಲನ್ನ, ಪಾಲಿಕೆ ಸದಸ್ಯ ಗೋವಿಂದರಾಜುಲು, ಶ್ರೀನಿವಾಸ್ ಮೋತ್ಕರ್, ಇಬ್ರಾಹಿಂಬಾಬು ಅವರು ಬೈಕ್ ರ್ಯಾಲಿಯ ನೇತೃತ್ವ ವಹಿಸಿದ್ದರು.