ಬಳ್ಳಾರಿ: ಬಟ್ಟೆ ಬಿಚ್ಚಿ ವಕ್ಘ್ ವಿರುದ್ದ ಹೋರಾಟಕ್ಕೆ ಇಳಿದ ಮಾಜಿ ಅದ್ಯಕ್ಷ ರಿಜ್ವಾನ್
ಬಳ್ಳಾರಿ: ನಗರದ ಜಿಲ್ಲಾ ವಕ್ಘ್ ಸಲಹಾ ಸಮಿತಿಯ ಕಛೇರಿ ಮುಂದೆ ವಕ್ಘ್ ಬೋರ್ಡ್ ನ ಮಾಜಿ ಅದ್ಯಕ್ಷರೊಬ್ಬರು ಬಟ್ಟೆ ಬಿಚ್ಚಿ ಪ್ರತಿಭಟನೆಗೆ ಕೂತಿದ್ದಾರೆ.
ಬಳ್ಳಾರಿ ನಗರದ ವಕ್ಘ್ ಅಧೀನದಲ್ಲಿರುವ ಆನೇಕ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನ ನೇಮಿಸಿದ್ದು ಹಲವಾರು ವರ್ಷಗಳಿಂದ ಕಮಿಟಿಗಳು ಮಾಡದೇ ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿ ಆಡಳಿತಾಧಿಕಾರಿಗಳನ್ನ ತೆಗೆದು ಸಾರ್ವಜನಿಕ ಕಮಿಟಿಗಳನ್ನ ಮಾಡಲು ಒತ್ತಾಯಿಸಿ ವಕ್ಘ್ ಬೋರ್ಡ್ ನ ಮಾಜಿ ಅದ್ಯಕ್ಷ ರಿಜ್ವಾನ್ ಉಮರ್ ಬಟ್ಟೆ ಬಿಚ್ಚಿ ಪ್ರತಿಭಟನೆಗೆ ಇಳಿದ್ದಾರೆ.
ಈ ಸಂದರ್ಭದಲ್ಲಿ mak ಸಂಸ್ಥೆಯ ಸಂಸ್ಥಾಪಕರಾದ ಮೆಹಫೂಜ್ ಅಲಿಖಾನ್, ಮುನ್ನಾಭಾಯ್, ವಕ್ಘ್ ಬೋರ್ಡ್ ನ ಮಾಜಿ ಅದ್ಯಕ್ಷ ಖುದ್ದೂಸ್ ಸಾಹೇಬ್, ಸುನಾರ್ ಅಜೀಮ್, ಇನ್ನು ಆನೇಕರು ಉಪಸ್ಥಿತರಿದ್ದರು.